ಮೈಸೂರಲ್ಲಿ `ಕಾವೇರಿ ಕೂಗು’ ಅಭಿಯಾನ ಈಶಾ ಫೌಂಡೇಷನ್‍ನ ಸದ್ಗುರು ಜಗ್ಗಿ  ವಾಸುದೇವ್ ನೇತೃತ್ವದಲ್ಲಿ ಬೈಕ್ ರ್ಯಾಲಿ
ಮೈಸೂರು

ಮೈಸೂರಲ್ಲಿ `ಕಾವೇರಿ ಕೂಗು’ ಅಭಿಯಾನ ಈಶಾ ಫೌಂಡೇಷನ್‍ನ ಸದ್ಗುರು ಜಗ್ಗಿ  ವಾಸುದೇವ್ ನೇತೃತ್ವದಲ್ಲಿ ಬೈಕ್ ರ್ಯಾಲಿ

September 7, 2019

ಮೈಸೂರು, ಸೆ.6(ಆರ್‍ಕೆಬಿ)- `ಭಾರತಂ ಮಹಾ ಭಾರತಂ, ಗಂಗಾ-ಯಮುನಾ ಪುಣ್ಯ ತೀರ್ಥಂ, ಸಿಂಧು ಯಮುನಾ ಕಾವೇರಿ, ಜೀವನ ಕಾರಣ ಮೂಲತತ್ವಂ’ ಗೀತೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಈಶಾ ಫೌಂಡೇಷನ್ ವತಿಯಿಂದ ಕಾವೇರಿ ಕೂಗು ಅಭಿಯಾನದ ಬೈಕ್ ರ್ಯಾಲಿ ನಡೆಯಿತು.

ಕಾವೇರಿ ನದಿಯ ಪುನಶ್ಚೇತನಕ್ಕಾಗಿ ಈಶಾ ಫೌಂಡೇಷನ್‍ನ ಸದ್ಗುರು ಜಗ್ಗಿ ವಾಸುದೇವ್ ಕೈಗೊಂಡಿರುವ `ಕಾವೇರಿ ಕೂಗು’ ಅಭಿಯಾನದ ಬೈಕ್ ರ್ಯಾಲಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶುಕ್ರವಾರ ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಿದರು.

ಸದ್ಗುರು ಜಗ್ಗಿ ವಾಸುದೇವ್ ಸ್ವತಃ ಬೈಕ್ ರ್ಯಾಲಿಯ ಮುಂಚೂಣಿ ಯಲ್ಲಿದ್ದರು. 5 ಕಿ.ಮೀ. ಉದ್ದದ ರ್ಯಾಲಿಯಲ್ಲಿ `ಕಾವೇರಿ ಕೂಗು’ ಘೋಷವಾಕ್ಯವುಳ್ಳ ನೀಲಿ ಬಣ್ಣದ ಟೀ ಶರ್ಟ್ ತೊಟ್ಟ ಸವಾರರ ನೂರಾರು ಬೈಕ್‍ಗಳು ಪಾಲ್ಗೊಂಡಿದ್ದವು. ಅಲ್ಲಿಂದ ಹೊರಟ ಬೈಕ್ ರ್ಯಾಲಿ ಜಯಚಾಮರಾಜ ಒಡೆಯರ್ ವೃತ್ತ (ಹಾಡಿಂಜ್ ವೃತ್ತ), ಗನ್ ಹೌಸ್, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್‍ಬಿ ರಸ್ತೆ, ಜಗಜೀವನರಾಂ ವೃತ್ತ (ರೈಲ್ವೆ ವೃತ್ತ), ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ದೊಡ್ಡ ಗಡಿಯಾರದ ಬಳಿ ಅಂತ್ಯಗೊಂಡಿತು. ತಲಕಾವೇರಿಯಿಂದ ಪೂಂಪುಹಾರ್ ವರೆಗೆ ನಂತರ ಚೆನ್ನೈವರೆಗಿನ `ಕಾವೇರಿ ಕೂಗು’ ಅಭಿಯಾನಕ್ಕೆ ಸೆ.3ರಂದು ಮಡಿಕೇರಿಯಲ್ಲಿ ಚಾಲನೆ ನೀಡಲಾಗಿತ್ತು. ಅಲ್ಲಿಂದ ಆರಂಭವಾದ ಅಭಿಯಾನ ಹುಣಸೂರು ಮಾರ್ಗವಾಗಿ ಮೈಸೂ ರಿಗೆ ಬಂದಿತ್ತು. ಗುರುವಾರ ಸಂಜೆ ಮೈಸೂರಿನ ಮಾನಸ ಗಂಗೋತ್ರಿಯ ಆಂಪಿ ಥಿಯೇಟರ್‍ನಲ್ಲಿ ಬಹಿರಂಗ ಸಭೆ ನಡೆ ದಿತ್ತು. ಬಳಿಕ ಶುಕ್ರವಾರ ಮೈಸೂರಿನಲ್ಲಿ ಬೈಕ್ ರ್ಯಾಲಿ ನಡೆಯಿತು. ನಂತರ ಸಂಜೆ ಸದ್ಗುರು ಜಗ್ಗಿ ವಾಸುದೇವ್ ಅವರ ಕಾವೇರಿ ಕೂಗು ಅಭಿಯಾನ ಮಂಡ್ಯದಲ್ಲಿ ಬಹಿರಂಗ ಸಭೆ ಬಳಿಕ ಸೆ.8ರಂದು ಬೆಂಗಳೂರಿಗೆ ತೆರಳಲಿದೆ.

Translate »