ಗ್ರಾಮದೇವತೆ ಹಬ್ಬದ ಹೆಸರಲ್ಲಿ ಯುವತಿಯರಿಂದ ಅರೆಬೆತ್ತಲೆ ನೃತ್ಯ ಹಾಲಿ, ಮಾಜಿ ಶಾಸಕರ ಬೆಂಬಲಿಗರಿAದ ಒಂದೇ ಗ್ರಾಮದಲ್ಲಿ ಎರಡು ಕಾರ್ಯಕ್ರಮ ಗ್ರಾಮದೇವತೆ ಹೆಸರಿನಲ್ಲಿ ತಡರಾತ್ರಿವರೆಗೂ ನಡೆದ ಮಾದಕ ನೃತ್ಯ ಕಾರ್ಯಕ್ರಮ ನೋಡಲಾಗದೇ ಎದ್ದು ಹೋದ ಗ್ರಾಮದ ಮಹಿಳೆಯರು ಪುರುಷರು, ಮಕ್ಕಳ ಜೊತೆಗೆ ಅಶ್ಲೀಲವಾಗಿ ನಡೆದುಕೊಂಡ ಯುವತಿಯರು ನಾಗಮಂಗಲದ ತೊಳಸಿಕೊಂಬರಿ ಗ್ರಾಮದೇವರ ಹಬ್ಬದಲ್ಲಿ ಪ್ರಸಂಗ ಸಾರ್ವಜನಿಕ ವಲಯದಲ್ಲಿ ರಾಜಕೀಯ ಮುಖಂಡರ ವಿರುದ್ಧ ವ್ಯಾಪಕ ಆಕ್ರೋಶ ನಾಗಮಂಗಲ,ಮಾ.೯(ಮೋಹನ್‌ರಾಜ್)-ಕಳೆದ ಕೆಲ ವರ್ಷಗಳ ಹಿಂದೆ ನಂಗಾನಾಚ್ ಪ್ರಕರಣದಲ್ಲಿ ರಾಜ್ಯ ವ್ಯಾಪಿ ಸುದ್ದಿ ಮಾಡಿದ್ದ ನಾಗಮಂಗಲ…
ಮೈಸೂರು ಮೆಡಿಕಲ್ ಕಾಲೇಜು ಶತಮಾನೋತ್ಸವಕ್ಕೆ ಪ್ರಧಾನಿ ಮೋದಿಗೆ ಆಹ್ವಾನ
March 10, 2022೨೦೨೪ರ ಆಗಸ್ಟ್ನಲ್ಲಿ ಅದ್ಧೂರಿ ಸಮಾರಂಭ ಸುಮಾರು ೧೦೦ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೆ.ಆರ್., ಚೆಲುವಾಂಬ, ಪಿಕೆಟಿಬಿ ಆಸ್ಪತ್ರೆ ಅಭಿವೃದ್ಧಿ ಸಂಸದ ಪ್ರತಾಪ್‌ಸಿಂಹರಿAದ ಪೂರ್ವಭಾವಿ ಸಭೆ, ಆಗಸ್ಟ್ ಮಾಹೆಯಿಂದ ಪುನರುಜ್ಜೀವನ ಕಾಮಗಾರಿ ಆರಂಭಿಸಲು ಸೂಚನೆ ಮೈಸೂರು,ಮಾ.೯(ಆರ್‌ಕೆ)- ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋ ಧನಾ ಆಸ್ಪತ್ರೆ (ಒಒಅ &ಖI)ಗೆ ಶತಮಾ ನೋತ್ಸವದ ಸಂಭ್ರಮ. ೧೯೨೪ರಲ್ಲಿ ಆರಂಭವಾದ ರಾಜ್ಯದ ಮೊದಲ ಹಾಗೂ ಹಳೆಯ ವೈದ್ಯಕೀಯ ಕಾಲೇಜಿಗೆ ೨೦೨೪ರ ಆಗಸ್ಟ್ನಲ್ಲಿ ೧೦೦ ವರ್ಷ…
ಮುಡಾ ಅಧಿಕಾರಿಗಳಿಂದ ಒತ್ತುವರಿ ತೆರವು ಕಾರ್ಯಾಚರಣೆ
March 10, 2022ವಿಜಯನಗರ ೩ನೇ ಹಂತದಲ್ಲಿ ೧೨೦ ಕೋಟಿ ರೂ. ಮೌಲ್ಯದ ಭೂಮಿ ವಶಕ್ಕೆ ಮೈಸೂರು, ಮಾ.೯(ಆರ್‌ಕೆ)-ಅನಧಿ ಕೃತ ಒತ್ತುವರಿ ತೆರವುಗೊಳಿಸುವ ಕಾರ್ಯಾ ಚರಣೆ ಮುಂದುವರಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧಿಕಾರಿಗಳು, ಮೈಸೂರಿನ ವಿಜಯ ನಗರ ೩ನೇ ಹಂತದಲ್ಲಿ ಸುಮಾರು ೧೨೦ ಕೋಟಿ ರೂ. ಮೌಲ್ಯದ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ. ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸಲಹೆಯಂತೆ ಆಯುಕ್ತ ಡಾ.ಡಿ.ಬಿ.ನಟೇಶ್ ನಿರ್ದೇಶನದ ಮೇರೆಗೆ ಬುಧವಾರ ಬೆಳಗ್ಗೆ ೭ರಿಂದ ೧೦ ಗಂಟೆವರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ವಿಜಯನಗರ ೩ನೇ ಹಂತದ ಪಾರ್ಕ್ಗೆ…
