ಕನ್ನಡ ರ್ಯಾಪ್ ಗಾಯಕ ಚಂದನ್‍ಶೆಟ್ಟಿ ಜೊತೆ ಬಿಗ್ ಬಾಸ್ ಖ್ಯಾತಿಯ ನಿವೇದಿತಾಗೌಡ ನಿಶ್ಚಿತಾರ್ಥ
ಮೈಸೂರು

ಕನ್ನಡ ರ್ಯಾಪ್ ಗಾಯಕ ಚಂದನ್‍ಶೆಟ್ಟಿ ಜೊತೆ ಬಿಗ್ ಬಾಸ್ ಖ್ಯಾತಿಯ ನಿವೇದಿತಾಗೌಡ ನಿಶ್ಚಿತಾರ್ಥ

October 22, 2019

ಮೈಸೂರು, ಅ.21(ಪಿಎಂ)- ಯುವ ದಸರಾ ವೇದಿಕೆಯಲ್ಲಿ ಬಿಗ್‍ಬಾಸ್ ಖ್ಯಾತಿಯ ನಿವೇದಿತಾಗೌಡರಿಗೆ ರಿಂಗ್ ತೊಡಿಸಿ ಪ್ರೇಮ ನಿವೇದನೆ ಮಾಡಿ ವಿವಾದದ ಅಲೆ ಎಬ್ಬಿಸಿದ್ದ ಕನ್ನಡದ ರ್ಯಾಪ್ ಗಾಯಕ ಚಂದನ್ ಶೆಟ್ಟಿ ಸೋಮ ವಾರ ನಿಶ್ಚಿತಾರ್ಥದ ರಿಂಗ್ ತೊಡಿಸಿ ವಿವಾಹ ಮಹೋ ತ್ಸವಕ್ಕೆ ಮುನ್ನುಡಿ ಬರೆದಿದ್ದಾರೆ.

ಸರ್ಕಾರಿ ಪ್ರಾಯೋಜಿತ ಯುವ ದಸರಾದ ವೇದಿಕೆ ಯಲ್ಲಿ ರಿಂಗ್ ತೊಡಿಸಿ ಪ್ರೇಮ ನಿವೇದನೆ ಮಾಡಿ ಪರ-ವಿರೋಧದ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದ ಜೋಡಿ ಇದೀಗ ಸತಿಪತಿಗಳಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಕುಟುಂಬದವರು, ನಂಟರಿಸ್ಟರು ಹಾಗೂ ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿತು.

ನಿವೇದಿತಾಗೌಡ ಅವರು ತಿಳಿ ಹಸಿರು ಬಣ್ಣದ ಸೀರೆ ಸೇರಿದಂತೆ ವಿವಿಧ ವಸ್ತ್ರಾ ಭರಣಗಳಿಂದ ಕಂಗೊಳಿಸಿದರೆ, ಚಂದನ್ ಶೆಟ್ಟಿ ಬಿಳಿ ಬಣ್ಣದ ಶರ್ಟ್, ಕಪ್ಪು ಪ್ಯಾಂಟ್ ಸೇರಿ ನಾನಾ ವಿಧದ ಉಡುಪು ಧರಿಸಿ ಕಾಣಿಸಿಕೊಂಡರು. ಈ ಜೋಡಿ ಪರಸ್ಪರ ರಿಂಗ್‍ಗಳನ್ನು ಬದಲಾಯಿಸಿಕೊಂಡು ಸಂಭ್ರಮಿಸಿತು. ಚಂದನ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ. ಚಂದನ್ ಯುವ ದಸರಾದಲ್ಲಿ ಪ್ರಪೋಸ್ ಮಾಡಿದ್ದರು. ಮನೆಯವರು ಒಪ್ಪಿ, ಇಂದು ನಿಶ್ಚಿತಾರ್ಥ ನೆರವೇರಿಸಿದ್ದಾರೆ ಎಂದು ನಿವೇದಿತಾ ಗೌಡ ಸಂತಸ ವ್ಯಕ್ತಪಡಿಸಿದರು. ಬಿಗ್ ಬಾಸ್ 5ನೇ ಆವೃತ್ತಿಯ ಸ್ಪರ್ಧಿಗಳಾ ಗಿದ್ದ ಚಂದನ್ ಹಾಗೂ ನಿವೇದಿತಾ, ಸ್ಪರ್ಧೆ ಮುಗಿದ ಬಳಿಕ ಆತ್ಮೀಯರಾಗಿದ್ದಾರೆ. ಇವರಿಬ್ಬರು ಜೀವನ ಜೋಡಿಗಳಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.

Translate »