ಅರಣ್ಯ ವನ್ಯಜೀವಿ ಸಂಪತ್ತು ರಕ್ಷಣೆಯಲ್ಲೂ ಪೊಲೀಸರ ಸಹಕಾರ
ಮೈಸೂರು

ಅರಣ್ಯ ವನ್ಯಜೀವಿ ಸಂಪತ್ತು ರಕ್ಷಣೆಯಲ್ಲೂ ಪೊಲೀಸರ ಸಹಕಾರ

October 22, 2019

ಮೈಸೂರು, ಅ. 21(ಆರ್‍ಕೆ)- ಅರಣ್ಯ, ವನ್ಯಜೀವಿ ಸಂಪತ್ತಿನ ರಕ್ಷಣೆಯಲ್ಲೂ ಪೊಲೀ ಸರು ಸಹಕರಿಸುತ್ತಿದ್ದಾರೆ ಎಂದು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಇಂದಿಲ್ಲಿ ಶ್ಲಾಘಿಸಿದ್ದಾರೆ.

ಮೈಸೂರು ನಗರ, ಜಿಲ್ಲಾ ಪೊಲೀಸ್, ಕೆಎಸ್‍ಆರ್‍ಪಿ ಮತ್ತು ಕೆಎಆರ್‍ಪಿ ಘಟಕ ಗಳ ಸಂಯುಕ್ತಾಶ್ರಯದಲ್ಲಿ ನಜರ್‍ಬಾದಿನ ಎಸ್ಪಿ ಆಫೀಸ್ ಪಕ್ಕದಲ್ಲಿರುವ ಹುತಾತ್ಮರ ಸ್ಮಾರಕ ಉದ್ಯಾನವನದಲ್ಲಿ ಇಂದು ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಅವರು, ಹುತಾತ್ಮ ಪೊಲೀಸರ ಸ್ಮಾರಕಕ್ಕೆ ರೀತ್ ಸಮರ್ಪಿ ಸಿದ ನಂತರ ಮಾತನಾಡುತ್ತಿದ್ದರು.

ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡಿ, ಕೋಮು ಗಲಭೆ, ಭಯೋತ್ಪಾ ದನೆಗಳಂತಹ ಕೃತ್ಯಗಳನ್ನು ನಿಗ್ರಹಿಸುವ ಜತೆಗೆ ನೈಸರ್ಗಿಕ ವಿಪತ್ತು ನಿರ್ವಹಣೆ ಹಾಗೂ ಅರಣ್ಯ-ವನ್ಯಜೀವಿ ಸಂಪತ್ತು ರಕ್ಷಣೆಯಲ್ಲೂ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಗಳೊಂದಿಗೆ ಪೊಲೀಸರು ನೆರವಾಗುತ್ತಿರು ವುದು ಶ್ಲಾಘನೀಯ ಎಂದು ನುಡಿದರು.