ಉಕ್ರೇನ್‌ನಲ್ಲಿ ರಷ್ಯಾ ರಣಕೇಕೆ
March 9, 2022ರಾಜಧಾನಿ ಕೀವ್ ಮೇಲೆರಗಲು ಕಾದು ಕುಳಿತಿರುವ ರಷ್ಯಾ ಸೇನೆ ಮುಂದುವರೆದ ಬಾಂಬ್, ಮಿಸೈಲ್ ದಾಳಿಯಿಂದ ಉಕ್ರೇನ್ ನಗರಗಳ ರಸ್ತೆಗಳಲ್ಲಿ ಚೆಲ್ಲಾಡಿದ ಹೆಣಗಳು ಕದನ ವಿರಾಮ ಘೋಷಿಸಿ ಕಾದು ಹೊಡೆಯಲು ರಷ್ಯಾ ರಣತಂತ್ರ ಬೀದಿಗೆ ಬಿದ್ದ ಮಕ್ಕಳು, ಕುಟುಂಬಗಳೇ ಛಿದ್ರ ಛಿದ್ರ; ಜೀವ ಉಳಿಸಿಕೊಳ್ಳಲು ಪಲಾಯನ ದೇಶಭಕ್ತಿ ಅಸ್ತçವನ್ನೇ ಹಿಡಿದು ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಉಕ್ರೇನ್ ಕೀವ್(ಉಕ್ರೇನ್), ಮಾ. ೮- ಸಮರ ಮುಂದು ವರೆಸಿರುವ ರಷ್ಯಾ, ಉಕ್ರೇನ್ ಸರ್ವನಾಶಕ್ಕೆ ಶಪಥ ಮಾಡಿರುವಂತೆ ರಣಕೇಕೆ ಹಾಕುತ್ತಿದೆ. ಯುದ್ಧ ಪ್ರಾರಂಭವಾಗಿ ೧೩ ದಿನಗಳಾಗಿದ್ದು,…
ಸೋರಿಕೆಯಾಗಿದ್ದ ಕ್ಲೋರಿನ್ ಸಿಲಿಂಡರ್ ಸ್ಥಳಾಂತರ
March 9, 2022ಚಿಕ್ಕಮಗಳೂರು ಏಜೆನ್ಸಿಯಿಂದಲೇ ವಾಹನದ ಮೂಲಕ ಸಾಗಣೆ ಆಸ್ಪತ್ರೆಯಲ್ಲಿ ಇನ್ನೂ ೨೭ ಮಂದಿಗೆ ಚಿಕಿತ್ಸೆ ಒಟ್ಟಾರೆ ಅಸ್ವಸ್ಥರಾಗಿದ್ದವರು ಸುಮಾರು ೮೭ ಮಂದಿ ಮೈಸೂರು, ಮಾ.೮(ಎಸ್‌ಬಿಡಿ)- ಮೈಸೂ ರಿನ ಕೆಆರ್‌ಎಸ್ ಮುಖ್ಯರಸ್ತೆಯ ರೈಲ್ವೆ ಕ್ವಾರ್ಟರ್ಸ್ ಆವರಣದಲ್ಲಿ ಸೋರಿಕೆಯಾಗಿದ್ದ ಕ್ಲೋರಿನ್ ಸಿಲಿಂಡರ್ ಅನ್ನು ಮಂಗಳವಾರ ಬೆಳಗ್ಗೆ ಸ್ಥಳಾಂತರ ಮಾಡಲಾಯಿತು. ಕ್ಲೋರಿನ್ ಸಿಲಿಂಡರ್ ಸರಬರಾಜು ಮಾಡುತ್ತಿದ್ದ ಚಿಕ್ಕಮಗಳೂರಿನ ಏಜೆನ್ಸಿಗೆ ನಿನ್ನೆ ರಾತ್ರಿಯೇ ಮಾಹಿತಿ ನೀಡಿ, ಅಲ್ಲಿನ ಸಿಬ್ಬಂದಿಯನ್ನು ಕರೆಯಿಸಲಾಗಿತ್ತು. ಮಂಗಳವಾರ ಬೆಳಗ್ಗೆ ೬ ಗಂಟೆ ವೇಳೆಗೆ ಜೆಸಿಬಿ ಮೂಲಕ ಕ್ಲೋರಿನ್ ಸಿಲಿಂಡರ್ ಅನ್ನು…
ಭಾರತೀಯ ಸೇನೆಯಿಂದ ೨ ಬಾರಿ ತಿರಸ್ಕೃತಗೊಂಡ ತಮಿಳುನಾಡು ವಿದ್ಯಾರ್ಥಿ ಉಕ್ರೇನ್ ಸೇನೆ ಸೇರ್ಪಡೆ ಭಾರತೀಯ ಸೇನೆಯಿಂದ ೨ ಬಾರಿ ತಿರಸ್ಕತಗೊಂಡ ತಮಿಳುನಾಡು ವಿದ್ಯಾರ್ಥಿ ಉಕ್ರೇನ್ ಸೇನೆ ಸೇರ್ಪಡೆ
