ದೀಪಗಳ ಉತ್ಸವದಲ್ಲಿ ಜನತೆಯ ಸಂಭ್ರಮ
ಮೈಸೂರು

ದೀಪಗಳ ಉತ್ಸವದಲ್ಲಿ ಜನತೆಯ ಸಂಭ್ರಮ

November 8, 2018

ಮೈಸೂರು: ಇಳಿ ಸಂಜೆಯ ಕತ್ತಲಲ್ಲಿ ಬೆಳಗಿದ ಸಾವಿರ ದೀಪಗಳು… ಭರತ ನಾಟ್ಯ ವೈಭವ ಸೃಷ್ಟಿಸಿದ ಕಲಾವಿದೆ ಯರು… ಭಕ್ತಿಯಲ್ಲಿ ಮಿಂದೆದ್ದ ಜನ ಸಮೂಹ…

ಮೈಸೂರಿನ ಜವರೇಗೌಡ ಉದ್ಯಾನ ವನದಲ್ಲಿ ರಘುಲೀಲಾ ಸಂಗೀತ ಮಂದಿರ, ಜಿಎಸ್‍ಎಸ್ ಫೌಂಡೇಶನ್, ವಿಜಯ ವಿಠ್ಠಲ ಶಾಲೆ ಸೇರಿದಂತೆ ವಿವಿಧ ಸಂಘ ಸಂಸ್ಥೆ ಗಳ ಸಂಯುಕ್ತಾಶ್ರಯದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ನಡೆದ ‘ದೀಪ ಧ್ವನಿ’ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶÀ್ಯಗಳಿವು.

ನಾಟ್ಯ ಸಂಸ್ಕøತಿ ಕಲಾ ನಿಕೇತನ ಭರಟ ನಾಟ್ಯ ಹಾಗೂ ಜಾನಪದ ನೃತ್ಯ ಶಾಲೆಯ ವಿದ್ಯಾರ್ಥಿಗಳಾದ ಶ್ರೀರಕ್ಷ, ಸ್ವಾತಿ, ನಯನ, ಚೈತ್ರ, ಕೃಷ್ಣವೇಣಿ, ಲಾಸ್ಯ, ರಕ್ಷಿತಾ ಹಾಗೂ ಭುವನ ‘ಹಚ್ಚೇವು ಕನ್ನಡದ ದೀಪ’, ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ’ ಹಾಡಿಗೆ ಮನೋಜ್ಞ ವಾಗಿ ನೃತ್ಯ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿ ದರೆ, ಉದ್ಯಾನದ ಸುತ್ತಲು ಸಾಗಿದ ಪಂಜಿನ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.

ಇದಕ್ಕೂ ಮೊದಲು ಅಲಂಕಾರಗೊಳಿ ಸಿದ ದೀಪಗಳನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ದೀಪಗಳು ಸಂಸ್ಕøತಿಯ ಸಂಕೇತವಾಗಿವೆ. ಮಣ್ಣಿನ ಹಣತೆಗಳು ವಿನಯ, ಕಾರುಣ್ಯ ದಿಂದ ಬೆಳಗುತ್ತವೆ. ಆದರೆ, ಎಲೆಕ್ಟ್ರಾನಿಕ್ ದೀಪಗಳು ಹತ್ತಿರ ಬಂದರೆ ಸುಟ್ಟುಹಾಕು ತ್ತೇನೆ ಎಂಬ ಅಹಂಕಾರದಿಂದ ಬೀಗುತ್ತವೆ. ಆದ್ದರಿಂದ ಮಣ್ಣಿನ ದೀಪಗಳಲ್ಲಿ ನಮ್ಮ ನೆಲದ ಸಂಸ್ಕøತಿ ಅಡಗಿದೆ ಎಂದರು.

ಮೈಸೂರನ್ನು ಬೆಂಗಳೂರಿನಂತೆ ಆಗಲು ಬೀಡಬಾರದು. ಬೆಂಗಳೂರು ಯಾವ ಊರು ಬೆಳೆಯದಂತೆ ಬೆಳೆದು ನಿಂತಿದೆ. ಇತ್ತೀಚಿನ ದಿನಗಳಲ್ಲಿ ಮೈಸೂರನ್ನು ಪ್ರವಾಸಿಗರ ತಾಣ ವಾಗಿಸುವ ದೃಷ್ಟಿಯಿಂದ ಅಭಿವೃದ್ದಿ ಮಾಡ ಲಾಗುತ್ತಿದೆ. ಆದರೆ, ಲಾಭದ ಆಸೆಯಿಂದ ಕಾಂಪ್ಲೆಕ್ಸ್‍ಗಳನ್ನು ಕಟ್ಟಿ ಮೈಸೂರಿನ ಸೌಂದರ್ಯ ವನ್ನು ಹಾಳು ಮಾಡುತ್ತಿದ್ದಾರೆ. ಪ್ರವಾ ಸೋದ್ಯಮ ಬೆಳೆಸಿದ ದೇಶಗಳು ಇಂದು ದರಿದ್ರ ದೇಶಗಳಾಗಿವೆ. ಮೈಸೂರು ಇರು ವುದು ಪ್ರವಾಸಿಗಳಿಗಲ್ಲ ಇಲ್ಲಿನ ನಿವಾಸಿ ಗಳಿಗೆ. ಯಾವ ದೃಷ್ಟಿ, ಸಿದ್ದಾಂತವಿಲ್ಲದೆ ಬೆಳೆ ಯುತ್ತಿರುವ ಬೆಂಗಳೂರಿನಂತೆ ಮೈಸೂ ರನ್ನು ಬೆಳೆಸುವುದು ಬೇಡ. ಮೈಸೂರಿಗೆ ಚಾರಿತ್ರಿಕ ಹೆಸರಿದ್ದು, ಮಾದರಿ ನಗರವ ನ್ನಾಗಿ ಬೆಳೆಸಬೇಕು. ರಾಜರು ಸುಂದರ ವಾಗಿದ್ದ ಕಟ್ಟಿದ್ದ ನಗರವನ್ನು ಇಂದು ಅಭಿ ವೃದ್ಧಿ ಹೆಸರಿನಲ್ಲಿ ಹಾಳು ಮಾಡಲಾಗು ತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜು, ಪ್ರೊ.ಕೆ.ಟಿ.ವಿರಪ್ಪ, ಜಿಎಸ್‍ಎಸ್ ನಿರ್ದೇಶಕ ಶ್ರೀಹರಿ, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಹಿರಿಯ ಪತ್ರಕರ್ತ ಸಿ.ಕೆ.ಮಹೇಂದ್ರ, ನಾಟ್ಯ ಸಂಸ್ಕøತಿ ಕಲಾ ನಿಕೇತನ ಮುಖ್ಯಸ್ಥೆ ಸುನೀತ ಚಂದ್ರ ಕುಮಾರ್, ಭರತನಾಟ್ಯ ಕಲಾವಿದೆ ಮೇಘನ, ಚಿರಾಗ್ ಚಿರಾಗ್ ಆಡ್ಸ್ ಮುಖ್ಯಸ್ಥ ವಿವೇಕ್, ಅಪ್ನಾದೇಶ್ ಮುಖ್ಯಸ್ಥ ಗಣೇಶ್ ಕುಮಾರ್, ಡಾ.ಪೂರ್ಣಿಮಾ ಉಪಸ್ಥಿತರಿದ್ದರು.

Translate »