ಮೈಸೂರು

ಮಾಜಿ ಸಿಎಂಗಳಾದ ಕುಮಾರಸ್ವಾಮಿ-ಸಿದ್ದರಾಮಯ್ಯ ಪರಸ್ಪರ ವಾಕ್ಸಮರ:ಹದ್ದು-ಗಿಣಿ ಹೆಸರಲ್ಲಿ ಕುಕ್ಕಾಟ!
ಮೈಸೂರು

ಮಾಜಿ ಸಿಎಂಗಳಾದ ಕುಮಾರಸ್ವಾಮಿ-ಸಿದ್ದರಾಮಯ್ಯ ಪರಸ್ಪರ ವಾಕ್ಸಮರ:ಹದ್ದು-ಗಿಣಿ ಹೆಸರಲ್ಲಿ ಕುಕ್ಕಾಟ!

September 25, 2019

ಬೆಂಗಳೂರು, ಸೆ.24(ಕೆಎಂಶಿ)- ಒಂದೆಡೆ ಉಪ ಚುನಾವಣೆ ಸಮರ ಕಾವೇರುತ್ತಿದ್ದರೆ, ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ವಾಕ್ಸಮರ ತಾರಕಕ್ಕೇರುತ್ತಿದೆ. ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ `ಸಿದ್ದರಾಮಯ್ಯ ಆಡಳಿತ ಅಂತರಂಗ-ಬಹಿರಂಗ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಆಡಿದ ಮಾತೊಂದು ಮಾಜಿ ಸಿಎಂಗಳ  ಜಂಗಿ ಕುಸ್ತಿಗೆ ಕಾರಣವಾಗಿದೆ. `ಚಾಮುಂಡೇಶ್ವರಿ ಸೋಲು ಒಂದು ಆಕಸ್ಮಿಕ ಗಾಯ. ಅದನ್ನು ಒಂದು ಕೆಟ್ಟ ಕನಸ್ಸೆಂದು ಮರೆಯಿರಿ’ ಎಂದು ಸಿದ್ದರಾಮಯ್ಯ ನವರಿಗೆ ಸಮಾಧಾನ ಹೇಳಿದ್ದ…

ಮರಳು ಸುಲಭ ಲಭ್ಯ
ಮೈಸೂರು

ಮರಳು ಸುಲಭ ಲಭ್ಯ

September 25, 2019

ಬೆಂಗಳೂರು, ಸೆ.24(ಕೆಎಂಶಿ)- ಮರಳು ನೀತಿ ಸಡಿಲಗೊಳಿಸಲು ರಾಜ್ಯ ಸರ್ಕಾರ ಮುಂದಾ ಗಿದ್ದು, ಮುಂದಿನ ಎರಡು ಮೂರು ತಿಂಗಳಲ್ಲಿ ಎಲ್ಲೆಡೆ ಮರಳು ಸುಲಭವಾಗಿ ದೊರೆ ಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್, ಇಲಾಖಾ ವತಿಯಿಂದ ವಾರ್ಷಿಕ ಆದಾಯವನ್ನು 3200 ರಿಂದ 3700 ಕೋಟಿ ರೂ.ಗೆ ಹೆಚ್ಚಿಸುವ ಉದ್ದೇಶ ದಿಂದ ಮರಳು ಮತ್ತು ಗ್ರಾನೈಟ್ ಮೇಲಿನ ಬಿಗಿ ಕಾನೂನನ್ನು ಸಡಿಲಗೊಳಿಸಲಾಗುತ್ತಿದೆ. ಮರಳು ದಂಧೆಗೆ ಕಡಿವಾಣ ಹಾಕಿ ಗ್ರಾಹಕರಿಗೆ ಕಡಿಮೆ ದರದಲ್ಲಿ…

