ನಂಜನಗೂಡು ರಸ್ತೆಯಲ್ಲಿ ಟೋಲ್ ಸಂಗ್ರಹಕ್ಕೆ ಮಾಜಿ ಮೇಯರ್ ಪ್ರಕಾಶ್ ತೀವ್ರ ವಿರೋಧ
ಮೈಸೂರು

ನಂಜನಗೂಡು ರಸ್ತೆಯಲ್ಲಿ ಟೋಲ್ ಸಂಗ್ರಹಕ್ಕೆ ಮಾಜಿ ಮೇಯರ್ ಪ್ರಕಾಶ್ ತೀವ್ರ ವಿರೋಧ

October 22, 2019

ಮೈಸೂರು,ಅ.21(ಎಂಟಿವೈ)- ರಾಷ್ಟ್ರೀಯ ಹೆದ್ದಾರಿ 212(766) ಮೈಸೂರು-ನಂಜನ ಗೂಡು, ಟಿ.ನರಸೀಪುರದ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಂದ ಟೋಲ್ ಸಂಗ್ರಹಿಸುವ ಪ್ರಸ್ತಾಪದಿಂದ ಹಿಂದೆ ಸರಿಯುವಂತೆ ಮೈಸೂರು ಮಹಾ ನಗರಪಾಲಿಕೆ ಮಾಜಿ ಮೇಯರ್ ಬಿ.ಕೆ. ಪ್ರಕಾಶ್ ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಸ್ಕøತಿಕ ನಗರಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಎರಡು ಪ್ರಮುಖ ರಸ್ತೆ ಗಳಾದ ಮೈಸೂರು-ನಂಜನಗೂಡು ರಸ್ತೆ, ಮೈಸೂರು-ಟಿ.ನರಸೀಪುರ ರಸ್ತೆಯಲ್ಲಿ ವಾಹನ ಸವಾರರಿಂದ ಟೋಲ್ ಸಂಗ್ರಹಿ ಸಲು ಮುಂದಾಗಿರುವುದು ಸರಿಯಾದ ಕ್ರಮ ವಲ್ಲ. ಮೊದಲ ಹಂತದಲ್ಲಿ ಪ್ರಾಯೋಗಿಕ ವಾಗಿ ಮೈಸೂರು-ನಂಜನಗೂಡು ರಸ್ತೆ ಯಲ್ಲಿ ಟೋಲ್ ಸಂಗ್ರಹಿಸಲು ಮುಂದಾ ಗಿರುವುದು ಖಂಡನೀಯ. ಬಳಿಕ ಟಿ.ನರಸೀ ಪುರ, ಗುಂಡ್ಲುಪೇಟೆ ರಸ್ತೆಯಲ್ಲೂ ಟೋಲ್ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಈ ಕ್ರಮ ಬಡ ಹಾಗೂ ಮಧÀ್ಯಮ ವರ್ಗದ ಜನರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವಿಷಾದಿಸಿದರು. ತುಂಬಾ ಕಿರಿದಾಗಿದ್ದ ಈ ರಸ್ತೆಯಲ್ಲಿ ಅಪಘಾತ ಸಂಭವಿಸಿ ಹಲವು ಮಂದಿ ಮೃತಪಟ್ಟಿದ್ದರು. ಹಲವು ವರ್ಷ ಗಳ ಹೋರಾಟದ ಫಲವಾಗಿ ರಾಷ್ಟ್ರೀಯ ಹೆದ್ದಾರಿಯಾಗಿರುವ ಇದನ್ನು ಅಗಲೀ ಕರಣ ಮಾಡಿ, ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಮೈಸೂರಿಗೆ ಬರುವ ಪ್ರವಾಸಿ ಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಇದೀಗ ಟೋಲ್ ಸಂಗ್ರಹಕ್ಕೆ ಮುಂದಾ ದರೆ ಜನರಿಗೆ ತೊಂದರೆಯಾಗುತ್ತದೆ. ಈಗಾ ಗಲೇ ಸಾರ್ವಜನಿಕರು ರಸ್ತೆ ತೆರಿಗೆ, ವಾಹನ ಗಳಿಗೆ ಲೈಫ್ ಟ್ಯಾಕ್ಸ್ ಸೇರಿದಂತೆ ವಿವಿಧ ಬಗೆಯ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಆದರೂ ಟೋಲ್ ಸಂಗ್ರಹಿಸಲು ಆರಂಭಿ ಸಿದರೆ ಅದು ಶೋಷಣೆಯಾಗುತ್ತದೆ. ಇದೊಂದು ಅವೈಜ್ಞಾನಿಕ ನಿರ್ಧಾರ. ಉತ್ತಮ ರಸ್ತೆಗಳಿಂ ದಾಗಿ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿ ಸುತ್ತದೆ. ರಸ್ತೆ ಅಭಿವೃದ್ಧಿಪಡಿಸಲಿ ಆದರೆ, ಟೋಲ್ ಸಂಗ್ರಹಿಸುವ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಉಪ ಮೇಯರ್ ಪುಷ್ಪವಲ್ಲಿ, ಈಶ್ವರ ಚಕ್ಕಡಿ ಉಪಸ್ಥಿತರಿದ್ದರು.

Translate »