March 9, 2022ಚೆನ್ನೆöÊ, ಮಾ. ೮- ತಮಿಳುನಾಡಿನ ವಿದ್ಯಾರ್ಥಿಯೋರ್ವ ಇದೀಗ ಉಕ್ರೇನ್ ಸೇನೆ ಸೇರಿ ರಷ್ಯಾ ವಿರುದ್ಧ ಹೋರಾ ಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ೨೧ ವರ್ಷದ ಸಾಯಿನಿಕೇಶ್ ರವಿಚಂದ್ರನ್ ಎಂಬ ವಿದ್ಯಾರ್ಥಿ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್‌ನಲ್ಲಿ ಅರೆ ಸೈನಿಕ ಪಡೆಗಳನ್ನು ಸೇರಿ ಕೊಂಡಿದ್ದಾನೆ. ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ ನೀಡಿ ಪೋಷಕರನ್ನು ವಿಚಾರಿಸಿದ್ದು, ಈ ವೇಳೆ ಸಾಯಿನಿ ಕೇಶ್ ಭಾರತೀಯ ಸೇನೆಗೆ ಸೇರಲು ಅರ್ಜಿ ಸಲ್ಲಿಸಿದ್ದರು. ಆದರೆ ಅವರನ್ನು ೨ ಬಾರಿ ತಿರಸ್ಕರಿಸಲಾಗಿತ್ತು…
ನಮ್ಮ ದೇಶಭಕ್ತಿ ಗೆದೆ್ದÃ ಗೆಲ್ಲುತ್ತೆ
March 9, 2022ಕೀವ್, ಮಾ. ೮-ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ÷್ಕ ಅವರು ಸಾಮಾಜಿಕ ಜಾಲ ತಾಣದಲ್ಲಿ ತಾವಿರುವ ಸ್ಥಳದ ವಿಳಾಸವನ್ನು ಹಂಚಿಕೊAಡು ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರು ವುದಿಲ್ಲ ಎಂದು ರಷ್ಯಾಗೆ ತಿರುಗೇಟು ನೀಡಿದ್ದಾರೆ. ನಾನು ಬ್ಯಾಂಕೋವಾ ನಲ್ಲಿರುವ ಕೀವ್‌ನಲ್ಲಿದ್ದು, ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರು ವುದಿಲ್ಲ. ಏನೇ ಆಗಲಿ ನಮ್ಮ ಈ ದೇಶ ಭಕ್ತಿಯ ಯುದ್ಧ ಗೆದ್ದೇ ಗೆಲ್ಲುತ್ತೇವೆ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆ ಯಲ್ಲಿ ಕೆಲ ಸಾಲುಗಳನ್ನು ಬರೆದು ಕೊಂಡು ಪೋಸ್ಟ್ ಮಾಡಿದ್ದಾರೆ. ಫೆಬ್ರವರಿ ೨೪ ರಂದು…
ಟಿಬೆಟಿಯನ್ ಗೋಲ್ಡನ್ ಟೆಂಪಲ್ ಪ್ರವಾಸಿಗರಿಗೆ ಮುಕ್ತ
March 9, 2022ಬೈಲುಕುಪ್ಪೆ, ಮಾ. ೮(ರಾಜೇಶ್)- ೭೦೦ ದಿನದ ಬಳಿಕ ಲಾಕ್‌ಡೌನ್ ಹಿಂಪಡೆದು ಬುದ್ಧನ ವೀಕ್ಷಣೆ ಮಾಡಲು ಪ್ರವಾಸಿಗರಿಗೆ ಅನುವು ಮಾಡಿಕೊಟ್ಟ ಗೋಲ್ಡನ್ ಟೆಂಪಲ್. ಭಾರತದಲ್ಲಿ ಹೆಸರುವಾಸಿಯಾಗಿರುವ ಪ್ರವಾಸಿ ತಾಣಗಳಲ್ಲಿ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿರುವ ಟಿಬೆಟಿಯನ್ನರ ಗೋಲ್ಡನ್ ಟೆಂಪಲ್ ಕೂಡ ಒಂದು. ಪ್ರತಿನಿತ್ಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ಇತರ ರಾಜ್ಯಗಳು ಸೇರಿದಂತೆ ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬುದ್ಧನ ದರ್ಶನ ಮಾಡಲು ಜನಜಂಗುಳಿಯೇ ಈ ಸ್ಥಳದಲ್ಲಿ ಕಂಡುಬರುತ್ತಿತ್ತು. ಆದರೆ ಚೀನಾದ ವ್ಯೂಹಾನ್‌ನಲ್ಲಿ ಉದ್ಭವಗೊಂಡ…
ಕ್ಲೋರಿನ್ ಸೋರಿಕೆ
March 8, 2022ಮೈಸೂರು,ಮಾ.7(ಎಸ್‍ಬಿಡಿ)-ಮೈಸೂರಿನ ಕೆಆರ್‍ಎಸ್ ಮುಖ್ಯರಸ್ತೆಯಲ್ಲಿ ರೈಲ್ವೆ ಇಲಾಖೆ ಜಾಗದಲ್ಲಿದ್ದ ಕ್ಲೋರಿನ್ ಸಿಲಿಂಡರ್‍ನಿಂದ ಅನಿಲ ಸೋರಿಕೆಯಾಗಿ ಸುಮಾರು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಸೋಮವಾರ ಸಂಭವಿಸಿದೆ. ವಾಣಿ ವಿಲಾಸ ವಾಟರ್ ವಕ್ರ್ಸ್ ಎದುರಿನ ರೈಲ್ವೆ ಲೋಕೋ ಕಾಲೋನಿಗೆ ಹೊಂದಿಕೊಂಡಂತಿರುವ ಉದ್ಯಾ ನವನದಲ್ಲಿ ಅಳವಡಿಸಿದ್ದ ಕ್ಲೋರಿನ್ ಸಿಲಿಂಡರ್‍ನಿಂದ ಸೋಮವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಅನಿಲ ಸೋರಿಕೆಯಾಗಿದ್ದು, ಕೆಆರ್‍ಎಸ್ ರಸ್ತೆ, ಯಾದವಗಿರಿ ರಸ್ತೆಗಳಲ್ಲಿ ವಾಹನಗಳಲ್ಲಿ ತೆರಳುತ್ತಿದ್ದವರು, ರಕ್ಷಣಾ ಕಾರ್ಯಾಚರಣೆಗೆ ದಾವಿಸಿದ್ದ ಅಗ್ನಿ ಶಾಮಕ ಸಿಬ್ಬಂದಿ, ರೈಲ್ವೆ ಕ್ವಾರ್ಟರ್ಸ್ ನಿವಾಸಿಗಳು, ರೈಲ್ವೆ…
ರಾಜ್ಯದಲ್ಲಿ 21,232 ಮಂದಿ ಸರ್ಕಾರಿ ನೌಕರರಲ್ಲಿ ಅನಧಿಕೃತ ಪಡಿತರ ಚೀಟಿ
March 8, 2022ಮೈಸೂರು, ಮಾ.7(ಎಸ್‍ಪಿಎನ್)- ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಒಟ್ಟು 21,232 ಮಂದಿ ಸರ್ಕಾರಿ, ಅರೆ ಸರ್ಕಾರಿ ನೌಕರರು ಅನಧಿಕೃತವಾಗಿ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿ ಪಡೆದಿದ್ದಾರೆ. ಇಂತಹ ಸರ್ಕಾರಿ ನೌಕರರಿಗೆ ಕಾರಣ ಕೇಳಿ ನೋಟೀಸ್ ಅನ್ನು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಿಂದ ಆಯಾಯ ಜಿಲ್ಲಾ ಹಂತದ ಅಧಿಕಾರಿಗಳ ಮೂಲಕ ಜಾರಿಗೊಳಿಸಲಾಗಿದೆ. ಆದ್ಯತಾ ಪಡಿತರ ಚೀಟಿಗಳನ್ನು(ಬಿಪಿಎಲ್) ಅಕ್ರಮವಾಗಿ ಪಡೆಯುವುದನ್ನು ತಪ್ಪಿಸಲು ಸರ್ಕಾರದಿಂದ ಅನುದಾನಿತ ಸಂಸ್ಥೆಗಳಲ್ಲಿ…