ಅನರ್ಹಗೊಂಡಿರುವ 17 ಶಾಸಕರ ಅರ್ಜಿ ವಿಚಾರಣೆ: ನಾಳೆಗೆ ವಿಚಾರಣೆ ಮುಂದೂಡಿಕೆ
ಮೈಸೂರು

ಅನರ್ಹಗೊಂಡಿರುವ 17 ಶಾಸಕರ ಅರ್ಜಿ ವಿಚಾರಣೆ: ನಾಳೆಗೆ ವಿಚಾರಣೆ ಮುಂದೂಡಿಕೆ

September 24, 2019

ನವದೆಹಲಿ, ಸೆ. 23-ಅನರ್ಹಗೊಂಡಿ ರುವ 17 ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠ ಬುಧವಾರಕ್ಕೆ ಮುಂದೂಡಿದೆ. ನ್ಯಾಯ ಮೂರ್ತಿ ಎಸ್.ವಿ. ರಮಣ ಅವರನ್ನೊಳ ಗೊಂಡ ತ್ರಿಸದಸ್ಯ ಪೀಠ ಇಂದು ವಿಚಾರಣೆ ಯನ್ನು ಕೈಗೆತ್ತಿಕೊಂಡು ವಾದ ಪ್ರತಿವಾದ ಆಲಿಸಿ, ಈ ಬಗ್ಗೆ ಸುದೀರ್ಘ ಚರ್ಚೆ ಅವಶ್ಯವಿದೆ ಎಂದು ಸೆ. 25ಕ್ಕೆ ವಿಚಾರಣೆ ಯನ್ನು ಮುಂದೂಡಿದರು. ಇದಕ್ಕೂ ಮುನ್ನ ಅನರ್ಹ ಶಾಸಕರ ಪರ ವಾಗಿ ಮುಕುಲ್ ರೋಹಟಗಿ ವಾದ ಮಂಡಿ ಸಿದರೆ, ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್…

ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಸಂಪೂರ್ಣ ಹೊಣೆಗಾರಿಕೆ ಯಡಿಯೂರಪ್ಪ ಹೆಗಲಿಗೆ ಕಟ್ಟಿದ ಬಿಜೆಪಿ ವರಿಷ್ಠರು
ಮೈಸೂರು

ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಸಂಪೂರ್ಣ ಹೊಣೆಗಾರಿಕೆ ಯಡಿಯೂರಪ್ಪ ಹೆಗಲಿಗೆ ಕಟ್ಟಿದ ಬಿಜೆಪಿ ವರಿಷ್ಠರು

September 24, 2019

ಬೆಂಗಳೂರು, ಸೆ. 23(ಕೆಎಂಶಿ)- ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಬಿಜೆಪಿ ವರಿಷ್ಠರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಗಲ ಮೇಲೆ ಹಾಕಿದ್ದಾರೆ. ಅನರ್ಹಗೊಂಡ ಹದಿನೇಳು ಶಾಸಕರ ಕ್ಷೇತ್ರಗಳ ಪೈಕಿ ಹದಿನೈದು ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಉಪಚುನಾವಣೆ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಬಿ ಫಾರಂ ನೀಡುವ ಅಧಿಕಾರವನ್ನು ಯಡಿಯೂರಪ್ಪನವರಿಗೆ ನೀಡಲಾಗುತ್ತಿದೆ. ಈ ವಿಷಯದಲ್ಲಿ ರಾಜ್ಯ ಬಿಜೆಪಿಯಾಗಲೀ, ಪಕ್ಷದ ವರಿಷ್ಠರಾಗಲೀ ಇಲ್ಲವೆ ಸಂಘ ಹಸ್ತಕ್ಷೇಪ ಮಾಡುವುದಿಲ್ಲ. ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂಬ…

ಒಂದೇ ಐಡಿ ಕಾರ್ಡ್‍ನಲ್ಲಿ ಆಧಾರ್, ಡಿಎಲ್, ಪಾಸ್‍ಪೋರ್ಟ್
ಮೈಸೂರು

ಒಂದೇ ಐಡಿ ಕಾರ್ಡ್‍ನಲ್ಲಿ ಆಧಾರ್, ಡಿಎಲ್, ಪಾಸ್‍ಪೋರ್ಟ್

September 24, 2019

ನವದೆಹಲಿ, ಸೆ. 23- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮ ವಾರ ಆಧಾರ್‍ಗೆ ಗುಡ್ ಬೈ ಹೇಳುವ ಸುಳಿವು ನೀಡಿದ್ದು, ಆಧಾರ್, ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಬ್ಯಾಂಕ್ ಖಾತೆ ಒಳಗೊಂಡ ಬಹು ಉಪಯೋಗಿ ಕಾರ್ಡ್ ಅನ್ನು ಭಾರತೀಯರಿಗೆ ನೀಡುವ ಬಗ್ಗೆ ಮಾತನಾಡಿದ್ದಾರೆ. 2021ರ ಜನಗಣತಿ ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಯಲಿದೆ ಎಂದು ಸಹ ಅಮಿತ್ ಶಾ ಹೇಳಿದ್ದಾರೆ. ಇಂದು ದೆಹಲಿಯಲ್ಲಿ ಜನಗಣತಿ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗಿ ಮಾತ ನಾಡಿದ ಅಮಿತ್ ಶಾ,…