ಕಳೆದೊಂದು ವರ್ಷದಲ್ಲಿ 292 ಮಂದಿ ಸೇರಿ ದಂತೆ ಈವರೆಗೆ ದೇಶದಲ್ಲಿ ಕರ್ತವ್ಯದಲ್ಲಿ ದ್ದಾಗ ಒಟ್ಟು 34,710 ಮಂದಿ ಪೊಲೀಸರು ಮೃತಪಟ್ಟಿದ್ದಾರೆ. 1 ಲಕ್ಷ ಜನಸಂಖ್ಯೆಗೆ 222 ಮಂದಿ ಪೊಲೀಸರಿರಬೇಕಾದ ಜಾಗದಲ್ಲಿ ಕೇವಲ 132 ಮಂದಿ ಪೊಲೀಸರು ಕೆಲಸ ನಿರ್ವಹಿಸುತ್ತಿದ್ದಾರೆ. ಸಂಖ್ಯೆಯಲ್ಲಿ ಕಡಿಮೆ ಇದ್ದರೂ, ತಮ್ಮ ಇಲಾಖೆ ಕೆಲಸದ ಜೊತೆಗೆ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ರಕ್ಷಣಾ ಕಾರ್ಯಾಚರಣೆಯಲ್ಲೂ ಪೊಲೀಸರು ಅರಣ್ಯ ಸಿಬ್ಬಂದಿಯೊಂದಿಗೆ ಸಹಕರಿಸುತ್ತಿದ್ದಾ ರಲ್ಲದೆ, ಮಾನವ ಪ್ರಾಣಿ ಸಂಘರ್ಷ ತಡೆಯು ವಲ್ಲೂ ಅವರ ಪಾತ್ರ ಅಮೂಲ್ಯವಾದುದು ಎಂದರು. ದಕ್ಷಿಣ ವಲಯದ ಐಜಿಪಿ ವಿಫುಲ್ ಕುಮಾರ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಎಸ್ಪಿ ಸಿಬಿ ರಿಷ್ಯಂತ್, ಎಎಸ್ಪಿ ಸ್ನೇಹಾ, ಕೆಪಿಎ ಉಪನಿರ್ದೇಶಕ ಸುಧೀರ್ ಕುಮಾರ್ ರೆಡ್ಡಿ, ಕೆಎಸ್‍ಆರ್‍ಪಿ ಕಮಾಂ ಡೆಂಟ್ ರಘುನಾಥ, ಮೈಸೂರು ಗ್ರಾಮಾಂ ತರ ಉಪ ವಿಭಾಗದ ಎಎಸ್ಪಿ ಕ್ಷಮಾ ಮಿತ್ರ, ಡಿಸಿಪಿಗಳಾದ ಎಂ.ಮುತ್ತುರಾಜ್, ಬಿ.ಟಿ. ಕವಿತಾ, ಎಸಿಪಿಗಳಾದ ಎಂ.ಪಿ.ಲೋಕೇಶ್, ಆರ್‍ಪಿಐ ಎ.ಜಿ.ಅಶೋಕ್‍ಕುಮಾರ್, ಪಾಲಿಕೆ ವಲಯಾಧಿಕಾರಿ ಹೆಚ್.ಆರ್.ಮುರಳೀ ಧರ್, ಪಿಎಸ್‍ಐ ಭವ್ಯ, ಎಆರ್‍ಎಸ್‍ಐ ಶಂಕರ್, ಹೆಡ್ ಕಾನ್‍ಸ್ಟೇಬಲ್ ವಿ.ವೆಂಕ ಟೇಶ, ಕಾನಸ್ಟೇಬಲ್ ನಾಗೇಶ, ಎಂ.ಆರ್. ಶ್ರೀನಿವಾಸ ಅವರು ಹುತಾತ್ಮರ ಸ್ಮಾರಕಕ್ಕೆ ರೀತ್ ಸಮರ್ಪಿಸಿದರು. ನಿವೃತ್ತ ಪೊಲೀಸ್ ಅಧಿಕಾರಿಗಳ ಪರವಾಗಿ ಬಿಎಂ. ನಾಣಯ್ಯ, ಬಿ.ರಾಮಮೂರ್ತಿ, ಮಾಧ್ಯಮದ ಪರವಾಗಿ `ಮೈಸೂರು ಮಿತ್ರ’ನ ಎಸ್.ಟಿ.ರವಿಕುಮಾರ್, ವರ್ತಮಾನ ಪತ್ರಿಕೆಯ ಎಂ.ಟಿ.ಜಯ ರಾಮ್, ಸಾರ್ವಜನಿಕರ ಪರವಾಗಿ ಶ್ರೀನಿ ವಾಸ್‍ಗಾಂಧಿ, ಡಾ.ರಮೇಶ್ ಹುತಾತ್ಮ ಪೊಲೀ ಸರಿಗೆ ಗೌರವ ನಮನ ಸಲ್ಲಿಸಿದರು. ಕರ್ನಾ ಟಕದ 12 ಮಂದಿ ಸೇರಿ 1 ವರ್ಷದಲ್ಲಿ ದೇಶಾದ್ಯಂತ ಒಟ್ಟು 292 ಪೊಲೀಸರು ಹುತಾತ್ಮರಾಗಿದ್ದು, ಎಸ್ಪಿ ರಿಷ್ಯಂತ್ ಅವರು ಹುತಾತ್ಮರ ಹೆಸರುಗಳನ್ನು ಓದಿದರು. ಪರೇಡ್ ಕಮಾಂಡ್ ಹೆಚ್.ಪಿ.ಸತೀಶ ನೇತೃತ್ವದಲ್ಲಿ ವಾಲಿಫೈರಿಂಗ್ ಮೂಲಕ ಕವಾಯಿತು ವಂದನೆ ಸಲ್ಲಿಸಲಾಯಿತು. ಬಾಬು ಹಾಗೂ ನಂದಿನಿ ಕಾರ್ಯಕ್ರಮ ನಿರೂಪಿಸಿದರು.

Translate »