ಶಬ್ದಕ್ಕೆ ಬದಲು ಸೌಂಡ್‍ಲೆಸ್, ಬೆಳಕು ಸೂಸುವ ಪಟಾಕಿಗಳತ್ತ ಮುಖಮಾಡಿದ ಜನ
ಮೈಸೂರು

ಶಬ್ದಕ್ಕೆ ಬದಲು ಸೌಂಡ್‍ಲೆಸ್, ಬೆಳಕು ಸೂಸುವ ಪಟಾಕಿಗಳತ್ತ ಮುಖಮಾಡಿದ ಜನ

November 8, 2018

ಮೈಸೂರು:  ಪಟಾಕಿಯಿಂದ ಪರಿಸರ ಮತ್ತು ಮನುಷ್ಯನ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮನೆ- ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿ ಸಿದ ಪರಿಣಾಮ ನಗರದ ನಾಗರಿಕರು ಶಬ್ದಕ್ಕೆ ಗುಡ್ ಬೈ ಹೇಳಿ, ಸೌಂಡ್‍ಲೆಸ್ ಪಟಾಕಿಗಳತ್ತ ಮುಖ ಮಾಡಿದ್ದಾರೆ.

ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆ ಯಲ್ಲಿ ನಗರದಲ್ಲಿ ಪಟಾಕಿ, ಹಣತೆಗಳ ಖರೀದಿ ಜೋರಾಗಿ ನಡೆದಿದೆ. ಆದರೆ, ಕೆಲವು ದಿನಗಳಿಂದ ಸಂಘ-ಸಂಸ್ಥೆಗಳು, ಜನಪ್ರತಿನಿದಿಗಳು `ಪಟಾಕಿ ಬಿಡಿ ಸಾಂಪ್ರ ದಾಯಿಕ ಹಣತೆ ಹಚ್ಚಿ’ ಮತ್ತಿತರೆ ಶೀರ್ಷಿ ಕೆಯಡಿ ಜನರಲ್ಲಿ ಜಾಗೃತಿ ಮೂಡಿಸಿ ದ್ದರು. ಈ ಹಿನ್ನೆಲೆಯಲ್ಲಿ ಪಟಾಕಿಗಳ ಖರೀದಿಯಲ್ಲಿ ಬಾರೀ ಇಳಿಮುಖ ವಾಗಿದೆ. ಆದರೆ, ಖರೀದಿಸುವವರು ಬಾರೀ ಶಬ್ದದ ಪಟಾಕಿಗಳನ್ನು ತ್ಯಜಿಸಿ, ಬೆಳಕನ್ನು ಸೂಸುವ ಪಟಾಕಿಗಳ ಖರೀದಿ ಯಲ್ಲಿ ತೊಡಗಿದ್ದಾರೆ.

ನಗರದ ಜೆ.ಕೆ.ಮೈದಾನದಲ್ಲಿ ಶನಿವಾರ ದಿಂದ 17 ಪಟಾಕಿ ಅಂಗಡಿಗಳು ತಲೆ ಎತ್ತಿದ್ದು, ಸೋಮವಾರದವರೆಗೂ ಹೆಚ್ಚಿನ ಜನರು ಪಟಾಕಿ ಖರೀದಿಸಿರಲಿಲ್ಲ. ಆದರೆ, ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಬಾನಂಗಳದಲ್ಲಿ ಚಿತ್ತಾರ ಬಿಡಿ ಸುವ ಪಟಾಕಿ ಸೇರಿದಂತೆ ಬೆಳಕಿನ ಪಟಾಕಿ ಗಳನ್ನೇ ಹೆಚ್ಚು ಖರೀದಿಸಿದರು ಎಂದು ಪಟಾಕಿ ಅಂಗಡಿ ಮಾಲೀಕ ಶರತ್ ಹೇಳಿದರು.

ಆಕಾಶಬುಟ್ಟಿಗೆ ಬೇಡಿಕೆ: ಸೌಂಡ್ ಲೆಸ್ ಪಟಾಕಿಗಳಿಗೆ ಬೇಡಿಕೆ ಹೆಚ್ಚಿದ್ದು, ಹೂವಿನ ಕುಂಡ, ಸೂಸುರು ಬತ್ತಿ, ಕೃಷ್ಣಚಕ್ರ, ಆಕಾಶ ಬುಟ್ಟಿ ಪಟಾಕಿಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ.

ಪಟಾಕಿಗೆ ಬೇಡಿಕೆ ಕಡಿಮೆ: ಪಟಾಕಿ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಕೆಲವರು ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬದಲ್ಲಿ ಸಂಪ್ರದಾಯದಂತೆ ಪಟಾಕಿ ಸಿಡಿಸಬೇಕೆಂದು ಸೌಂಡ್ ಪಟಾಕಿ ಗಳನ್ನು ತ್ಯಜಿಸಿ, ಬೆಳಕನ್ನು ಸೂಸುವ ಪಟಾಕಿಗಳನ್ನು ಖರೀದಿಸುತ್ತಿದ್ದರು.

ಮಣ್ಣಿನ ಹಣತೆಗಳಿಗೆ ಬೇಡಿಕೆ: ದೀಪಾವಳಿ ಹಬ್ಬಕ್ಕಾಗಿ ಮಣ್ಣಿನಿಂದ ಮಾಡಿದ ವಿಭಿನ್ನ ರೀತಿಯ ಅಲಂಕಾರಿಕ ಹಣತೆಗಳ ಮಾರಾಟವೂ ಜೋರಾಗಿದ್ದು, 10 ರೂ.ಗೆ ನಾಲ್ಕು ಸಣ್ಣ ಹಣತೆಗಳನ್ನು ಮಾರಾಟ ಮಾಡಲಾಗುತ್ತಿದ್ದು, ನಗರದಲ್ಲಿ ಸಾರ್ವಜನಿಕರು ಮಣ್ಣಿನ ಹಣತೆಗಳ ಖರೀದಿ ಯಲ್ಲಿ ತೊಡಗಿದ್ದರು.

Translate »