ಮುಖ್ಯಮಂತ್ರಿ ಕುಮಾರಸ್ವಾಮಿಗೆ ಚಾಮುಂಡೇಶ್ವರಿ ಅನುಗ್ರಹವಿದೆ, ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ
ಮೈಸೂರು

ಮುಖ್ಯಮಂತ್ರಿ ಕುಮಾರಸ್ವಾಮಿಗೆ ಚಾಮುಂಡೇಶ್ವರಿ ಅನುಗ್ರಹವಿದೆ, ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ

July 13, 2019

ಮೈಸೂರು,ಜು.12(ಎಂಟಿವೈ)- ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮೇಲೆ ತಾಯಿ ಚಾಮುಂಡೇಶ್ವರಿ ದೇವಿಯ ಅನುಗ್ರಹವಿದೆ. ಈ ಹಿನ್ನೆಲೆ ಯಲ್ಲಿ ಸರ್ಕಾರಕ್ಕೆ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಆಷಾಢ ಮಾಸದ ಎರಡನೇ ಶುಕ್ರ ವಾರದಂದು ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಷಾಢ ಮಾಸದ ಹಿನ್ನೆಲೆಯಲ್ಲಿ ನಾಡ ದೇವಿ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಬಂದಿದ್ದೇನೆ. ಮುಖ್ಯ ಮಂತ್ರಿ ಕುಮಾರಸ್ವಾಮಿ ಹೆಸರಿನಲ್ಲಿ ಸಂಕಲ್ಪ ಮಾಡಿಸಿದ್ದೇನೆ. ದೇವರ ಆಶೀರ್ವಾದ ಇರುವವರೆಗೂ ಸರ್ಕಾರ ನಡೆಯುತ್ತದೆ. ಮುಖ್ಯಮಂತ್ರಿಗಳ ಮೇಲೆ ಚಾಮುಂಡೇ ಶ್ವರಿ ಆಶೀರ್ವಾದ, ಅನುಗ್ರಹವಿದೆ. ಸದ್ಯಕ್ಕೆ ಸರ್ಕಾರಕ್ಕೆ ತೊಂದರೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಸಾ.ರಾ.ಮಹೇಶ್ ಬಿಜೆಪಿ ನಾಯ ಕರನ್ನು ಭೇಟಿ ಮಾಡಿರುವ ವಿಷಯ ನನಗೆ ತಿಳಿದಿಲ್ಲ. ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಳ್ಳುವ ಆಲೋಚನೆ ಜೆಡಿಎಸ್‍ಗೆ ಇಲ್ಲ. ಇಂದಿನಿಂದ ಆರಂಭವಾಗಿರುವ ಅಧಿವೇಶನ ಸುಸೂತ್ರವಾಗಿ ನಡೆಯುತ್ತದೆ. ಮುಂದಿನ ಎಲ್ಲಾ ಚಟುವಟಿಕೆಗಳು ದೇವರಮಯ ಎಂದರು.

ಬರಿಗಾಲಲ್ಲಿ ಬಂದರು: ಸಂಕಷ್ಟದ ಸುಳಿಗೆ ಸಿಲುಕಿರುವ ಸರ್ಕಾರವನ್ನು ಉಳಿಸಿ ಕೊಳ್ಳಲು ದೇವರ ಮೊರೆ ಹೋಗಿರುವ ಸಚಿವ ಹೆಚ್.ಡಿ.ರೇವಣ್ಣ ಕಳೆದ ಮೂರ್ನಾಲ್ಕು ದಿನಗಳಿಂದ ಟೆಂಪಲ್ ರನ್ ಕೈ ಗೊಂಡಿದ್ದು, ಬರಿ ಗಾಲಲ್ಲೇ ದೇವಾಲಯಕ್ಕೆ ತೆರ ಳುವ ಮೂಲಕ ದೇವರ ಮೊರೆ ಹೋಗಿದ್ದು, ಇಂದು ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಬಂದ ಸಚಿವ ರೇವಣ್ಣ ವಿಐಪಿ ಗೇಟ್ ಮೂಲಕ ಬರಿಗಾಲಿ ನಲ್ಲೇ ದೇವಾಲಯ ಪ್ರವೇಶಿಸಿದರು. ಇಷ್ಟು ವರ್ಷ ದೇವಾಲಯದ ಮುಖ್ಯ ದ್ವಾರದ ವರೆಗೂ ಪಾದರಕ್ಷೆ ಹಾಕಿಕೊಂಡು ಬಂದು, ನಂತರವಷ್ಟೇ ಬರಿಗಾಲಲ್ಲಿ ದೇವಾಲಯ ಪ್ರವೇಶಿಸುತ್ತಿದ್ದರು. ಕೊರಳಲ್ಲಿ ಎರಡು ಏಲಕ್ಕಿ ಸರ ಹಾಕಿಕೊಂಡು ಸುಮಾರು 20 ನಿಮಿಷ ದೇವಿಯಲ್ಲಿ ಪ್ರಾರ್ಥಿಸಿದರು.

ನಿಂಬೆಹಣ್ಣು ಕೇಳಿದ ಸೂರಜ್: ಬೆಳಿಗ್ಗೆ 7ಕ್ಕೆ ಸಚಿವ ರೇವಣ್ಣ ಚಾಮುಂಡಿ ಬೆಟ್ಟಕ್ಕೆ ಬಂದು ದೇವಿಯದರ್ಶನ ಪಡೆದು ವಾಪ ಸ್ಸಾದರೆ, ರೇವಣ್ಣರ ಮಗ ಡಾ.ಸೂರಜ್ ಬೆಳಿಗ್ಗೆ 9ಗಂಟೆಗೆ ಬೆಟ್ಟಕ್ಕೆ ಆಗಮಿಸಿದರು. ಪ್ರಾಕಾರೋತ್ಸವ ಹಾಗೂ ಮಂಗಳಾರತಿ ಕಾರಣ 5 ನಿಮಿಷ ದೇವಿಯ ದರ್ಶನಕ್ಕೆ ಬ್ರೇಕ್ ನೀಡಲಾಗಿತ್ತು. ಈ ವೇಳೆ ಗರ್ಭ ಗುಡಿಯ ಪ್ರಾಂಗಣದಲ್ಲಿ ನಿಂತಿದ್ದ ಡಾ. ಸೂರಜ್, ದರ್ಶನ ಪಡೆದ ಬಳಿಕ ಪುರೋಹಿತರಲ್ಲಿ ಎರಡು ನಿಂಬೆಹಣ್ಣು ಕೇಳಿದರು. ಆದರೆ ನಿಂಬೆಹಣ್ಣು ಇಲ್ಲ ವೆಂದು ಪುರೋಹಿತರು ಹೇಳಿದ್ದರಿಂದ ಬರಿಗೈಯ್ಯಲ್ಲಿ ವಾಪಸ್ಸಾದರು.

Translate »