ಮೈಸೂರು, ಮಾ.3(ಎಂಕೆ)- ‘ಫ್ಲಾರೆನ್ಸ್ ನೈಟಿಂಗೇಲ್’ ಅವರ 200ನೇ ಜನ್ಮ ದಿನೋತ್ಸವವನ್ನು ಮೈಸೂರು ಜಿಲ್ಲಾ ಶುಶ್ರೂಷ ಶಿಕ್ಷಕರು ಹಾಗೂ ಶುಶ್ರೂಷಕರ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಕರ ಸಂಘದ ಜಿಲ್ಲಾ ಘಟಕ, ದಿ ಟ್ರೈನ್ಡ್ ನರ್ಸಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಆಚರಣೆ ಮಾಡಲಾಯಿತು.
ಮೈಸೂರಿನ ಅರಮನೆ ಉತ್ತರ ದ್ವಾರ ದಲ್ಲಿರುವ ಕೋಟೆ ಆಂಜನೇಯ ದೇವ ಸ್ಥಾನದ ಎದುರು ಕಾರ್ಯಕ್ರಮ ಉದ್ಘಾಟಿ ಸಿದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮಾತನಾಡಿ, ರೋಗಿಗಳ ಬಗ್ಗೆ ನಿರ್ಲಕ್ಷ್ಯ ಮಾಡದೇ, ಅಸಡ್ಡೆ ತೋರದೆ ಪ್ರೀತಿಯಿಂದ ಆರೈಕೆ ಮಾಡುವವರೇ ಶುಶ್ರೂಷಕಿಯರು. ರೋಗಿಗಳ ಆರೈಕೆಗೆ ವಿಶೇಷ ಗಮನ ನೀಡಲು ಶುಶ್ರೂಷಕಿಯರಿಗೆ ಹೆಚ್ಚಿನ ತಾಳ್ಮೆ ಅಗತ್ಯ ಎಂದು ಹೇಳಿದರು.
ಶತಮಾನಗಳ ಹಿಂದೆ ಫ್ಲಾರೆನ್ಸ್ ನೈಟಿಂಗೇಲ್ ಬಿತ್ತಿದ ಬೀಜವಿಂದು ಬೃಹದಾ ಕಾರವಾಗಿ ಬೆಳೆದಿದೆ. ಇಂದಿನ ಪರಿಸ್ಥಿತಿ ಯಲ್ಲಿ ಶುಶ್ರೂಷಕಿಯರಿಗೆ ಬೇಡಿಕೆ ಹೆಚ್ಚಾಗಿದೆ. ಸಾಮಾನ್ಯ ವಾರ್ಡ್‍ಗಳಲ್ಲಿ ಹಾಗೂ ಐಸಿಯು ವಾರ್ಡ್‍ಗಳಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಸರಿಯಾಗಿ ಅರಿಯಬೇಕಿದೆ ಎಂದ ಅವರು, ವೈದ್ಯ ಕೀಯ ಕ್ಷೇತ್ರಕ್ಕೆ ಶುಶ್ರೂಷಕಿಯರ ಕೊಡುಗೆ ಹೆಚ್ಚಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೆರವಣಿಗೆ: ಬಳಿಕ ನೂರಾರು ಶುಶ್ರೂ ಷಕಿಯರು ಹಾಗೂ ವಿದ್ಯಾರ್ಥಿಗಳು ಮೇಣದ ಬತ್ತಿ ಹಿಡಿದು ಮೆರವಣಿಗೆ ನಡೆಸಿದರು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಕೆ.ಆರ್.ವೃತ್ತದಿಂದ ಬಸವೇಶ್ವರ ರಸ್ತೆ ಮಾರ್ಗವಾಗಿ ಸಾಗಿ ಜೆಎಸ್‍ಎಸ್ ಮಹಾ ವಿದ್ಯಾಪೀಠದ ಬಳಿ ಸಮಾಪ್ತಿಗೊಂಡಿತು.
ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅಧ್ಯಕ್ಷ ಡಾ.ಟಿ.ದಿಲೀಪ್‍ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್, ಅರಮನೆ ಮಂಡಳಿ ಸಹಾಯಕ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಕಾವೇರಿ ಆಸ್ಪತ್ರೆ ಮುಖ್ಯಸ್ಥ ಡಾ.ಜಿ.ಆರ್.ಚಂದ್ರ ಶೇಖರ್, ಚೈತ್ರ ಆಸ್ಪತ್ರೆಯ ಸಿಇಒ ಡಾ. ಮಹೇಶ್ ಕುಮಾರ್, ಪ್ರೊ.ಗಿರಿಜಾಂಬ ದೇವಿ, ಅನಿತಾ ವಿಕ್ಟೋರಿಯಾ, ಶಶಿಧರ್, ಮೋಹನ್‍ರಾಜ್, ಶೀಲಾ ವಿಲಿಯಂ, ಸುಶೀಲಾ ಮತ್ತಿತರರಿದ್ದರು.