ಚಾಮರಾಜ ಒಡೆಯರ್ 156ನೇ ಜಯಂತಿ
ಮೈಸೂರು

ಚಾಮರಾಜ ಒಡೆಯರ್ 156ನೇ ಜಯಂತಿ

February 23, 2019

ಮೈಸೂರು: ರಾಜವಂಶಸ್ಥ ಚಾಮರಾಜ ಒಡೆಯರ್ 156ನೇ ಜಯಂತಿ ಅಂಗವಾಗಿ ಶುಕ್ರವಾರ ಚಾಮರಾಜ ವೃತ್ತದಲ್ಲಿರುವ ಪ್ರತಿಮೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಶಾಸಕ ಎಲ್.ನಾಗೇಂದ್ರ ಮಾಲಾರ್ಪಣೆ ಮಾಡಿ, ಗೌರವ ಸಮರ್ಪಿಸಿದರು.

ಅರಸು ಮಂಡಳಿ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾಮ ರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಲಾಯಿತು.
ಇದೇ ವೇಳೆ ಪತ್ರಕರ್ತರೊಂದಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಚಾಮರಾಜ ಒಡೆಯರ್ ನೀಡಿರುವ ಕೊಡುಗೆ ಅಪಾರ. ಈ ಹಿನ್ನೆಲೆಯಲ್ಲಿ 156ನೇ ಜನ್ಮ ದಿನವನ್ನು ಆಚರಿಸುವ ಮೂಲಕ ಗೌರವಿಸಲಾಗುತ್ತಿದೆ ಎಂದರು.

ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಬೇಕಾದ ಹಿನ್ನೆಲೆಯಲ್ಲಿ ಈ ಹಿಂದೆ ಲ್ಯಾನ್ಸ್‍ಡೌನ್ ಹಾಗೂ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ್ದೆ. ಈ ಎರಡು ಕಟ್ಟಡ ಗಳನ್ನು ನೆಲಸಮ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದೇನೆ. ಕಳೆದ ವಾರವಷ್ಟೇ ಮುಖ್ಯಮಂತ್ರಿಗಳು ದೇವರಾಜ ಮಾರುಕಟ್ಟೆ ಕಟ್ಟಡವನ್ನು ಪರಿಶೀಲಿಸಿದ್ದಾರೆ. ಪಾರಂಪರಿಕ ಕಟ್ಟಡದ ಉಳಿವಿಗೆ ಸಕಾರಾತ್ಮವಾಗಿ ಪ್ರತಿಕ್ರಿಯಿಸಿದ್ದಾರೆ ಎಂದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಮೈಸೂರು ನಗರ ಸುಸಜ್ಜಿತವಾಗಿ ನಿರ್ಮಾಣ ವಾಗಲು ಚಾಮರಾಜ ಒಡೆಯರ್ ಅವರ ಶ್ರಮವೂ ಪ್ರಮುಖ ಪಾತ್ರ ವಹಿಸಿದೆ. ಇಂದು ಶಾಂತಿಯುತವಾದ ವಾತಾವರಣ ಮೈಸೂರಿನಲ್ಲಿ ನೆಲೆಸಿರುವುದಕ್ಕೆ ಯದು ವಂಶದ ದೂರದೃಷ್ಟಿಕೋನ ಕಾರಣ. ಇಂದು ಮಹಾರಾಜ ಚಾಮರಾಜ ಒಡೆಯರ್ ಅವರ ಜಯಂತಿ ಆಚರಿಸುವ ಮೂಲಕ ಗೌರವ ಸಮರ್ಪಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಸುಬ್ಬಯ್ಯ, ಸತೀಶ್, ಸೇರಿದಂತೆ ಇನ್ನಿತರರು ಇದ್ದರು.

Translate »