ಮೈಸೂರು

ಡಾ.ಸುಧಾಮೂರ್ತಿಗೆ ‘ಕನ್ನಡ ರತ್ನ’ ಪ್ರಶಸ್ತಿ
ಮೈಸೂರು

ಡಾ.ಸುಧಾಮೂರ್ತಿಗೆ ‘ಕನ್ನಡ ರತ್ನ’ ಪ್ರಶಸ್ತಿ

October 21, 2019

ಬೆಂಗಳೂರು, ಅ.20- ದುಬೈನಲ್ಲಿ ವಾಸವಾಗಿರುವ ಅನಿವಾಸಿ ಕನ್ನಡಿ ಗರು ನೀಡುವ ‘ಕನ್ನಡ ರತ್ನ’ ಪ್ರಶಸ್ತಿಗೆ ಈ ವರ್ಷ ಇನ್ಫೋಸಿಸ್ ಫೌಂಡೇ ಶನ್ ಮುಖ್ಯಸ್ಥೆ ಸುಧಾಮೂರ್ತಿ ಆಯ್ಕೆ ಯಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದುಬೈ ಕನ್ನಡಿಗರ ಮುಖ್ಯ ಸಂಚಾಲಕ ಮಲ್ಲಿಕಾರ್ಜುನಗೌಡ, ಕರ್ನಾಟಕದ ನಾಡಹಬ್ಬ 64ನೇ ‘ಕನ್ನಡ ರಾಜ್ಯೋತ್ಸವ’ ವನ್ನು ದುಬೈನಲ್ಲಿರುವ ಕನ್ನಡಿಗರು ಈ ಬಾರಿ ನವೆಂಬರ್ 8 ರಂದು ಆಚರಿಸುತ್ತಿದ್ದು, ಇದು 16ನೇ ದುಬೈ ಕನ್ನಡ ರಾಜ್ಯೋತ್ಸವವಾಗಿದ್ದು ಈ ಬಾರಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ‘ಕನ್ನಡ ರತ್ನ’…

ಪ್ರಧಾನಿ ಮೋದಿ ಟರ್ಕಿ ಪ್ರವಾಸ ರದ್ದು
ಮೈಸೂರು

ಪ್ರಧಾನಿ ಮೋದಿ ಟರ್ಕಿ ಪ್ರವಾಸ ರದ್ದು

October 21, 2019

ನವದೆಹಲಿ, ಅ.20- ವಿಶ್ವಸಂಸ್ಥೆ ಸಾಮಾನ್ಯ ಸಭೆ ಯಲ್ಲಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಪಿ ಎರ್ಡೊ ಗನ್ ಪಾಕಿ ಸ್ತಾನಕ್ಕೆ ಬೆಂಬಲ ನೀಡಿದ ವಿಚಾರ ದಲ್ಲಿ ಭಾರತ ತಕ್ಕ ಉತ್ತರ ನೀಡಿದೆ. ತಿಂಗಳಾಂತ್ಯದಲ್ಲಿ ಪ್ರಧಾನಿ ಮೋದಿ ಅವರ ಟರ್ಕಿ ಭೇಟಿಯನ್ನು ಭಾರತ ರದ್ದು ಮಾಡಿದೆ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದ ಭಾರತದ ನಿರ್ಧಾರವನ್ನು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಟೀಕಿಸಿದ್ದ ಎರ್ಡೊಗನ್ ಪಾಕಿಸ್ತಾನ ವನ್ನು ಬೆಂಬಲಿಸಿದ್ದರು. ಅಲ್ಲದೆ, ಪ್ಯಾರಿಸ್‍ನಲ್ಲಿ ನಡೆದ ಸಭೆಯಲ್ಲೂ ಇದೇ ಪುನರಾವರ್ತನೆ ಆಗಿತ್ತು. ಈ…

ಮಾಜಿ ಸಚಿವ ಜಮೀರ್ ಅಹ್ಮದ್‍ಗೆ ಹೃದಯಾಘಾತ
ಮೈಸೂರು

ಮಾಜಿ ಸಚಿವ ಜಮೀರ್ ಅಹ್ಮದ್‍ಗೆ ಹೃದಯಾಘಾತ

October 21, 2019

ಬೆಂಗಳೂರು, ಅ.20- ಲಘು ಹೃದ ಯಾಘಾತವಾಗಿ ಮಾಜಿ ಸಚಿವ ಚಾಮರಾಜ ಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಆಸ್ಪತ್ರೆಗೆ ದಾಖ ಲಾಗಿದ್ದು, ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ಶಾಸಕರಿಗೆ ಹೃದಯಾಘಾತ ವಾಗಿದ್ದು, ಕೂಡಲೇ ಆಪ್ತರು ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ದ್ದಾರೆ. ಮೂಲಗಳ ಪ್ರಕಾರ ಜಮೀರ್ ಅವ ರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಅವರಿಗೆ ಸ್ಟೆಂಟ್ ಅಳವಡಿಸಲಾಗಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದ್ದು, ನಾಳೆ ಅವರು…

