ಕೆಜಿಗೆ 60 ರೂ.: ಕಣ್ಣೀರು ತರಿಸುತ್ತಿದೆ ಈರುಳ್ಳಿ ಬೆಲೆ
ಮೈಸೂರು

ಕೆಜಿಗೆ 60 ರೂ.: ಕಣ್ಣೀರು ತರಿಸುತ್ತಿದೆ ಈರುಳ್ಳಿ ಬೆಲೆ

September 24, 2019

ಮೈಸೂರು,ಸೆ.23(ಪಿಎಂ)-ಈರುಳ್ಳಿ ಹಚ್ಚಿ ದರಷ್ಟೇ ಅಲ್ಲ, ಇದೀಗ ಅದರ ಬೆಲೆ ಕೇಳಿದರೆ ಸಾಕು ಕಣ್ಣಲ್ಲಿ ನೀರು ಬರಲಿದೆ. ಅಷ್ಟರಮಟ್ಟಿಗೆ ಈರುಳ್ಳಿ ಬೆಲೆ ಗಗನಕ್ಕೇರು ತ್ತಿದೆ. ಸದ್ಯ ಕೆಜಿಗೆ 60 ರೂ. ದುಬಾರಿ ಬೆಲೆ ಇರುವ ಈರುಳ್ಳಿ ಮುಂದಿನ ದಿನಗಳಲ್ಲಿ ಮತ್ತೂ ಏರುವ ಸಾಧ್ಯತೆಯೂ ಅಧಿಕವಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಯುವ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಈರುಳ್ಳಿ ಬೆಳೆ ನಿರೀಕ್ಷೆ ಯಂತೆ ಕೈಗೆ ಸಿಗದಂತಾಗಿದೆ. ಪರಿಣಾಮ ಈರುಳ್ಳಿ ಕೊರತೆ ಉಂಟಾಗಿ ಸಹಜವಾ ಗಿಯೇ ಬೆಲೆ ಗಗನಮುಖಿಯಾಗಿದೆ. ಮೈಸೂರಿನ ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ 50 ರೂ. ಇದ್ದರೆ, ನಗರದ ವಿವಿಧ ಬಡಾವಣೆಗಳ ಅಂಗಡಿ-ಮುಂಗಟ್ಟು ಗಳಲ್ಲಿ 60 ರೂ.ಗೆ ಮಾರಾಟ ಮಾಡಲಾಗು ತ್ತಿದೆ. ಮೈಸೂರು ಮಾತ್ರವಲ್ಲದೆ, ಇಡೀ ರಾಜ್ಯದಲ್ಲಿ ಈರುಳ್ಳಿ ಬೆಲೆ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದ್ದು, ಇದೀಗ ಕೆಜಿ ಸೇಬು 60 ರೂ.ಗೆ ಕುಸಿದಿದ್ದು, ಸೇಬಿನ ಸಮಾನ ಬೆಲೆಯನ್ನು ಈರುಳ್ಳಿ ಕಾಯ್ದುಕೊಂಡು ಗ್ರಾಹ ಕರನ್ನು ಕಂಗಾಲಾಗಿಸಿದೆ. ದಸರಾ, ದೀಪಾ ವಳಿ ಹಬ್ಬದ ಗುಂಗಲ್ಲಿ ಈರುಳ್ಳಿ ಬೇಡಿಕೆ ಮತ್ತಷ್ಟು ಹೆಚ್ಚುವ ಹಿನ್ನೆಲೆಯಲ್ಲಿ ಬೆಲೆಯೂ ಅಧಿಕವಾಗಲಿದೆ ಎನ್ನಲಾಗುತ್ತಿದೆ.

ವಾಣಿ ವಿಲಾಸ ಮಾರುಕಟ್ಟೆಯ ವರ್ತಕ ಕಿರಣ್ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ, ವಾರದ ಹಿಂದೆ ಕೆಜಿ ಈರುಳ್ಳಿ 40 ರೂ. ಇತ್ತು. ಈಗ ದಪ್ಪ ಈರುಳ್ಳಿ 50 ರೂ. ಇದ್ದರೆ, ಸಣ್ಣ ಈರುಳ್ಳಿ 45 ರೂ. ಇದೆ. ಭಾರೀ ಮಳೆಯಿಂದ ಈರುಳ್ಳಿ ಬೆಳೆ ಕೊಚ್ಚಿ ಹೋಗಿದೆ. ಹೀಗಾಗಿ ಬೇಡಿಕೆಯಷ್ಟು ಪೂರೈಕೆಯಾಗು ತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳಗೊಂಡಿದೆ ಎಂದು ಮಾಹಿತಿ ನೀಡಿದರು.

ದೇವರಾಜ ಮಾರುಕಟ್ಟೆಯ ವ್ಯಾಪಾರಿ ಆನಂದ್ ಮಾತನಾಡಿ, ವಾರದ ಹಿಂದೆ ಕೆಜಿ ಈರುಳ್ಳಿಗೆ 35ರಿಂದ 40 ರೂ. ಇತ್ತು. ಈಗ ಹೊಸ ಈರುಳ್ಳಿ 50 ರೂ. ಇದ್ದರೆ ಹಳೇ ಈರುಳ್ಳಿ 60 ರೂ. ಇದೆ. ಎಪಿಎಂಸಿಯಲ್ಲಿ ಹಳೇ ಈರುಳ್ಳಿ ಕ್ವಿಂಟಲ್‍ಗೆ 4,500 ರೂ. ನಿಂದ 4,800 ರೂ. ಇದ್ದು, ಹೊಸ ಈರುಳ್ಳಿ 3,800 ರೂ.ನಿಂದ 4,200 ರೂ. ವರೆಗೆ ದರ ಕಾಯ್ದುಕೊಂಡಿದೆ ಎಂದರು.

ಇಡೀ ದೇಶಕ್ಕೆ ವರ್ಷದಲ್ಲಿ 10 ತಿಂಗಳು ಮಹಾರಾಷ್ಟ್ರದಿಂದ ಈರುಳ್ಳಿ ಸರಬರಾಜು ಮಾಡಲಾಗುತ್ತದೆ. ಆದರೆ ಅಲ್ಲಿ ಸುರಿದ ಭಾರೀ ಮಳೆ ಹಿನ್ನೆಲೆ ಈರುಳ್ಳಿ ಬೆಳೆಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ತೇವಾಂಶ ಅಧಿಕವಾಗಿ ಕೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಈರುಳ್ಳಿ ಬೆಳೆಗೂ ಇದೇ ಪರಿಸ್ಥಿತಿ ಎದುರಾಗಿ ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಬೆಳೆ ಕೈಗೆ ಬರುವ ಸಮ ಯಕ್ಕೆ ಸರಿಯಾಗಿ ಮಳೆ ಬಂದು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿತು. ಮತ್ತಷ್ಟು ಬೆಲೆ ಜಾಸ್ತಿಯಾಗುವ ಸಾಧ್ಯ ತೆಯೂ ಇದೆ ಎಂದರು.

Translate »