ಚಾಮುಂಡಿಬೆಟ್ಟ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
ಮೈಸೂರು

ಚಾಮುಂಡಿಬೆಟ್ಟ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

September 24, 2019

ಮೈಸೂರು,ಸೆ.23(ಆರ್‍ಕೆ)- ದಶಕಗಳ ಚಾಮುಂಡಿ ಬೆಟ್ಟ ಗ್ರಾಮಸ್ಥರ ಬೇಡಿಕೆ ಅಂತೂ ಸಾಕಾರಗೊಳ್ಳು ತ್ತಿದೆ. ಪ್ರತಿದಿನ ಸಾವಿರಾರು ಮಂದಿ ಭಕ್ತಾದಿಗಳು ಹಾಗೂ ಪ್ರವಾಸಿಗರು ಭೇಟಿ ನೀಡುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಾನವೂ ಆದ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ವಿದೆ. ಹಲವು ಸರ್ಕಾರ ಬಂದು ಹೋದರೂ, ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇ ಗೌಡ ಈ ಗಂಭೀರ ವಿಷಯವನ್ನು ದಸರಾ ಉದ್ಘಾ ಟನಾ ಸಮಾರಂಭದಲ್ಲಿ ಪ್ರಸ್ತಾಪಿಸಿ ತಕ್ಷಣವೇ ಕುಡಿ ಯುವ…

ನೀವು ನಿಜವಾಗಲೂ ಪ್ರಾಮಾಣಿಕರಾದರೆ ಚಾಮುಂಡಿಬೆಟ್ಟದಲ್ಲಿ ಪ್ರಮಾಣ ಮಾಡಿ
ಮೈಸೂರು

ನೀವು ನಿಜವಾಗಲೂ ಪ್ರಾಮಾಣಿಕರಾದರೆ ಚಾಮುಂಡಿಬೆಟ್ಟದಲ್ಲಿ ಪ್ರಮಾಣ ಮಾಡಿ

September 24, 2019

ಮೈಸೂರು,ಸೆ.23(ಪಿಎಂ)- ರೀ ವಿಶ್ವನಾಥ್, ನನ್ನ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ಒಂದೇ ಒಂದೂ ಕಪ್ಪು ಚುಕ್ಕೆ ಸಾಬೀತು ಮಾಡಿ. ಮರು ಕ್ಷಣವೇ ರಾಜ ಕೀಯ ಹಾಗೂ ಸಾರ್ವಜನಿಕ ಜೀವನ ದಿಂದ ನಿವೃತ್ತಿಯಾಗುತ್ತೇನೆ ಎಂದು ವಾಗ್ದಾಳಿ ನಡೆಸುವ ಮೂಲಕ ಮಾಜಿ ಸಚಿವರೂ ಆದ ಶಾಸಕ ಸಾ.ರಾ.ಮಹೇಶ್, ಅನರ್ಹ ಶಾಸಕ ಎ.ಹೆಚ್.ವಿಶ್ವನಾಥ್ ವಿರುದ್ಧ ಗುಡುಗಿದ್ದಾರೆ. ಭಾನುವಾರವಷ್ಟೇ ಎ.ಹೆಚ್.ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಸಾ.ರಾ.ಮಹೇಶ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆ…

ಕೆಜಿಗೆ 60 ರೂ.: ಕಣ್ಣೀರು ತರಿಸುತ್ತಿದೆ ಈರುಳ್ಳಿ ಬೆಲೆ
ಮೈಸೂರು

ಕೆಜಿಗೆ 60 ರೂ.: ಕಣ್ಣೀರು ತರಿಸುತ್ತಿದೆ ಈರುಳ್ಳಿ ಬೆಲೆ

September 24, 2019

ಮೈಸೂರು,ಸೆ.23(ಪಿಎಂ)-ಈರುಳ್ಳಿ ಹಚ್ಚಿ ದರಷ್ಟೇ ಅಲ್ಲ, ಇದೀಗ ಅದರ ಬೆಲೆ ಕೇಳಿದರೆ ಸಾಕು ಕಣ್ಣಲ್ಲಿ ನೀರು ಬರಲಿದೆ. ಅಷ್ಟರಮಟ್ಟಿಗೆ ಈರುಳ್ಳಿ ಬೆಲೆ ಗಗನಕ್ಕೇರು ತ್ತಿದೆ. ಸದ್ಯ ಕೆಜಿಗೆ 60 ರೂ. ದುಬಾರಿ ಬೆಲೆ ಇರುವ ಈರುಳ್ಳಿ ಮುಂದಿನ ದಿನಗಳಲ್ಲಿ ಮತ್ತೂ ಏರುವ ಸಾಧ್ಯತೆಯೂ ಅಧಿಕವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಯುವ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಈರುಳ್ಳಿ ಬೆಳೆ ನಿರೀಕ್ಷೆ ಯಂತೆ ಕೈಗೆ ಸಿಗದಂತಾಗಿದೆ. ಪರಿಣಾಮ ಈರುಳ್ಳಿ ಕೊರತೆ ಉಂಟಾಗಿ ಸಹಜವಾ ಗಿಯೇ ಬೆಲೆ ಗಗನಮುಖಿಯಾಗಿದೆ….

