ಮೈಸೂರು,ಮಾ.2(ಎಂಟಿವೈ)- ಮೈಸೂರು ಮೃಗಾಲಯಕ್ಕೆ ನಿರ್ಮಿಸ ಲಾಗಿದ್ದ `ಸಬ್-ವೇ’ಯನ್ನು ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿ, ಪ್ರವಾಸಿಗರ ಸುಗಮ, ಸುರಕ್ಷಿತ ಸಂಚಾರಕ್ಕೆ ಸಮರ್ಪಿಸಿದರು. ಮೃಗಾಲಯ ಮುಂಭಾಗದ ರಸ್ತೆಯಲ್ಲಿ ಸದಾ ವಾಹನ ದಟ್ಟಣೆಯಿಂದಾಗಿ ಪಾರ್ಕಿಂಗ್ ಸ್ಥಳದಿಂದ ಪ್ರವಾಸಿಗರು ಮೃಗಾಲಯ ಪ್ರವೇಶಿಸಲು ಪರದಾಡುತ್ತಿದ್ದ ಹಿನ್ನೆಲೆಯಲ್ಲಿ ಮೃಗಾಲಯದ ವತಿಯಿಂದ ಅಂಡರ್ ಪಾಸ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿತ್ತು. ಮೃಗಾಲಯ ಪ್ರಾಧಿಕಾರದಿಂದ ಅನು ಮೋದನೆ ಪಡೆದು 1.95 ಕೋಟಿ ರೂ. ವೆಚ್ಚದಲ್ಲಿ ಈ ಸಬ್ ವೇ ನಿರ್ಮಾಣ ಕಾಮ ಗಾರಿಯನ್ನು 2020ರ ಜ.17ರಂದು ಆರಂ…
ಉಕ್ರೇನ್‍ನ ಕನ್ನಡಿಗ ವಿದ್ಯಾರ್ಥಿಗಳ ಸುಲಭ ಮಾಹಿತಿಗಾಗಿ ವಾಟ್ಸಾಪ್ ಗ್ರೂಪ್
March 3, 2022ಮೈಸೂರು,ಮಾ.2(ಎಂಟಿವೈ)-ಉಕ್ರೇನ್ ನಲ್ಲಿ ಭಾರತೀಯ ರಕ್ಷಣೆ ಗಾಗಿ ಕೇಂದ್ರ ಸರ್ಕಾರ ಶಕ್ತಿ ಮೀರಿ ಶ್ರಮಿಸು ತ್ತಿದ್ದು, ಕನ್ನಡಿಗ ವಿದ್ಯಾ ರ್ಥಿಗಳ ವಾಟ್ಸಾಪ್ ಗ್ರೂಪ್ ಮಾಡಿ, ಅಗತ್ಯ ಸಲಹೆಯೊಂದಿಗೆ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ. ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಉಕ್ರೇನ್‍ನಲ್ಲಿ 10 ಸಾವಿರಕ್ಕಿಂತ ಹೆಚ್ಚು ಮಂದಿ ಭಾರತೀಯ ವಿದ್ಯಾರ್ಥಿಗಳಿದ್ದಾರೆಂಬ ಶಂಕೆಯಿದೆ. ಅಲ್ಲಿರುವ ಭಾರತೀಯರನ್ನು ಸುರಕ್ಷಿತ ವಾಗಿ ಕರೆತರಲು ಭಾರತ ಪಣ ತೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬ ಭಾರತೀಯರನ್ನು ಉಕ್ರೇನ್‍ನಿಂದ ಕರೆತರಲು ಏನೇನು…
ಉಕ್ರೇನ್‍ನ ಕನ್ನಡಿಗರ ರಕ್ಷಣೆಗೆ ಸರ್ಕಾರದಿಂದ ಅಗತ್ಯ ಎಲ್ಲಾ ಕ್ರಮ: ಸಚಿವ ಎಸ್‍ಟಿಎಸ್
March 3, 2022ಮೈಸೂರು,ಮಾ.2(ಎಂಟಿವೈ)-ಉಕ್ರೇನ್‍ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ. ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಎಷ್ಟು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿದ್ದಾರೆ ಎಂಬ ಮಾಹಿತಿ ಕಲೆ ಹಾಕು ವಂತೆ ಸೂಚಿಸಿದ್ದೆ. ಜಿಲ್ಲಾಧಿಕಾರಿಗಳು ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ. ಅದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಉಕ್ರೇನ್ ನಲ್ಲಿ ಮೈಸೂರಿನ 28 ವಿದ್ಯಾರ್ಥಿಗಳಿರುವ ಮಾಹಿತಿ ಇದೆ. ಜಿಲ್ಲಾಡಳಿತದಿಂದ ವಿದ್ಯಾರ್ಥಿಗಳ ಪೋಷಕರ ಮನೆಗೆ ಮಾಹಿತಿ ನೀಡುವುದು…
ಮೈಸೂರಿನಾದ್ಯಂತ ವೈಭವದಿಂದ ಮಹಾ ಶಿವರಾತ್ರಿ ಆಚರಣೆ
March 3, 2022ಮೈಸೂರು,ಮಾ.2(ಎಂಟಿವೈ)- ಮೈಸೂ ರಲ್ಲಿ ಮಂಗಳವಾರ ಎಲ್ಲೆಲ್ಲೂ ಶಿವನಾಮ ಸ್ಮರಣೆ…, ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಕಳೆಗುಂದಿದ್ದ ಹಬ್ಬಗಳು ಶಿವರಾತ್ರಿ ಹಬ್ಬದ ಮೂಲಕ ಮತ್ತೆ ವೈಭವದಿಂದ ಆಚರಿಸಲಾಯಿತು. ಮೈಸೂರಿನ ವಿವಿಧೆಡೆಯಿರುವ ಶಿವನ ದೇವಾಲಯಗಳಲ್ಲಿ ಮಂಗಳವಾರ ಮುಂಜಾನೆ ಯಿಂದ ಬುಧವಾರದ ಮುಂಜಾನೆವರೆಗೂ ಭಕ್ತರು ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಆಚರಿ ಸಿದರು. ಕೆಲವೆಡೆ ರಾತ್ರಿಯಿಡಿ ಭಜನೆ, ಹರಿಕಥೆ ಆಯೋಜಿಸುವ ಮೂಲಕ ಜಾಗರಣೆಗೆ ವೇದಿಕೆ ಮಾಡಿಕೊಡುವ ಮೂಲಕ ಶಿವ ನಾಮಸ್ಮರಣೆ ಮಾಡಲಾಯಿತು. ಅರಮನೆ ಅಂಗಳದಲ್ಲಿ ಮನೆ ಮಾಡಿದ ಸಂಭ್ರಮ: ಪ್ರತಿವರ್ಷದಂತೆ ಶಿವರಾತ್ರಿ ಹಬ್ಬದ…
ರಷ್ಯಾದಿಂದ ಅಣ್ವಸ್ತ್ರ ಎಚ್ಚರಿಕೆ
March 2, 2022ಮಾಸ್ಕೋ, ಫೆ. ೨೮- ಜಾಗತಿಕ ಸಮು ದಾಯಗಳಿಂದ ಎಚ್ಚರಿಕೆ ಹಾಗೂ ಉಕ್ರೇನ್ ನಲ್ಲಿ ರಷ್ಯಾ ಸೈನಿಕರಿಗೆ ಎದುರಾಗುತ್ತಿರುವ ಪ್ರತಿರೋಧದಿಂದಾಗಿ ಕುಪಿತಗೊಂಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಣ್ವಸ್ತç ಪ್ರಯೋಗಕ್ಕೆ ಸಿದ್ಧತೆ ಮಾಡಿಕೊಳ್ಳು ವಂತೆ ತಮ್ಮ ರಾಷ್ಟçದ ಅಣ್ವಸ್ತç ಪಡೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಗಳು ಹರಿದಾಡುತ್ತಿವೆ. ಪುಟ್ಟ ರಾಷ್ಟç ಉಕ್ರೇನ್ ಮೇಲಿನ ಯುದ್ಧ ಒಂದೆರಡು ದಿನದಲ್ಲಿ ಮುಗಿಯಬಹುದು ಎಂಬ ಪುಟಿನ್ ಅವರ ಲೆಕ್ಕಾಚಾರ ತಲೆಕೆಳ ಗಾಗಿದ್ದು, ಉಕ್ರೇನ್ ಸೈನಿಕರು ಮತ್ತು ನಾಗ ರಿಕರು ರಷ್ಯಾ ಪಡೆಗೆ…
