ಮೊಬೈಲ್ ಅತೀ ಬಳಕೆಯಿಂದ ಯುವಜನರಲ್ಲಿ ಖಿನ್ನತೆ
ಮೈಸೂರು

ಮೊಬೈಲ್ ಅತೀ ಬಳಕೆಯಿಂದ ಯುವಜನರಲ್ಲಿ ಖಿನ್ನತೆ

March 4, 2020

ಯುವಜನ ಕ್ರೀಡಾಕೂಟದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧÀ್ಯಕ್ಷ ಹೆಚ್.ವಿ.ರಾಜೀವ್ ಕಳವಳ
ಮೈಸೂರು,ಮಾ.3(ಎಂಟಿವೈ)- ಅತಿ ಯಾದ ಮೊಬೈಲ್ ಬಳಕೆಯಿಂದ ಯುವ ಸಮುದಾಯ ಖಿನ್ನತೆಗೆ ಒಳಗಾಗುತ್ತಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧÀ್ಯಕ್ಷ ಹೆಚ್.ವಿ.ರಾಜೀವ್ ಕಳವಳ ವ್ಯಕ್ತಪಡಿಸಿದರು.

ಕೇಂದ್ರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶ್ರೀ ತಲಕಾವೇರಿ ಮಹಿಳಾ ವಿದ್ಯಾ ಸಂಸ್ಥೆ ಹಾಗೂ ತಲಕಾವೇರಿ ಯುವಜನ ಸೇವಾ ಮತ್ತು ಕ್ರೀಡಾ ಸಾಂಸ್ಕøತಿಕ ಸಂಘದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಮಂಗಳ ವಾರ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅವರು, ಈ ಸಮಸ್ಯೆಗೆ ಪರಿಹಾರ ವೆಂದರೆ ಯುವಜನರನ್ನು ಕ್ರೀಡಾ ಚಟುವ ಟಿಕೆಗಳಲ್ಲಿ ತೊಡಗಿಸಬೇಕಿದೆ. ಇದರಿಂದ ಉತ್ತಮ ಮತ್ತು ಆರೋಗ್ಯವಂತ ಸಮಾಜ ರೂಪಿಸಬಹುದು ಎಂದು ಹೇಳಿದರು.

ನೆಹರು ಯುವಕೇಂದ್ರದ ಜಿಲ್ಲಾ ಯುವ ಜನ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ ಮಾತನಾಡಿ, ಹಿಂದೆ ದೈಹಿಕ ಶ್ರಮದಾನದ ಪರಿಕಲ್ಪನೆ ಇತ್ತು. ಕ್ರೀಡಾಪಟುಗಳು ಅಂತಹ ಹವ್ಯಾಸ ರೂಢಿಸಿಕೊಳ್ಳಬೇಕು. ನಾವು, ನಮ್ಮವ ರೆಂಬ ಭಾವದಿಂದ ಸಂಘಟನಾತ್ಮಕವಾಗಿ ಬದುಕಬೇಕು ಎಂದು ಕಿವಿಮಾತು ಹೇಳಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಎಂಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ನಿವೃತ್ತ ಪ್ರಾಧ್ಯಾಪಕ ಕೆ.ಎ.ನಾಣಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾ ಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್, ಶ್ರೀ ತಲಕಾವೇರಿ ಮಹಿಳಾ ವಿದ್ಯಾಸಂಸ್ಥೆ ಅಧÀ್ಯಕ್ಷೆ ನಳಿನಿ ತಮ್ಮಯ್ಯ ಮತ್ತಿತರರಿದ್ದರು.

250ಕ್ಕೂ ಹೆಚ್ಚು ಮಂದಿ ಭಾಗಿ: ಯುವಕ- ಯುವತಿಯರ ಮಂಡಳಿಗಳ ಸದಸ್ಯ-ಸದಸ್ಯೆಯರಿಗಾಗಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 250ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಪೈಪೋಟಿ ನಡೆಸಿ ದರು. ಯುವಕರಿಗೆ ಕಬಡ್ಡಿ, ವಾಲಿಬಾಲ್, ಗುಂಡು ಎಸೆತ, 100ಮೀ., 200 ಮೀ. ಓಟ, ಕೇರಂ, ಬಾಲ್ ಇನ್ ದಿ ಬಕೆಟ್, ವೇಗದ ನಡಿಗೆ, ಯುವತಿಯರು, ಮಹಿಳೆ ಯರಿಗೆ ಥ್ರೋ ಬಾಲ್, ಖೋಖೋ, ಪಾಸಿಂಗ್ ದಿ ಬಾಲ್, 100 ಮೀ ಓಟ, ಲಕ್ಕಿ ಕಾರ್ನರ್, ಕೇರಂ, ಬಾಲ್ ಇನ್ ದಿ ಬಕೆಟ್, ವೇಗದ ನಡಿಗೆ ಸ್ಪರ್ಧೆ ನಡೆಯಿತು.

Translate »