ಕಲಾವಿದನಿಗೆ ಪ್ರೋತ್ಸಾಹ ಅತ್ಯಗತ್ಯ
ಮೈಸೂರು

ಕಲಾವಿದನಿಗೆ ಪ್ರೋತ್ಸಾಹ ಅತ್ಯಗತ್ಯ

October 22, 2019

ಮೈಸೂರು, ಅ.21(ಎಂಕೆ)- ಕಲಾವಿದರಿಗೆ ಆರ್ಥಿಕ ಸಹಾಯಕ್ಕಿಂತ ಪ್ರೋತ್ಸಾಹ ಅತ್ಯಗತ್ಯ ಎಂದು ಮೇಲು ಕೋಟೆ ವಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ಹೇಳಿದರು.

ನಗರದ ಕಲಾಮಂದಿರದಲ್ಲಿ ಅರ್ಧ ನಾರೀಶ್ವರ ಕಲಾಭಿವೃದ್ಧಿ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹ ಯೋಗದಲ್ಲಿ ಆಯೋಜಿಸಿದ್ದ ‘ಮೋಹಿನಿ -ಭಸ್ಮಾಸುರ’ ಪೌರಾಣಿಕ ನಾಟಕ ಪ್ರದರ್ಶನ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರೇ ಸಾಕು ಅವರಿಗೆ ಪ್ರೋತ್ಸಾಹ ನೀಡಿದಂತೆ ಎಂದರು.

ನಾಟಕಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಹಾಭಾರತವನ್ನು ಇಂದಿಗೂ ನಾವು ಕೇಳುತ್ತಿದ್ದೇವೆ ಹಾಗೂ ನೋಡುತ್ತಿದ್ದೇವೆ ಎಂಬುದಕ್ಕೆ ಕಲಾವಿ ದರೇ ಕಾರಣ. ಆದ್ದರಿಂದ ಕಲೆಯನ್ನು ಗೌರವಿಸಬೇಕು ಎಂದು ತಿಳಿಸಿದರು.

ಬಳಿಕ ಹೆಲೆನ್ ಮೈಸೂರು ಅವರ ನಿರ್ದೇ ಶನದಲ್ಲಿ ‘ಮೋಹಿನಿ-ಭಸ್ಮಾಸುರ’ ಪೌರಾ ಣಿಕ ನಾಟಕ ಪ್ರದರ್ಶನವಾಯಿತು. ವಿವಿಧ ಬಗೆಯ ವೇಷಭೂಷಣದೊಂದಿಗೆ ವೇದಿಕೆಗೆ ಆಗಮಿಸಿದ ಅರ್ಧನಾರೀಶ್ವರ ಕಲಾಭಿ ವೃದ್ಧಿ ಟ್ರಸ್ಟ್ ಕಲಾವಿದರು ಆಕರ್ಷಕ ಸಂಭಾ ಷಣೆ ಮತ್ತು ಅಭಿನಯದ ಮೂಲಕ ನಾಟಕ ಪ್ರಿಯರ ಮನಸೆಳೆದರು. ಅರ್ಧನಾರೀಶ್ವರ ಕಲಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಜಿ.ಎನ್.ನಾಗರಾಜು, ಹಿರಿಯ ಕಲಾ ವಿದರಾದ ಎನ್.ಬಸವೇಗೌಡ, ಹೆಚ್.ಎನ್. ಶೇಷಾಚಲ, ಕೆ.ಮಂಜುನಾಥ್, ಡಾ.ಮರಿ ಗೌಡ್ರು, ಡಾ.ಜ್ಞಾನೇಶುಗುಡ್ಡಪ್ಪ, ಸಿ.ಹೆಚ್. ನಾಗರಾಜ್, ಡಾ.ಕೆ.ಎನ್.ತಮ್ಮಯ್ಯ, ಹೆಚ್.ಬಿ. ಮಹದೇವಗೌಡ, ಹೆಚ್.ಪರಮೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

Translate »