ಸಚಿವ ಸಾರಾ ಮಹೇಶ್ ಹೆಸರಲ್ಲಿ ಲಕ್ಷ ರೂ. ವಂಚನೆ: ಆರೋಪಿಗಳ ಬಂಧನ
ಕೊಡಗು

ಸಚಿವ ಸಾರಾ ಮಹೇಶ್ ಹೆಸರಲ್ಲಿ ಲಕ್ಷ ರೂ. ವಂಚನೆ: ಆರೋಪಿಗಳ ಬಂಧನ

February 22, 2019

ಮಡಿಕೇರಿ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹೆಸರಿ ನಲ್ಲಿ ವ್ಯಕ್ತಿಯೊಬ್ಬರಿಗೆ 1.1 ಲಕ್ಷ ರೂ. ವಂಚಿ ಸಿದ ಆರೋಪಿಗಳನ್ನು ಬಂಧಿಸುವಲ್ಲಿ ಮಡಿ ಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಬ್ಯಾಡರಪೇಟೆ ನಿವಾಸಿ ಸಯ್ಯದ್ ಮುಬಾರಕ್(28) ಮತ್ತು ಸಯ್ಯದ್ ಖಲೀಲ್(28) ಬಂಧಿತ ಆರೋಪಿಗಳು. ಆರೋಪಿಗಳ ವಿರುದ್ಧ ಬೆಂಗಳೂರಿನ ಕೆ.ಆರ್. ಪುರಂ, ಕೆಂಗೇರಿ, ಕೋರಮಂಗಲ, ಮಡಿವಾಳ, ಜಯನಗರ, ಜಿಗಣಿ, ಮಾಲೂರು ಪೊಲೀಸ್ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಜನರನ್ನು ವಂಚಿಸುವುದನ್ನೇ ವ್ರತ್ತಿಯ ನ್ನಾಗಿ ಮಾಡಿಕೊಂಡಿದ್ದರೆಂದು ಮಡಿ ಕೇರಿ ವಿಭಾಗದ ಉಪ ಅಧೀಕ್ಷಕ ಸುಂದ ರ್‍ರಾಜ್ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ಬೆಂಗಳೂರಿನ ಬನ ಶಂಕರಿ ನಿವಾಸಿ ಮೂಲತಃ ಮದ್ದೂರು ಗ್ರಾಮದ ಶಿವಲಿಂಗಯ್ಯ ಕುಶಾಲನಗರದ ಕೂಡ್ಲೂರುವಿನ ಸರ್ವೇ ನಂ.60/2ರಲ್ಲಿ 6.90 ಎಕರೆ ಭೂಮಿ ಹೊಂದಿದ್ದರು. ಈ ಭೂಮಿಯ ಭೂ ಪರಿವರ್ತನೆ ಮಾಡಿ ಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಈ ಹಿಂದೆ ಅರ್ಜಿ ಸಲ್ಲಿಸಿದ್ದು, ಕಡತಗಳು ಸಿದ್ದ ಗೊಂಡಿದ್ದವು. ಈ ಹಿನ್ನೆಲೆಯಲ್ಲಿ ದಾಖಲೆ ಪಡೆದುಕೊಳ್ಳಲು ಶಿವಲಿಂಗಯ್ಯ, ನ.3 ರಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿ ಸಿದ್ದರು. ಈ ಸಂದರ್ಭ ವ್ಯಕ್ತಿಯೊಬ್ಬ ಎದು ರಾಗಿ ನಿಮ್ಮ ಭೂ ದಾಖಲೆಗಳನ್ನು ನಾನೇ ಸಿದ್ದಪಡಿಸಿರುವುದಾಗಿ ಹೇಳಿ ತನ್ನನ್ನು ‘ಕೇಸ್ ವರ್ಕರ್’ ಗಿರೀಶ್ ಎಂದು ಪರಿಚಯಿ ಸಿಕೊಂಡಿದ್ದ. ಬಳಿಕ ಭೂ ಪರಿವರ್ತನೆಗೆ 1 ಲಕ್ಷ ರೂಪಾಯಿ ಶುಲ್ಕ ಪಾವತಿ ಮಾಡಬೇಕಿದ್ದು ಹೆಚ್ಚುವರಿ 1 ಸಾವಿರ ಹಣ ವನ್ನು ಕಚೇರಿಯ ಇತರ ಸಿಬ್ಬಂದಿಗಳಿಗೆ ನೀಡಬೇಕಿದೆ ಎಂದು ತಿಳಿಸಿದ್ದ. ಮಾತ್ರ ವಲ್ಲದೆ, ಸಚಿವ ಸಾ.ರಾ.ಮಹೇಶ್ ಅವರು ಹೇಳಿದ್ದರಿಂದ ಕಡತಗಳನ್ನು ಬೇಗ ವಿಲೇ ವಾರಿ ಮಾಡಿರುವುದಾಗಿ ಹೇಳಿ, ತನಗೆ ಸಚಿವರ ಆಪ್ತ ಕಾರ್ಯದರ್ಶಿ ಆತ್ಮೀಯ ರಾಗಿದ್ದು ಅವರೊಂದಿಗೆ ಮಾತನಾಡಿ ಎಂದು ಮೊಬೈಲನ್ನು ಶಿವಲಿಂಗಯ್ಯ ಅವರಿಗೆ ನೀಡಿದ್ದ. ದೂರವಾಣಿಯಲ್ಲಿ ಮಾತ ನಾಡಿದ ವ್ಯಕ್ತಿ ತನ್ನನ್ನು ಸಾ.ರಾ. ಮಹೇಶ್ ಅವರ ಆಪ್ತ ಕಾರ್ಯದರ್ಶಿ ಎಂದು ಪರಿ ಚಯಿಸಿಕೊಂಡು ನಿಮ್ಮ ಭೂ ದಾಖಲೆ ಗಳು ರೆಡಿಯಾಗಿದೆ ಎಂದು ಹೇಳಿ, ಸಚಿವ ಸಾ.ರಾ. ಮಹೇಶ್ ಮಾತನಾಡುತ್ತಾರೆ ಎಂದು ಬೇರೊಬ್ಬನಿಗೆ ಫೋನ್ ನೀಡಿದ್ದ. ಆ ವ್ಯಕ್ತಿ ನಾನು ಸಾ.ರಾ.ಮಹೇಶ್ ಎಂದು ಹೇಳಿದಲ್ಲದೆ, ನಿಮ್ಮ ದಾಖಲೆಗಳು ಸಿದ್ಧ ವಾಗಿದೆ. ಗಿರೀಶನ ಕೈಯಿಂದ ಪಡೆದು ಕೊಳ್ಳಿ ಎಂದು ಹೇಳಿ ಕರೆ ಕಟ್ ಮಾಡಿದ್ದ.

