ಮೂವರು ಅಂತರರಾಜ್ಯ ಕಳ್ಳರ ಬಂಧನ
ಕೊಡಗು

ಮೂವರು ಅಂತರರಾಜ್ಯ ಕಳ್ಳರ ಬಂಧನ

February 22, 2019

ಎರಡು ಬೈಕ್ ಸೇರಿದಂತೆ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಗೋಣಿಕೊಪ್ಪಲು: ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಮೂವರು ಅಂತರ ರಾಜ್ಯ ಖದೀಮರನ್ನು ಬಂಧಿಸುವಲ್ಲಿ ಪೊಲೀ ಸರು ಯಶಸ್ವಿಯಾಗಿದ್ದು, ಆರೋಪಿಗಳಿಂದ 2 ಬೈಕ್ ಹಾಗೂ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ರಾಜ್ಯದ ಕಣ್ಣೂರು ಜಿಲ್ಲೆ ಇರಟಿ ತಾಲೂ ಕಿನ ಉಳಿಕಲ್ ಪಂಚಾಯ್ತಿಯ ಮಂಡವ ಪರಂಬು ಗ್ರಾಮದ ಮೊಯ್ದು ಅವರ ಪುತ್ರ ಟಿ.ಎ. ಸಲೀಂ(39), ಕಣ್ಣೂರು ಜಿಲ್ಲೆ ಮಟ್ಟ ನೂರಿನ ನಡುವಕಾಡು ಗ್ರಾಮದ ಕೀಯಕ್ಕೆ ವೀಡುವಿನ ಹುಸೇನ್ ಅವರ ಪುತ್ರ ಕೆ.ಅನ್ಸಾರ್ (24) ಹಾಗೂ ಕೊಡಗು ಜಿಲ್ಲೆ ವಿರಾಜ ಪೇಟೆ ತಾಲೂಕಿನ ನೆಹರು ನಗರದ ನಿವಾಸಿ ಮೊಹಮ್ಮದ್ ರವರ ಪುತ್ರ ಎನ್.ಪಿ.ಅಜೀಜ್ ಬಂಧಿತ ಆರೋಪಿಗಳು ಕಳ್ಳತನ ಮಾಡಿದ್ದ ಎರಡು ಮೋಟಾರ್ ಸೈಕಲ್, 80 ಗ್ರಾಂ ಚಿನ್ನಾಭರಣ ಹಾಗೂ ನಗದು ಸೇರಿದಂತೆ ಅಂದಾಜು ಮೂರು ಲಕ್ಷ ಮೌಲ್ಯದ ವಸ್ತು ಗಳನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿಗೆ ಸಮೀಪ ತಿತಿಮತಿಯಲ್ಲಿ ಗುರು ವಾರ ಮುಂಜಾನೆ ಪೊಲೀಸರು ಗಸ್ತು ತಿರು ಗುತ್ತಿದ್ದ ಸಂದರ್ಭ ಆರೋಪಿಗಳು ಬೈಕ್‍ನಲ್ಲಿ ಆಗಮಿಸಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ರೆನ್ನಲಾಗಿದೆ. ಈ ಸಂದರ್ಭ ಸಂಶಯ ಗೊಂಡ ಪೊಲೀಸರು ವಿಚಾರಿಸಿದ ಸಂದರ್ಭ ಆರೋಪಿಗಳು ಸತ್ಯ ಬಾಯಿ ಬಿಟ್ಟಿದ್ದಾರೆ.

ಪೊಲೀಸರ ತೀವ್ರ ವಿಚಾರಣೆಯ ನಂತರ ಆರೋಪಿಗಳು ಪೊನ್ನಂಪೇಟೆ, ತಿತಿಮತಿ ನಗರ, ವಿರಾಜಪೇಟೆಯ ಪಂಜರಪೇಟೆ, ಸುಭಾಶ್‍ನಗರ, ಗೋಣಿಕೊಪ್ಪ ವೆಂಕಟಪ್ಪ ಬಡಾವಣೆ, ಸುಂಠಿಕೊಪ್ಪ ಹಾಗೂ ಹುಣಸೂರು ನಗರಗಳಲ್ಲಿ ಮನೆ ಕಳ್ಳತನ ಮಾಡಿರುವ ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾರೆ. ಆರೋಪಿ ಗಳ ಮೇಲೆ ಹಲವಾರು ಪೊಲೀಸ್ ಠಾಣೆ ಗಳಲ್ಲಿ ಪ್ರಕರಣ ದಾಖಲಾಗಿದ್ದು, ಜಾಮೀನಿನ ನಂತರ ಇದೇ ಕಾಯಕ ಮುಂದುವರೆಸು ತ್ತಿದ್ದರು. ನಂತರ ಪೊಲೀಸರಿಂದ ತಪ್ಪಿಸಿಕೊ ಳ್ಳಲು ಆಗಿಂದಾಗ್ಗೆ ಸ್ಥಳ ಬದಲಾಯಿಸುತ್ತಿದ್ದ ರೆನ್ನಲಾಗಿದೆ.
ಇತ್ತೀಚೆಗೆ ತಿತಿಮತಿಯ ಪ್ರವೀಣ್ ಕುಮಾರ್ ಎಂಬುವರ ಮನೆ ಮುಂದೆ ನಿಲ್ಲಿ ಸಿದ್ದ
ಮೋಟಾರು ಬೈಕನ್ನು ಆರೋಪಿಗಳು ಅಪಹರಿಸಿದ್ದರು. ನಂತರ ಪೊಲೀಸರು ಪ್ರಕ ರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದರು. ಕೊಡಗು ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಡಾ.ಡಿ.ಸುಮನ್ ಪೆನ್ನೇಕರ್, ವಿರಾಜಪೇಟೆ ಡಿವೈಎಸ್‍ಪಿ ನಾಗಪ್ಪ ಮಾರ್ಗ ದರ್ಶನದಲ್ಲಿ ಗೋಣ Âಕೊಪ್ಪ ವೃತ್ತ ನಿರೀಕ್ಷಕ ದಿವಾಕರ್ ಕಾರ್ಯಾಚರಣೆ ಆರಂಭಿಸಿದ್ದರು.
ಪೊನ್ನಂಪೇಟೆ ಎಸ್‍ಐ ಬಿ.ಜಿ. ಮಹೇಶ್, ಗೋಣಿಕೊಪ್ಪ ಎಸ್‍ಐ ಶ್ರೀಧರ್, ವಿ.ಪೇಟೆ ಎಸ್‍ಐ ಸಂತೋಷ್ ಕಶ್ಯಪ್, ಎಎಸ್‍ಐ ಗಣಪತಿ, ಸಿಬ್ಬಂದಿ ಲೋಕೇಶ್, ಎಂ.ಡಿ.ಮನು, ಸುನೀಲ್, ಮೊಹಮ್ಮದ್ ಅಲಿ, ಪ್ರಮೋದ್ ಕುಮಾರ್, ಅಬ್ದುಲ್ ಅಜೀಜ್, ಹರೀಶ್ ಕುಮಾರ್, ಮುನೀರ್, ಸತೀಶ್, ಸುಗಂಧ, ಮೋಹನ್, ಶೋಭ, ರಾಜೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರು ಪೊಲೀ ಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.

Translate »