ಕನ್ನಡಿಗರಿಗೆ ರಾಜ್ಯದಲ್ಲಿ ಉದ್ಯೋಗ ಖಾತರಿಗೆ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹ
ಮೈಸೂರು

ಕನ್ನಡಿಗರಿಗೆ ರಾಜ್ಯದಲ್ಲಿ ಉದ್ಯೋಗ ಖಾತರಿಗೆ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹ

October 22, 2019

ಮೈಸೂರು,ಅ.21(ಎಂಟಿವೈ)- ಕನ್ನಡಿ ಗರಿಗೆ ಕಡ್ಡಾಯವಾಗಿ ರಾಜ್ಯದಲ್ಲಿ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಡಾ.ಸರೋ ಜಿನಿ ಮಹಿಷಿ ಸಮಿತಿ ಪರಿಷ್ಕೃತ ವರದಿ ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಲು ಗೋಕಾಕ್ ಚಳವಳಿ ಮಾದರಿ ಹೋರಾಟ ಅನಿವಾರ್ಯವಾಗಿದ್ದು, ಹಿರಿಯ ನಟ ಡಾ. ಶಿವರಾಜ್‍ಕುಮಾರ್ ಇದರ ನೇತೃತ್ವ ವಹಿಸು ವಂತೆ ಕದಂಬ ಸೈನ್ಯ ಕನ್ನಡ ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋ ಗಾವಕಾಶಗಳು ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರಿಗೆ ಸಿಗ ಬೇಕಾದ ಉದ್ಯೋಗ ಪರಭಾಷಿಗರ ಪಾಲಾ ಗುತ್ತಿವೆ. ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ವ್ಯಾಪಾರ ಹಾಗೂ ಉದ್ಯಮ ದಲ್ಲೂ ಅವಕಾಶ ವಂಚಿತರಾಗುತ್ತಿದ್ದಾರೆ. ಇನ್ನಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳದಿ ದ್ದರೆ ಉದ್ಯೋಗವಿಲ್ಲದೆ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಹಿನ್ನೆಲೆ ಯಲ್ಲಿ ಕನ್ನಡಿಗರ ಹಿತ ಕಾಯದ ಸರ್ಕಾರದ ವಿರುದ್ಧ ಹೋರಾಟ ನಡೆಸುವುದು ಅನಿ ವಾರ್ಯವಾಗಿದೆ ಎಂದರು.

ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಪೂರಕವಾಗಿರುವ ಡಾ.ಸರೋಜಿನಿ ಮಹಿಷಿ ಅವರ ಪರಿಷ್ಕøತ ವರದಿ ಜಾರಿಗೆ ತರುವುದು ಅಗತ್ಯ. ಆದರೆ ಆಡಳಿತ ಚುಕ್ಕಾಣಿ ಹಿಡಿಯುವ ಯಾವುದೇ ಸರ್ಕಾರಗಳು ಇದುವರೆಗೂ ಡಾ.ಸರೋ ಜಿನಿ ಮಹಿಷಿ ವರದಿಯನ್ನು ಜಾರಿಗೊಳಿ ಸುವ ಪ್ರಯತ್ನ ಮಾಡುತ್ತಿಲ್ಲ. ಕನ್ನಡಿಗರ ಹಿತ ಕಾಯದ ಸರ್ಕಾರಕ್ಕೆ ಬಿಸಿ ಮುಟ್ಟಿ ಸುವ ಅನಿವಾರ್ಯತೆ ಬಂದಿದೆ. ಈ ಹಿಂದೆ ಡಾ.ರಾಜ್‍ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳವಳಿ ಮಾದರಿಯಲ್ಲಿ ಇದೀಗ ಸರೋಜಿನಿ ಮಹಿಷಿ ವರದಿ ಜಾರಿಗೆ ಸರ್ಕಾ ರದ ಮೇಲೆ ಒತ್ತಡ ಹೇರಲು ಹೋರಾಟ ಮಾಡಲೇಬೇಕಾಗಿದೆ. ಈ ಹೋರಾಟದ ನೇತೃತ್ವವನ್ನು ಶಿವರಾಜ್‍ಕುಮಾರ್ ವಹಿಸ ಬೇಕು. ಚಳವಳಿಯಲ್ಲಿ ನಟರಾದ ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್, ಯಶ್, ಗಣೇಶ್, ಹಿರಿಯ ನಟರಾದ ರವಿ ಚಂದ್ರನ್, ಉಪೇಂದ್ರ ಸೇರಿದಂತೆ ಎಲ್ಲಾ ಕಲಾವಿದರು ಬೆಂಬಲ ನೀಡಬೇಕು. ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಸದನ ದಲ್ಲಿ ಮಂಡಿಸುವಂತೆ ಆಗ್ರಹಿಸಿ ಅ.30ರಂದು ಪತ್ರ ಚಳುವಳಿ ಹಮ್ಮಿಕೊಂಡಿದ್ದು, ಇದರಲ್ಲಿ ಎಲ್ಲಾ ಹಿರಿಯ ನಟರು ಭಾಗಿಯಾಗಬೇ ಕೆಂದು ಮನವಿ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಕದಂಬ ಸೈನ್ಯದ ಮುಖಂಡರಾದ ಎ.ನಾಗೇಂದ್ರ, ನಾಗೇಶ್, ಎನ್.ಮಹದೇವಸ್ವಾಮಿ ಇದ್ದರು.

Translate »