ಹಿಂದುತ್ವದ ಉಳಿವಿಗೆ ಮಹಾರಾಣಾ ಪ್ರತಾಪ್ ಸಿಂಹರ ಕೊಡುಗೆ ಅಪಾರ
ಮೈಸೂರು

ಹಿಂದುತ್ವದ ಉಳಿವಿಗೆ ಮಹಾರಾಣಾ ಪ್ರತಾಪ್ ಸಿಂಹರ ಕೊಡುಗೆ ಅಪಾರ

October 21, 2019

ಮೈಸೂರು,ಅ.20(ಪಿಎಂ)- ದೇಶದಲ್ಲಿ ಹಿಂದುತ್ವ ಉಳಿದಿದ್ದರೆ ಅದಕ್ಕೆ ಮಹಾರಾಣಾ ಪ್ರತಾಪ್ ಸಿಂಹರ ಅಪಾರ ಕೊಡುಗೆಯೂ ಕಾರಣ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಹಾಗೂ ವಕೀಲ ಉದಯಸಿಂಗ್ ಅಭಿಪ್ರಾಯಪಟ್ಟರು. ಮೈಸೂರು ಇಟ್ಟಿಗೆಗೂಡಿನ ಚನ್ನಮ್ಮ ಚನ್ನಬಸಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀಮಹಾ ರಾಣಾ ಪ್ರತಾಪ್ ಸಿಂಹಜೀ ರಜಪೂತ್ ಕ್ಷತ್ರಿಯ ಸಮಾಜ್ ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ಶ್ರೀಮಹಾರಾಣಾ ಪ್ರತಾಪ್ ಸಿಂಹ ಅವರ 479ನೇ ಜಯಂತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಮೊಗಲರನ್ನು ಹಿಮ್ಮೆಟ್ಟಿಸಿ ಹಿಂದುತ್ವ ಉಳಿಸಿ ಬೆಳೆಸಿದ ಮಹಾರಾಣಾ ಪ್ರತಾಪ್ ಸಿಂಹ ಅವರು…

ಆಡಳಿತ ನಡೆಸಿದ ಎಲ್ಲಾ ಪಕ್ಷಗಳಿಂದಲೂ ಅಸಂಘಟಿತ ಕಾರ್ಮಿಕರ ನಿರ್ಲಕ್ಷ್ಯ
ಮೈಸೂರು

ಆಡಳಿತ ನಡೆಸಿದ ಎಲ್ಲಾ ಪಕ್ಷಗಳಿಂದಲೂ ಅಸಂಘಟಿತ ಕಾರ್ಮಿಕರ ನಿರ್ಲಕ್ಷ್ಯ

October 21, 2019

ಮೈಸೂರು,ಅ.20(ಪಿಎಂ)-ದೇಶದಲ್ಲಿರುವ ಶೇ.90 ರಷ್ಟು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಆಡಳಿತ ನಡೆಸಿದ ಯಾವುದೇ ಪಕ್ಷಗಳು ಕೊಡುಗೆ ನೀಡಿಲ್ಲ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ವತಿಯಿಂದ `ದೇಶದ ಆರ್ಥಿಕ ಹಿಂಜರಿತ: ಕೇಂದ್ರ ಸರ್ಕಾರದ ಕಾರ್ಯ ವೈಖರಿ’ ಕುರಿತಂತೆ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಕ್ಷೇತ್ರ, ಗುಡಿ ಕೈಗಾರಿಕೆ ಸೇರಿದಂತೆ ಇನ್ನಿತರ ಕ್ಷೇತ್ರ ಗಳಲ್ಲಿ ಶೇ.90ರಷ್ಟು ಅಸಂಘಟಿತ ಕಾರ್ಮಿಕರಿದ್ದು, ಇವರ…

