ನೇಗಿಲ ಯೋಗಿಯಿಂದ ಇಂಜಿನಿಯರ್ ಸೇವಾ ಪ್ರಶಸ್ತಿ ಪ್ರದಾನ
ಮೈಸೂರು

ನೇಗಿಲ ಯೋಗಿಯಿಂದ ಇಂಜಿನಿಯರ್ ಸೇವಾ ಪ್ರಶಸ್ತಿ ಪ್ರದಾನ

October 22, 2019

ಮೈಸೂರು,ಅ.21(ಎಂಕೆ)-ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸಾಧಕ ಇಂಜಿನಿಯರ್‍ಗಳಿಗೆ ‘ಇಂಜಿನಿಯರ್ ಸೇವಾ ಪ್ರಶಸ್ತಿ’ ಹಾಗೂ ಪ್ರತಿಭಾನ್ವಿತ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಮೈಸೂರಿನ ಕೆ.ಜಿ.ಕೊಪ್ಪಲಿನಲ್ಲಿರುವ ನೇಗಿಲಯೋಗಿ ಮರುಳೇಶ್ವರ ಸೇವಾ ಭವನ ದಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಆಯೋಜಿಸಿದ್ದ ಇಂಜಿನಿಯರ್ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಾಧವ, ಡಾ.ಆರ್. ಎಂ.ಮಹಾಲಿಂಗೇಗೌಡ, ಎಸ್.ನಾಗ ರಾಜು, ಎಂ.ಬಿ.ಮಂಜೇಗೌಡ, ಅಮರ್ ನಾಥ್ ಆರ್.ಬೋರಯ್ಯ, ಬಿ.ಎನ್. ಶೋಭಾ ಮತ್ತು ಎಂ.ಬಿ.ಇಂದ್ರೇಶ್ ಅವ ರಿಗೆ ‘ಇಂಜಿನಿಯರ್ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಇದೇ ವೇಳೆ ಪ್ರತಿಭಾ ನ್ವಿತ ಇಂಜಿನಿಯರ್ ವಿದ್ಯಾರ್ಥಿಗಳಾದ ಪಿ.ಎಸ್.ಲಕ್ಷ್ಮಿ, ಆರ್.ಮೇಘಾಗೌಡ, ಎಂ.ಎನ್. ರೋಹಿತ್, ಎಂ.ಕೆ.ರೇಷ್ಮಾ, ಎಂ.ಎಸ್. ರಾಜೇಶ್ವರಿ, ಬಿ.ಶಶಾಂಕ್, ಸಂಯುಕ್ತ, ಹೆಚ್.ಎನ್.ಉಘುಮಾ, ಸಿ.ವೈ.ವಿಶಾಲು, ಡಿ.ಎನ್.ಸವಿತ, ಎಸ್.ನಿಶ್ಚಿತಾ, ಕೀರ್ತನ ರಾಜ್, ಹೇಮಲತಾ ಮತ್ತು ನಿನಾದ ಅವ ರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಅಹಿಂದ ಸಂಘಟನೆ ಅಧ್ಯಕ್ಷ ಎಂ.ನಾಗರಾಜ್ ಮಾತನಾಡಿ, ಇಂಜಿನಿಯರಿಂಗ್ ಕ್ಷೇತ್ರದ ಉತ್ತಮ ಸೇವಾ ಸಾಧನೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು. ಇದರಿಂದ ಯುವ ಇಂಜಿನಿಯರ್‍ಗಳಿಗೆ ಪ್ರೇರಣೆ ದೊರೆಯುತ್ತದೆ ಎಂದರು.

ಅಭಿನಂದನೆ ಸ್ವೀಕರಿಸಿದ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಮಾಧವ ಮಾತನಾಡಿ, ಜ್ಞಾನದಿಂದ ಮಾತ್ರ ಎಲ್ಲವನ್ನು ಜಯಿಸಲು ಸಾಧ್ಯ. ಈ ನಿಟ್ಟಿನಲ್ಲಿ ಜ್ಞಾನ ವನ್ನು ಪಡೆಯುವ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಇಂಜಿನಿಯರ್ ಎಲ್.ಅರುಣ್‍ಕುಮಾರ್, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಪ್ರೊ.ಕೆ.ಆರ್.ರಂಗಯ್ಯ, ರವಿಕುಮಾರ್, ಸತೀಶ್ ಜವರೇಗೌಡ ಮತ್ತಿತರರು ಉಪಸ್ಥಿತರಿದ್ದರು.

Translate »