ಲಂಡನ್ ಬುಕ್ ಆಫ್ ರೆಕಾಡ್ರ್ಸ್‍ಗಾಗಿ ಮೈಸೂರಲ್ಲೂ ವಾಸವಿ ಮಹಿಳೆಯರಿಂದ ಸಾಮೂಹಿಕ ಗಾಯನ
ಮೈಸೂರು

ಲಂಡನ್ ಬುಕ್ ಆಫ್ ರೆಕಾಡ್ರ್ಸ್‍ಗಾಗಿ ಮೈಸೂರಲ್ಲೂ ವಾಸವಿ ಮಹಿಳೆಯರಿಂದ ಸಾಮೂಹಿಕ ಗಾಯನ

September 24, 2019

ಮೈಸೂರು, ಸೆ.23(ಆರ್‍ಕೆಬಿ)- `ವಾಸವಿ ವಾಸವಿ ವಂದನಮುಲು ವಾಸವಿ…’ ಲಂಡನ್ ಬುಕ್ ಆಫ್ ರೆಕಾಡ್ರ್ಸ್‍ಗಾಗಿ ವಿಶ್ವ ಆರ್ಯ ವೈಶ್ಯ ಮಹಾಸಭಾ ಕರ್ನಾ ಟಕ ಮಹಿಳಾ ವಿಭಾಗದಿಂದ ಬೆಂಗಳೂ ರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿ ಸಿದ್ದ ಯೂನಿವರ್ಸಲ್ ವಾಸವಿ ಮಾತಾ ಪ್ರಾರ್ಥನಾ ಗಾಯನದ ಸಂದರ್ಭದಲ್ಲಿ ಮೈಸೂರಿನಲ್ಲಿಯೂ ಏಕಕಾಲದಲ್ಲಿ ಸಾಮೂ ಹಿಕ ಪ್ರಾರ್ಥನಾ ಗಾಯನ ನಡೆಸಲಾಯಿತು. ಮೈಸೂರಿನ ಅಶೋಕ ರಸ್ತೆ ಕನ್ನಿಕಾ ಮಹಲ್‍ನಲ್ಲಿ ಮಧ್ಯಾಹ್ನ ನಡೆದ ಪ್ರಾರ್ಥನಾ ಗಾಯನದಲ್ಲಿ ಮೈಸೂರು ವಿಭಾಗದ ಮೈಸೂರು, ನಂಜನಗೂಡು, ಚಾಮ ರಾಜನಗರ, ಹಾಸನ, ತಿ.ನರಸೀಪುರ, ಹೊಳೆನರಸೀಪುರ…

ಮೈಸೂರು ಮೃಗಾಲಯದಲ್ಲಿ ವಿಶ್ವ ಘೇಂಡಾಮೃಗ ದಿನಾಚರಣೆ
ಮೈಸೂರು

ಮೈಸೂರು ಮೃಗಾಲಯದಲ್ಲಿ ವಿಶ್ವ ಘೇಂಡಾಮೃಗ ದಿನಾಚರಣೆ

September 24, 2019

ಮೈಸೂರು, ಸೆ.23(ಎಂಟಿವೈ)- `ವಿಶ್ವ ಘೇಂಡಾಮೃಗ’ ದಿನದ ಹಿನ್ನೆಲೆಯಲ್ಲಿ ಮೈಸೂ ರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರಿಗೆ ಫೇಂಡಾಮೃಗಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಅವುಗಳ ಸಂತತಿ ರಕ್ಷಣೆಗೆ ಜಾಗೃತಿ ಮೂಡಿಸಲಾಯಿತು. ಮೃಗಾಲಯದಲ್ಲಿನ ಘೇಂಡಾಮೃಗಗಳ ಕೇಜ್ ಬಳಿ ಮೃಗಾಲಯದ ವತಿ ಯಿಂದ `ವಿಶ್ವ ಘೇಂಡಾ ಮೃಗ’ಗಳ ದಿನದ ಶುಭಾ ಶಯ ಕೋರುವ ಬ್ಯಾನರ್ ಹಾಕಿ, ಘೇಂಡಾ ಮೃಗ ಗಳ ಜೀವನ ಕ್ರಮ ವಿವರಣೆ ನೀಡಲು ಓರ್ವ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಭಾನುವಾರವಾಗಿದ್ದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಅಲ್ಲದೆ ಯೂತ್ ಕ್ಲಬ್…

1 815 816 817 818 819 1,611
Translate »