ಆರ್‍ಸಿಇಪಿ ಒಪ್ಪಂದ ವಿರೋಧಿಸಿ ಅ.24ರಂದು ಮೈಸೂರಲ್ಲಿ ರೈತರ ಪ್ರತಿಭಟನೆ
ಮೈಸೂರು

ಆರ್‍ಸಿಇಪಿ ಒಪ್ಪಂದ ವಿರೋಧಿಸಿ ಅ.24ರಂದು ಮೈಸೂರಲ್ಲಿ ರೈತರ ಪ್ರತಿಭಟನೆ

October 21, 2019

ಮೈಸೂರು, ಅ.20(ಆರ್‍ಕೆಬಿ)- ಕೇಂದ್ರ ಸರ್ಕಾರ ರೈತರು, ಕೈಗಾರಿಕೆಗಳ ಹಿತದೃಷ್ಟಿಗೆ ಧಕ್ಕೆ ತರಲಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ಆಗ್ರಹಿಸಿ ಅ.24 ರಂದು ಮೈಸೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿ ರುವುದಾಗಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಈ ಹಿಂದೆ ಚೀನಾದಿಂದ ರೇಷ್ಮೆ ಆಮದು ಮಾಡಿಕೊಂಡ ನಂತರ ದೇಶದ ರೇಷ್ಮೆ ವಲಯಕ್ಕೆ ಆದ ಹಾನಿ ರೀತಿಯಲ್ಲೇ ಈ ಮುಕ್ತ ವ್ಯಾಪಾರ…

ಈ ರಸ್ತೆ ಅಭಿವೃದ್ಧಿ ಒಂದೆಡೆ ಸಂಚಾರಕ್ಕೆ ಕಂಟಕ ಪ್ರಾಯ!
ಮೈಸೂರು

ಈ ರಸ್ತೆ ಅಭಿವೃದ್ಧಿ ಒಂದೆಡೆ ಸಂಚಾರಕ್ಕೆ ಕಂಟಕ ಪ್ರಾಯ!

October 21, 2019

ಮೈಸೂರು,ಅ.20(ಎಸ್‍ಬಿಡಿ)- ಮೈಸೂರಿನ ಗಾಯತ್ರಿಪುರಂನ ರಸ್ತೆಯೊಂದರಲ್ಲಿ ವಿಚಿತ್ರ ಸಮಸ್ಯೆಯಿಂದಾಗಿ ಸಂಚಾರಕ್ಕೆ ಅಡ್ಡಿ ಯಾಗಿರುವುದಲ್ಲದೆ, ಅಪಘಾತವೂ ಹೆಚ್ಚುತ್ತಿವೆ. ಗಾಯತ್ರಿಪುರಂ-ಕ್ಯಾತಮಾರನಹಳ್ಳಿ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಈ ರಸ್ತೆ ಕ್ಯಾತಮಾರನಹಳ್ಳಿ, ಉದಯಗಿರಿ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳನ್ನು ಸಂಪರ್ಕಿಸುವುದರಿಂದ ಯಾವಾಗಲೂ ವಾಹನ ದಟ್ಟಣೆ ಇದ್ದೇ ಇರುತ್ತದೆ. ಒಂದು ಸ್ಥಳವನ್ನು ಹೊರತುಪಡಿಸಿ ಉಳಿದ ರಸ್ತೆ ಸುಗಮ ಸಂಚಾರಕ್ಕೆ ಅಗತ್ಯವಾದಷ್ಟು ವಿಸ್ತಾರ ವಾಗಿದೆ. ಆದರೆ ಆ ಒಂದು ಸ್ಥಳದಲ್ಲಾಗುವ ಅದ್ವಾನದಿಂದ ಇಡೀ ಈ ರಸ್ತೆ ಸಂಚಾ ರಕ್ಕೇ ಅಡ್ಡಿಯಾಗುತ್ತಿದೆ. ಗಾಯತ್ರಿಪುರಂ 2ನೇ ಹಂತದ ವ್ಯಾಪ್ತಿಯಲ್ಲಿರುವ ಈ…

ಇಂದು `ಮೈಸೂರು ಡರ್ಬಿ’
ಮೈಸೂರು

ಇಂದು `ಮೈಸೂರು ಡರ್ಬಿ’

