ಒಂದೇ ಐಡಿ ಕಾರ್ಡ್‍ನಲ್ಲಿ ಆಧಾರ್, ಡಿಎಲ್, ಪಾಸ್‍ಪೋರ್ಟ್
ಮೈಸೂರು

ಒಂದೇ ಐಡಿ ಕಾರ್ಡ್‍ನಲ್ಲಿ ಆಧಾರ್, ಡಿಎಲ್, ಪಾಸ್‍ಪೋರ್ಟ್

September 24, 2019

ನವದೆಹಲಿ, ಸೆ. 23- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮ ವಾರ ಆಧಾರ್‍ಗೆ ಗುಡ್ ಬೈ ಹೇಳುವ ಸುಳಿವು ನೀಡಿದ್ದು, ಆಧಾರ್, ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಬ್ಯಾಂಕ್ ಖಾತೆ ಒಳಗೊಂಡ ಬಹು ಉಪಯೋಗಿ ಕಾರ್ಡ್ ಅನ್ನು ಭಾರತೀಯರಿಗೆ ನೀಡುವ ಬಗ್ಗೆ ಮಾತನಾಡಿದ್ದಾರೆ. 2021ರ ಜನಗಣತಿ ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಯಲಿದೆ ಎಂದು ಸಹ ಅಮಿತ್ ಶಾ ಹೇಳಿದ್ದಾರೆ. ಇಂದು ದೆಹಲಿಯಲ್ಲಿ ಜನಗಣತಿ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗಿ ಮಾತ ನಾಡಿದ ಅಮಿತ್ ಶಾ, ಇಲ್ಲಿಯವರೆಗೆ ಪೇಪರ್ ಮೂಲಕ ಜನಗಣತಿ ಮಾಡ ಲಾಗುತ್ತಿತ್ತು. ಆದರೆ 2021ರಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಜನಗಣತಿ ಮಾಡ ಲಾಗುವುದು ಎಂದು ತಿಳಿಸಿದರು.

2021ರ ಸೆನ್ಸಸ್‍ಗೆ ಒಂದು ಮೊಬೈಲ್ ಅಪ್ಲಿಕೇಶನ್ ಬಳಕೆಯಾಗಲಿದೆ. ಇಲ್ಲಿ ಯವರೆಗೆ ನಡೆಯುತ್ತಿದ್ದ ಪೇಪರ್ ಸಮೀಕ್ಷೆ ಯನ್ನು ಈ ಅಪ್ಲಿಕೇಶನ್ ಡಿಜಿಟಲ್ ಸಮೀಕ್ಷೆಯನ್ನಾಗಿ ಪರಿವರ್ತನೆ ಮಾಡ ಲಿದೆ ಎಂದರು. ಆಧಾರ್, ಡಿಎಲ್, ವೋಟರ್ ಐಡಿ ಕಾರ್ಡ್, ಬ್ಯಾಂಕ್ ಖಾತೆ, ಪಾಸ್ ಪೋರ್ಟ್‍ಗಳನ್ನು ಒಳಗೊಂಡ ಒಂದೇ ಕಾರ್ಡ್ ಇದ್ದರೆ ಬಹಳ ಸಹಾಯವಾಗುತ್ತದೆ.

ಬಹು ಉಪಯೋಗಿ ಕಾರ್ಡ್(ಮಲ್ಟಿ ಪರ್ಪಸ್ ಕಾರ್ಡ್) ಇದ್ದರೆ ದೇಶದ ಹಲವು ಸಮಸ್ಯೆಗಳು ಶೀಘ್ರವೇ ಇತ್ಯರ್ಥವಾಗುತ್ತವೆ ಎಂದು ಶಾ ಅಭಿಪ್ರಾಯಪಟ್ಟರು.

Translate »