ರೈಸ್ ಪುಲ್ಲಿಂಗ್ ದಂಧೆಯಲ್ಲಿ ವಂಚಿಸಿದ ವ್ಯಕ್ತಿ ಹತ್ಯೆ
March 2, 2022ಮಳವಳ್ಳಿ, ಫೆ.೨೮-ರೈಸ್ ಪುಲ್ಲಿಂಗ್ ದಂಧೆಯಲ್ಲಿ ವಂಚನೆ ಮಾಡಿದ ವ್ಯಕ್ತಿಯನ್ನು ಹತ್ಯೆ ಮಾಡಿದ ಆರೋಪ ದಡಿ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ. ಚಂದ್ರ ಶೇಖರ್ ಪುತ್ರ ವೈದ್ಯ ಡಾ. ಶ್ರೀಕಾಂತ್ (೪೨) ಸೇರಿದಂತೆ ಎಂಟು ಮಂದಿಯನ್ನು ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಮಾಜಿ ಶಾಸಕ ಪುತ್ರ ಡಾ. ಶ್ರೀಕಾಂತ್, ಗ್ರಾಪಂ ಮಾಜಿ ಸದಸ್ಯ ಕುಮಾರ್ (೪೦), ಅಭಿಷೇಕ್ (೨೬), ಮಂಜುನಾಥ್ ಅಲಿಯಾಸ್ ಮಂಜು (೨೩), ಆನಂದ್ (೨೪), ವಜ್ರಮುನಿ ಅಲಿಯಾಸ್ ವಿಕ್ಕಿ (೨೪), ಪುನೀತ್ (೩೨),…
ಮೈಸೂರು ವಿವಿಯಿಂದ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಪದವಿ, ಸ್ನಾತಕೋತ್ತರ ಹಂತದಲ್ಲೇ ಸಂಶೋಧನೆಗೆ ಆದ್ಯತೆ ನೀಡಬೇಕು
March 2, 2022ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಅಶೋಕ್ ಮಿಶ್ರ ಸಲಹೆ ಮೈಸೂರು, ಫೆ.೨೮(ಆರ್‌ಕೆಬಿ)- ನಮ್ಮ ನಡುವಿನ ಹಲವು ಸಮಸ್ಯೆಗಳಿಗೆ ವಿಜ್ಞಾನ ದಿಂದ ಪರಿಹಾರವಿದೆ. ಹಾಗಾಗಿ ಸರ್ಕಾರ ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದಿAದಲೇ ಸಂಶೋಧನೆಗೆ ಆದ್ಯತೆ ನೀಡಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಅಶೋಕ ಮಿಶ್ರ ಅಭಿಪ್ರಾಯಪಟ್ಟರು. ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟಿçÃಯ ವಿಜ್ಞಾನ ದಿನಾ ಚರಣೆ ಕಾರ್ಯಕ್ರಮದಲ್ಲಿ `ಸಂಶೋಧನೆ, ಸೃಜನಶೀಲತೆ, ನಾವಿನ್ಯತೆ ಮತ್ತು ಅದರ ಆಚೆ’ ಕುರಿತು ವಿಚಾರ ಮಂಡಿಸಿದರು. ಅಭಿವೃದ್ಧಿ…
ಒಕ್ಕಲಿಗರು ಜೆಡಿಎಸ್ ತಿರಸ್ಕರಿಸಬೇಕು
March 2, 2022ರಾಜ್ಯ ಒಕ್ಕಲಿಗರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಕೆ. ಮಹದೇವ್ ಮನವಿ ಸಂಘಕ್ಕೆ ಆಡಳಿತಾಧಿಕಾರಿ ನೇಮಕವಾಗಿದ್ದರ ಹಿಂದೆ ದೇವೇಗೌಡರ ಕುಟುಂಬದ ಸ್ವಾರ್ಥವಿದೆ; ಆರೋಪ ಮೈಸೂರು,ಫೆ.೨೮(ಪಿಎಂ)-ರಾಜ್ಯ ಒಕ್ಕಲಿಗರ ಸಂಘಕ್ಕೆ ಹೆಚ್.ಡಿ.