October 20, 2019

ಮೈಸೂರು,ಅ.19-ಮೈಸೂರಿನ ರೇಸ್ ಪ್ರಿಯರು ಭಾರೀ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ‘ಮೈಸೂರು ಡರ್ಬಿ-2019’ (ಗ್ರೇಡ್-1) ನಾಳೆ (ಭಾನುವಾರ) ಮೈಸೂರು ರೇಸ್‍ಕೋರ್ಸ್‍ನಲ್ಲಿ ನಡೆಯಲಿದೆ. ಈಗಾ ಗಲೇ ಡರ್ಬಿಯಲ್ಲಿ ಭಾಗವಹಿಸಲು ದೇಶದ ವಿವಿಧ ಸ್ಟಡ್ ಫಾರಂಗಳಿಂದ ಬಂದಿರುವ ಅತ್ಯುತ್ತಮ ಕುದುರೆಗಳ ಬಗ್ಗೆ ರೇಸಿಂಗ್ ಉತ್ಸಾಹಿಗಳಲ್ಲಿ ತುಂಬಾ ಕುತೂಹಲ ಉಂಟಾಗಿದೆ. ಮೈಸೂರು ರೇಸ್ ಕ್ಲಬ್ ಅಧ್ಯಕ್ಷರಾದ ಡಾ.ಎನ್.ನಿತ್ಯಾನಂದರಾವ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಬಾರಿಯ ಮೈಸೂರು ಡರ್ಬಿಯಲ್ಲಿ ಕ್ಯಾಟಲಿಸ್ಟ್ ಪ್ರಾಪರ್ಟೀಸ್ ಮತ್ತು ಎವಿಆರ್ ಗ್ರೂಪ್ ಪ್ರಾಯೋಜಕತ್ವ ಗಿಟ್ಟಿಸುವಲ್ಲಿ ಯಶಸ್ವಿಯಾಗಿವೆ. ಕಳೆದ ಕೆಲ ದಶಕಗಳಿಂದ ರೇಸಿಂಗ್…

ಕೊಳಚೆ ನಿವಾಸಿಗಳಿಗೆ ಮನೆ, ಇಡಬ್ಲ್ಯೂಎಸ್ ಮನೆಗಳಿಗೆ ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಕೊಳಚೆ ನಿವಾಸಿಗಳಿಗೆ ಮನೆ, ಇಡಬ್ಲ್ಯೂಎಸ್ ಮನೆಗಳಿಗೆ ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

October 20, 2019

ಮೈಸೂರು, ಅ.19(ಪಿಎಂ)- ಮೈಸೂರು ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆ ಮಂಜೂರು ಮಾಡಬೇಕು ಹಾಗೂ ರಾಮಕೃಷ್ಣನಗರ `ಹೆಚ್’ ಬ್ಲಾಕ್‍ನ ಇಡಬ್ಲ್ಯೂಎಸ್ (ಆರ್ಥಿಕ ವಾಗಿ ಹಿಂದುಳಿದ ವರ್ಗ) ಮನೆಗಳಿಗೆ ಮೂಲ ಸೌಲಭ್ಯ ಕಲ್ಪಿಸ ಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಮೈಸೂರು ನಗರದ ಕೊಳಚೆ ನಿವಾಸಿಗಳಿಗೆ ಮನೆಗಳನ್ನು ಮಂಜೂರು ಮಾಡಬೇಕು. ಜೊತೆಗೆ ಹಕ್ಕು ಪತ್ರಗಳನ್ನು ನೀಡಬೇಕು ಎಂದು ಆಗ್ರಹಿಸಿದರು. ರಾಮಕೃಷ್ಣನಗರ…

ಮೈಸೂರಿನಲ್ಲಿ ನ.30ಕ್ಕೆ ರಾಜನ್-ನಾಗೇಂದ್ರ ಸಂಗೀತ ಕಾರ್ಯಕ್ರಮ
ಮೈಸೂರು

ಮೈಸೂರಿನಲ್ಲಿ ನ.30ಕ್ಕೆ ರಾಜನ್-ನಾಗೇಂದ್ರ ಸಂಗೀತ ಕಾರ್ಯಕ್ರಮ

October 20, 2019

ಮೈಸೂರು, ಅ.19(ಪಿಎಂ)- ಕನ್ನಡ ಚಲನಚಿತ್ರ ರಂಗದಲ್ಲಿ ಸಂಗೀತ ನಿರ್ದೇಶನದ ಮೂಲಕ ಜೇನಿನ ಹೊಳೆಯನ್ನೇ ಹರಿಸಿದ್ದ ರಾಜನ್-ನಾಗೇಂದ್ರ ಸಹೋ ದರರ ಜೋಡಿಯ ಸಂಗೀತ ಕಾರ್ಯಕ್ರಮ ಮೈಸೂ ರಿನಲ್ಲಿ ನವೆಂಬರ್ 30ರಂದು ನಡೆಯಲಿದೆ. ರಾಜನ್-ನಾಗೇಂದ್ರ ಟ್ರಸ್ಟ್ ವತಿಯಿಂದ ಅಂದು ಕಲಾ ಮಂದಿರದಲ್ಲಿ ಈ ಸಂಗೀತ ಕಾರ್ಯಕ್ರಮ ಆಯೋ ಜಿಸುತ್ತಿದ್ದು, ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಕಾರ್ಯಕ್ರಮದ ವಿವರ ನೀಡಿದ ನಿರೂಪಕ ರವಿ ಸಂತೋಷ್, ಅಂದು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು…

1 795 796 797 798 799 1,611
Translate »