ಇದನ್ನು ನಿಜವೆಂದು ನಂಬಿದ ಶಿವ ಲಿಂಗಯ್ಯ, ಒಟ್ಟು 1.1ಲಕ್ಷ ರೂ.ಗಳನ್ನು ಅನಾಮಿಕ ವ್ಯಕ್ತಿಗೆ ನೀಡಿದ್ದರು. ಬ್ಯಾಂಕಿ ನಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿದ ಶಿವಲಿಂಗಯ್ಯ ಕೇಸ್ ವರ್ಕರ್(ಅನಾಮಿಕ ವ್ಯಕ್ತಿ)ಗಾಗಿ ಹಲವು ಸಮಯ ಕಾದರೂ ಆ ವ್ಯಕ್ತಿ ಮಾತ್ರ ಬರಲಿಲ್ಲ. ಆತ ನೀಡಿದ ಮೊಬೈಲ್ ಸಂಖೈಗೆ ಕರೆ ಮಾಡಿದ ಸಂದರ್ಭ ಅದು ‘ಸ್ವಿಚ್‍ಆಫ್’ ಆಗಿತ್ತು. ಆ ಬಳಿಕ ನಡೆದ ಘಟನೆಗಳಿಂದ ಶಿವ ಲಿಂಗಯ್ಯ ಅವರಿಗೆ ಮೋಸ ಹೋಗಿರುವ ವಿಚಾರ ಅರಿವಾಗಿದ್ದು, ತದನಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

ಆರೋಪಿಗಳ ಸೆರೆ: ಪ್ರಕರಣವನ್ನು ಬೆನ್ನು ಹತ್ತಿದ್ದ ಪೊಲೀಸರು ಆರೋಪಿಗಳ ಬಂಧ ನಕ್ಕೆ ಪ್ರಯತ್ನಿಸಿದ್ದರು. ಬೆಂಗಳೂರಿನಲ್ಲಿ ಬೀಡು ಬಿಟ್ಟು ಆರೋಪಿಗಳ ಚಲನವಲನ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಆದರೆ ಊರಿ ನಿಂದ ಊರಿಗೆ ನಿರಂತರವಾಗಿ ಅಲೆಯುವ ಆರೋಪಿಗಳು ಕೂದಲೆಳೆಯ ಅಂತರ ದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದರು. ಆರೋಪಿಗಳ ಮೊಬೈಲ್ ಕರೆಗಳ ಮೇಲೆ ನಿಗಾ ವಹಿಸಿದ್ದ ಪೊಲೀಸರು, ನಿರಂತರ ಪ್ರಯತ್ನದ ಫಲವಾಗಿ ತಮಿಳುನಾಡು ನೀಲ ಗಿರಿ ಜಿಲ್ಲೆಯ ಊಟಿಯಲ್ಲಿ ಆರೋಪಿಗಳು ಠಿಕಾಣಿ ಹೂಡಿರುವುದನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿ ಸಿದ್ದು, ಘನ ನ್ಯಾಯಾಲಯ ಆರೋಪಿಗ ಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿ ಸಿದೆ. ಕಾರ್ಯಾಚರಣೆಯಲ್ಲಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿ ಕಾರಿ ಷಣ್ಮುಗ, ಸಿಬ್ಬಂದಿಗಳಾದ ಕೆ.ಕೆ. ದಿನೇಶ್, ಮಧುಸೂಧನ್, ಮನೋಜ್, ನಾಗರಾಜ್ ಕಡಗಣ್ಣವರ್, ಸಿಡಿಆರ್ ಸಿಬ್ಬಂದಿಗಳಾದ ಸಿ.ಕೆ. ರಾಜೇಶ್, ಗಿರೀಶ್ ಪಾಲ್ಗೊಂಡಿದ್ದರು.

Translate »