ಕುಮಾರಸ್ವಾಮಿ ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆಡಳಿತಾಧಿಕಾರಿ ನೇಮಕಕ್ಕೆ ಕ್ರಮ ಕೈಗೊಂಡಿದ್ದರು. ಇದು ಸಂಘ ಮತ್ತು ಸಮುದಾಯದ ಒಳತಿಗಲ್ಲ. ಬದಲಿಗೆ ಅವರ ಸ್ವಾರ್ಥಕ್ಕಾಗಿ ಎಂದು ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಕೆ.ಮಹದೇವ್ ದೂರಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಒಕ್ಕಲಿಗರ ಸಂಘ…
ಜನರ ಬದುಕಿಗಾಗಿ ನಮ್ಮ ಹೋರಾಟ: ಡಿ.ಕೆ. ಶಿವಕುಮಾರ್
March 2, 2022ಬೆಂಗಳೂರು, ಫೆ. ೨೮- ಮೇಕೆದಾಟು ಯೋಜನೆಯ ಶೀಘ್ರ ಜಾರಿಗೆ ಒತ್ತಾಯಿಸಿ ಕರ್ನಾಟಕ ಕಾಂಗ್ರೆಸ್ ನಾಯಕರ ೨ನೇ ಭಾಗದ ಪಾದಯಾತ್ರೆ ಸೋಮವಾರ ಮುಂದುವರಿದಿದೆ. ಕೋವಿಡ್ ಮೂರನೇ ಅಲೆಯ ಉತ್ತುಂಗ ಸಮಯದಲ್ಲಿ ಸಾವಿರಾರು ಜನರನ್ನು ಸೇರಿಸಿ ಪಾದಯಾತ್ರೆ ಮಾಡ ಬೇಡಿ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿ ದ್ದರಿಂದ ಒಂದು ತಿಂಗಳ ಹಿಂದೆ ಕಾಂಗ್ರೆಸ್‌ನ ಪಾದಯಾತ್ರೆ ರಾಮನಗರದಲ್ಲಿ ಸ್ಥಗಿತಗೊಂಡಿತ್ತು. ರಾಮನಗರದಲ್ಲಿ ನಿಂತಿದ್ದ ಮೇಕೆದಾಟು ಪಾದಯಾತ್ರೆ ೨.೦ಕ್ಕೆ ನಿನ್ನೆ ಚಾಲನೆ ಸಿಕ್ಕಿದೆ. ೨ನೇ ಹಂತದ ಪಾದ ಯಾತ್ರೆ ಮಾರ್ಚ್ ೩ ನೇ ತಾರೀಕು ಬೆಂಗಳೂರಿನ…
ಮೇಕೆದಾಟು ಯಾತ್ರೆ ಡಿಕೆಶಿ ಬ್ರದರ್ಸ್ ವಾಕಿಂಗ್ ಅಷ್ಟೇ
March 2, 2022ಬೆಂಗಳೂರು, ಫೆ. ೨೮(ಕೆಎಂಶಿ)-ಕಾAಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ ರಾಜಕೀಯ ಲಾಭದ ಯಾತ್ರೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪಾದಯಾತ್ರೆಗೆ ಬಹಳ ಮಹತ್ವ ನೀಡುವ ಅವಶ್ಯಕತೆ ಇಲ್ಲ. ಮೇಕೆದಾಟು ಯೋಜನೆ ವಸ್ತುಸ್ಥಿತಿಯ ಅರಿವಿದ್ದರೂ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ, ಕಾಂಗ್ರೆಸ್ ಆಡಳಿತವಿದ್ದ ಸಂದರ್ಭದಲ್ಲಿ ಯೋಜನೆಗೆ ಡಿಪಿಆರ್ ಕೂಡ ಸಿದ್ಧಪಡಿಸಲು ಸಾಧ್ಯವಾಗಲಿಲ್ಲ. ಈ ಯೋಜನೆಗೆ ಕಾಂಗ್ರೆಸ್ ಕೊಡುಗೆ ಏನು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ ಎಂದರು. ಮೇಕೆದಾಟು ಯೋಜನೆ ಹಾಗೂ ಕಳಸಾ ಬಂಡೂರಿ…










