ಮೈಸೂರಲ್ಲಿ ಮಾ.13ರಿಂದ ಜನಪದ, ಬುಡಕಟ್ಟು ಕಲೆ ಉತ್ಸವ
ಮೈಸೂರು

ಮೈಸೂರಲ್ಲಿ ಮಾ.13ರಿಂದ ಜನಪದ, ಬುಡಕಟ್ಟು ಕಲೆ ಉತ್ಸವ

March 4, 2020

ಮೈಸೂರು, ಮಾ.3(ಪಿಎಂ)- ಮೈಸೂರಿ ನಲ್ಲಿ ಮಾ.13ರಿಂದ 3 ದಿನಗಳ ಅಖಿಲ ಭಾರತ ಜನಪದ ಮತ್ತು ಬುಡಕಟ್ಟು ಕಲೆ ಉತ್ಸವ ಹಾಗೂ ವಿಚಾರ ಸಂಕಿರಣ ಆಯೋ ಜಿಸಲಾಗಿದೆ. ಸ್ಥಳೀಯ ಜನಪದ, ಬುಡ ಕಟ್ಟು ಕಲಾವಿದರು ಪಾಲ್ಗೊಳ್ಳಲು ಅವ ಕಾಶವಿದೆ ಎಂದು ಉತ್ಸವದ ಸಂಚಾಲಕ ಕೆ.ವಸಂತ್‍ಕುಮಾರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಖಿಲ ಭಾರತ ಜನಪದ ಮತ್ತು ಬುಡ ಕಟ್ಟು ಕಲಾ ಪರಿಷತ್, ಕರ್ನಾಟಕ ಸಾಹಸ ಕಲಾ ಅಕಾಡೆಮಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಹಾವೇರಿಯ ಕರ್ನಾಟಕ ಜನಪದ ವಿಶ್ವವಿದ್ಯಾನಿಲಯ ಹಾಗೂ ಕೇಂದ್ರ ಸರ್ಕಾರದ ಬುಡಕಟ್ಟು ಸಚಿವಾಲಯದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಮುಕ್ತ ವಿವಿ ಆವರಣದಲ್ಲಿ ಮಾ.15 ರವರೆಗೆ ಉತ್ಸವ ನಡೆಯಲಿದೆ. 18 ರಾಜ್ಯಗಳ 300 ಕಲಾವಿ ದರು, 60ಕ್ಕೂ ಹೆಚ್ಚು ವಿಷಯ ತಜ್ಞರು ಪಾಲ್ಗೊಳ್ಳಲಿದ್ದಾರೆ. ಮುಂದಿನ ತಲೆಮಾರಿಗೆ ಜನಪದ ಮತ್ತು ಬುಡಕಟ್ಟು ಕಲೆಗಳನ್ನು ಪರಿಚಯಿಸಿ ಸಂರಕ್ಷಿಸುವ ಉದ್ದೇಶದಿಂದ ಉತ್ಸವ ಏರ್ಪಡಿಸಲಾಗಿದೆ. ಕೇಂದ್ರದ ಬುಡ ಕಟ್ಟು ಅಭಿವೃದ್ಧಿ ಸಚಿವ ಅರ್ಜುನ್ ಮುಂಡ ಅವರಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನಿಸ ಲಾಗಿದೆ ಎಂದು ವಿವರಿಸಿದರು.

ಕಲಾ ಪ್ರದರ್ಶನ, ವಸ್ತು ಪ್ರದರ್ಶನ ಉತ್ಸ ವದ ಆಕರ್ಷಣೆಯಾಗಿರಲಿದೆ. ಸ್ಥಳೀಯ ರಿಗೆ ಉತ್ಸವದಲ್ಲಿ ಹೆಚ್ಚು ಉತ್ತೇಜನ ನೀಡಲು ಉದ್ದೇಶಿಸಲಾಗಿದ್ದು, ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರದ ಕಲಾವಿ ದರು ಪಾಲ್ಗೊಳ್ಳಬಹುದು. ವಿವರಗಳಿಗೆ ಮೊ: 9731595692 ಸಂಪರ್ಕಿಸಬಹುದು ಎಂದರು. ಉತ್ಸವದ ಸ್ವಾಗತ ಸಮಿತಿಯ ಎನ್.ಜೆ.ಗಿರೀಶ್, ಪ್ರಸನ್ನ ಮೂರ್ತಿ ಇತರರು ಗೋಷ್ಠಿಯಲ್ಲಿದ್ದರು.

Translate »