ಸಿಎಂ ಹುದ್ದೆ ಖಾಲಿ ಇಲ್ಲ ಸಾರಾ ತಿರುಗೇಟು
ಮೈಸೂರು

ಸಿಎಂ ಹುದ್ದೆ ಖಾಲಿ ಇಲ್ಲ ಸಾರಾ ತಿರುಗೇಟು

February 22, 2019

ಮೈಸೂರು: ರಾಜ್ಯ ದಲ್ಲಿ ಮುಖ್ಯ ಮಂತ್ರಿ ಹುದ್ದೆ ಖಾಲಿ ಇಲ್ಲ ಎಂದುಶಾಸಕ ನಾರಾಯಣ ರಾವ್ ಹೇಳಿ ಕೆಗೆ ಪ್ರವಾಸೋ ದ್ಯಮ ಸಚಿವ ತಿರುಗೇಟು ನೀಡಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿ ಕ್ರಿಯಿಸಿದ ಸಚಿವರು, ಸಚಿವ ಸ್ಥಾನ, ನಿಗಮ-ಮಂಡಳಿ ಅಧಿಕಾರಕ್ಕಾಗಿ ನಾಯಕರನ್ನು ಓಲೈಸಲು ಶಾಸಕರು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿರಬಹುದು. ಆದರೆ ಸದ್ಯ ಸಿಎಂ ಹುದ್ದೆ ಖಾಲಿ ಇಲ್ಲ ಎಂದರು.

ಯಾವುದೇ ವಿಚಾರವಿದ್ದರೂ, ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕೇ ಹೊರತು, ಬಹಿರಂಗ ಹೇಳಿಕೆ ನೀಡು ವುದು ಸರಿಯಲ್ಲ ಎಂದ ಅವರು, ನಾಳೆ (ಶನಿವಾರ) ನಡೆಯಲಿರುವ ಮೈಸೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಚುನಾವಣೆಯಲ್ಲಿ ಈ ಹಿಂದೆಯೇ ಒಪ್ಪಂದ ಮಾಡಿಕೊಂಡಿ ರುವಂತೆ ಬಿಜೆಪಿಯೊಂದಿಗೆ ಮೈತ್ರಿ ಮುಂದು ವರೆಸುತ್ತೇವೆ ಎಂದು ನುಡಿದರು.

ಎಂಆರ್‍ಸಿ ಆವರಣದಲ್ಲಿನ ಅನಧಿಕೃತ ಕಟ್ಟಡ ತೆರವಿಗೆ ಸಚಿವ ಸಾರಾ ಸೂಚನೆ
ಮೈಸೂರು: ಮೈಸೂರು ರೇಸ್ ಕ್ಲಬ್ ಆವರಣದ ಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಎಂಆರ್‍ಸಿ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇಂದಿಲ್ಲಿ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೈಸೂರು ರೇಸ್ ಕ್ಲಬ್ (ಎಂಆರ್‍ಸಿ) ಪದಾಧಿಕಾರಿಗ ಳೊಂದಿಗೆ ಕ್ಲೋಸ್ ಡೋರ್ ಮೀಟಿಂಗ್ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕ್ಲಬ್ ಆರವಣದಲ್ಲಿದ್ದ ಕಟ್ಟಡಗಳನ್ನು ತೆರವುಗೊಳಿಸಿದ್ದಾರೆ. ಉಳಿದ ಕಟ್ಟಡಗ ಳನ್ನೂ ತೆರವು ಗೊಳಿಸುವಷ್ಟರಲ್ಲಿ ನ್ಯಾಯಾಲಯದ ಆದೇಶ ಬಂದಿತು ಎಂದು ತಿಳಿಸಿದರು.

ಗ್ರೀನ್ ಬೆಲ್ಟ್ ಏರಿಯಾದಲ್ಲಿ ಯಾವುದೇ ನಿರ್ಮಾಣವಾಗಬಾರದು. ಹಸಿರೀಕ ರಣ ನಿರ್ವಹಿಸಬೇಕಾಗಿರುವುದರಿಂದ ಅನಧಿಕೃತ ಕಟ್ಟಡಗಳನ್ನು ತೆಗೆಸಿ, ನಂತರ ಸರ್ಕಾರ ನಿಮ್ಮ ಸಹಾಯಕ್ಕೆ ಬರಲಿದೆ ಎಂದು ಹೇಳಿದ್ದೇವೆ. ಅದಕ್ಕೆ ಪದಾಧಿಕಾರಿ ಗಳು ಸಹಕರಿಸುವುದಾಗಿ ಸಮ್ಮತಿಸಿ ದ್ದಾರೆ ಎಂದಷ್ಟೇ ಸಚಿವ ಸಾ.ರಾ. ಮಹೇಶ್ ತಿಳಿಸಿದರು. ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ. ದೇವೇಗೌಡ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಪಾಲಿಕೆ, ಮುಡಾ, ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »