ಮೈಸೂರು, ಸೆ.23(ಆರ್‍ಕೆಬಿ)- `ವಾಸವಿ ವಾಸವಿ ವಂದನಮುಲು ವಾಸವಿ…’ ಲಂಡನ್ ಬುಕ್ ಆಫ್ ರೆಕಾಡ್ರ್ಸ್‍ಗಾಗಿ ವಿಶ್ವ ಆರ್ಯ ವೈಶ್ಯ ಮಹಾಸಭಾ ಕರ್ನಾ ಟಕ ಮಹಿಳಾ ವಿಭಾಗದಿಂದ ಬೆಂಗಳೂ ರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿ ಸಿದ್ದ ಯೂನಿವರ್ಸಲ್ ವಾಸವಿ ಮಾತಾ ಪ್ರಾರ್ಥನಾ ಗಾಯನದ ಸಂದರ್ಭದಲ್ಲಿ ಮೈಸೂರಿನಲ್ಲಿಯೂ ಏಕಕಾಲದಲ್ಲಿ ಸಾಮೂ ಹಿಕ ಪ್ರಾರ್ಥನಾ ಗಾಯನ ನಡೆಸಲಾಯಿತು.
ಮೈಸೂರಿನ ಅಶೋಕ ರಸ್ತೆ ಕನ್ನಿಕಾ ಮಹಲ್‍ನಲ್ಲಿ ಮಧ್ಯಾಹ್ನ ನಡೆದ ಪ್ರಾರ್ಥನಾ ಗಾಯನದಲ್ಲಿ ಮೈಸೂರು ವಿಭಾಗದ ಮೈಸೂರು, ನಂಜನಗೂಡು, ಚಾಮ ರಾಜನಗರ, ಹಾಸನ, ತಿ.ನರಸೀಪುರ, ಹೊಳೆನರಸೀಪುರ ಸೇರಿದಂತೆ ವಿವಿ ಧೆಡೆಯಿಂದ ಆಗಮಿಸಿದ್ದ 170ಕ್ಕೂ ಹೆಚ್ಚು ವಾಸವಿ ಮಹಿಳೆಯರು 1.20 ನಿಮಿಷದ ಯೂನಿವರ್ಸಲ್ ವಾಸವಿ ಮಾತಾ ಪ್ರಾರ್ಥನಾ ಗಾಯನವನ್ನು ಸಾಮೂಹಿಕ ವಾಗಿ ಯಶಸ್ವಿಯಾಗಿ ಹಾಡಿದರು. ಎಲ್ಲರೂ ಹಳದಿ ವರ್ಣದ ಸೀರೆ ಸಮವಸ್ತ್ರ ಧರಿಸಿ, ಕನಕಾಂಬರ ಹೂವು ಮುಡಿದಿದ್ದು ವಿಶೇಷ ವಾಗಿತ್ತು. ವಿಶ್ವಾದ್ಯಂತ ವಾಸವಿ ಮಹಿಳೆ ಯರು ಲಂಡನ್ ಬುಕ್ ಆಫ್ ರೆಕಾಡ್ರ್ಸ್‍ಗೆ ಏಕ ಕಾಲದಲ್ಲಿ ಸಾಮೂಹಿಕ ಗಾಯನದಲ್ಲಿ ಭಾಗವಹಿಸಿದ್ದರು. ವಾಸವಿ ಪ್ರಾರ್ಥನಾ ಗೀತೆಯನ್ನು ರಚಿಸಿ, ಸಂಗೀತ ಹಾಗೂ ಗಾಯನವನ್ನು ವಾಸವಿ ಸಹೋ ದರಿಯರು ನಡೆಸಿಕೊಟ್ಟರು. ಮೈಸೂರಿನ ಗಾಯನ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ರಶ್ಮಿ ಶ್ರೀನಾಥ್, ನಿರ್ದೇಶಕರಾದ ಗೌರವ್ ಸುಧಾ ಮುರಳಿ, ಶಿಲ್ಪಾ ಸಂದೀಪ್, ಸ್ವಯಂಪ್ರಭಾ, ಲಕ್ಷ್ಮಿ ದಿನೇಶ್, ರಶ್ಮಿ ರಾಘ ವೇಂದ್ರ, ಸುರೇಖಾ ಹರೀಶ್, ರುಕ್ಮಿಣಿ ಸುರೇಂದ್ರ ಇನ್ನಿತರರು ಭಾಗವಹಿಸಿದ್ದರು.