ಚೆನ್ನೈ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಮೈಸೂರಿಗೆ, ಇತರೆ ಮೂರು ರೈಲು ಅಶೋಕಪುರಂ ಸ್ಟೇಷನ್‍ಗೆ ವಿಸ್ತರಣೆ
ಮೈಸೂರು

ಚೆನ್ನೈ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಮೈಸೂರಿಗೆ, ಇತರೆ ಮೂರು ರೈಲು ಅಶೋಕಪುರಂ ಸ್ಟೇಷನ್‍ಗೆ ವಿಸ್ತರಣೆ

December 27, 2018

ಮೈಸೂರು: ಚೆನ್ನೈ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಮೈಸೂರಿಗೂ ಹಾಗೂ ಮೈಸೂರು-ಬೆಂಗಳೂರು ನಡುವೆ ಈಗಾಗಲೇ ಸಂಚರಿಸುತ್ತಿರುವ ರೈಲುಗಳ ಪೈಕಿ 3 ರೈಲುಗಳ ಸೇವೆಯನ್ನು ಮೈಸೂರಿನ ಅಶೋಕಪುರಂವರೆಗೆ ವಿಸ್ತರಿಸುವ ಭರವಸೆಯನ್ನು ಕೇಂದ್ರದ ರೈಲ್ವೆ ಸಚಿವ ಪಿಯೂಷ್ ಗೋಯಲ್ ನೀಡಿದ್ದಾರೆ.

ಇಂದು ಮೈಸೂರಿಗೆ ಆಗಮಿಸಿದ್ದ ಸಚಿವರಿಗೆ ಸಂಸದ ಪ್ರತಾಪ್ ಸಿಂಹ ಅವರು ಮನವಿ ಸಲ್ಲಿಸಿ, ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಪ್ರವಾಸಿಗರಿಗೆ ಅನುಕೂಲವಾಗುವಂತೆ ಹಾಲಿ ಚೆನ್ನೈ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ಅನ್ನು ಮೈಸೂರಿಗೆ ವಿಸ್ತರಿಸುವಂತೆ ಕೋರಿದರು.

ಅಲ್ಲದೆ ಈಗಾಗಲೇ ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಿರುವ ವಿಶ್ವಮಾನವ (ಟ್ರೇನ್ ನಂ. 17326/25), ಚಾಮುಂಡಿ (16215/16) ಹಾಗೂ ಟಿಪ್ಪು ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ (12613/12614) ರೈಲು ಗಳನ್ನು ಅಶೋಕಪುರಂ ರೈಲ್ವೇ ಸ್ಟೇಷನ್‍ಗೆ ವಿಸ್ತರಿಸಬೇಕು. ಹಾಗೆಯೇ ಈ ರೈಲುಗಳು ಮತ್ತೆ ಇದೇ ನಿಲ್ದಾಣ ದಿಂದ ಪ್ರಯಾಣ ಆರಂಭಿಸುವಂತೆ ಸೇವೆ ಒದಗಿಸಬೇಕೆಂದು ಕೇಳಿಕೊಂಡರು.

ಪ್ರತಾಪ್ ಸಿಂಹ ಮನವಿಗೆ ಸ್ಪಂದಿಸಿದ ಸಚಿವ ಪಿಯೂಷ್ ಗೋಯಲ್ ಅವರು, ತಾಂತ್ರಿಕ ಸ್ಥಿತಿಗತಿಯನ್ನು ಅವ ಲೋಕಿಸಿ ಕ್ರಮ ವಹಿಸುವಂತೆ ಸ್ಥಳದಲ್ಲಿದ್ದ ರೈಲ್ವೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದರಲ್ಲದೇ, ಅತೀ ಶೀಘ್ರದಲ್ಲಿ ಸೇವೆಯನ್ನು ವಿಸ್ತರಿಸುವುದಾಗಿ ಭರವಸೆ ನೀಡಿದರು.

Translate »