ಜಿಲ್ಲೆಯ ವಿವಿಧೆಡೆ ಬಾಲಕಾರ್ಮಿಕ ವಿರೋಧಿ ದಿನಾಚರಣೆ
ಮಂಡ್ಯ

ಜಿಲ್ಲೆಯ ವಿವಿಧೆಡೆ ಬಾಲಕಾರ್ಮಿಕ ವಿರೋಧಿ ದಿನಾಚರಣೆ

June 13, 2018

ಮಂಡ್ಯ:  ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಜಿಲ್ಲೆಯ ಮಂಡ್ಯ, ಪಾಂಡವಪುರ, ಮದ್ದೂರು ಸೇರಿದಂತೆ ವಿವಿಧೆಡೆ ಆಚರಿಸಲಾಯಿತು.ಬಾಲ ಕಾರ್ಮಿಕ ಪದ್ಧತಿ ನಿಷೇಧವಾಗ ಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಬಾಲ್ಯದ ಜೀವನವನ್ನು ಮಕ್ಕಳು ಅನುಭವಿಸು ವಂತಹ ವಾತಾವರಣವನ್ನು ಕಲ್ಪಿಸಬೇಕು ಎಂಬೆಲ್ಲ ಆಶಯದಿಂದ ಕಾರ್ಯಕ್ರಮ ಗಳು ನಡೆಯಿತು.

ಮಂಡ್ಯ ವರದಿ: ಮಂಡ್ಯದ ಗಾಂಧಿ ಭವನ ದಲ್ಲಿ ಕಾರ್ಮಿಕ ಇಲಾಖೆ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಆಚರಿಸ ಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಸತ್ರ ಪ್ರಧಾನ ನ್ಯಾಯಾಧೀಶರಾದ ವಿಜಯ ಕುಮಾರಿ ಉದ್ಘಾಟಿಸಿದರು.

ಪಾಂಡವಪುರ ವರದಿ: ಪಟ್ಟಣದ ಫ್ರೆಂಚ್ ರಾಕ್ಸ್ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಆಚರಿಸಲಾಯಿತು.
ಜೆಎಂಎಫ್‍ಸಿ ಹಿರಿಯ ಶ್ರೇಣ ನ್ಯಾಯಾಧೀಶ ಬಿ.ಕೆ.ರವಿಕಾಂತ್ ಕಾರ್ಯಕ್ರಮ ಉದ್ಘಾಟಿಸಿ ದರು. ಬಳಿಕ, ಮಾತನಾಡಿದ ಅವರು, ಬಡತನ, ಕೌಟುಂಬಿಕ ಕಲಹಗಳಿಂದಾಗಿ ಮಕ್ಕಳು ತಮ್ಮ ಕುಟುಂಬದ ಸಮಸ್ಯೆ ನಿವಾರಣೆಗಾಗಿ ಇಂತಹ ಬಾಲ ಕಾರ್ಮಿಕ ಪದ್ಧÀತಿಗೆ ಇಳಿಯುತ್ತಿ ದ್ದಾರೆ. ಇದರಿಂದ ಶಿಕ್ಷಣದಿಂದ ವಂಚಿತರಾ ಗುತ್ತಿದ್ದಾರೆ. ಮಕ್ಕಳ ಭವಿಷ್ಯವೇ ನಾಶ ವಾಗುತ್ತಿದೆ. ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಕೆಲವರು ಸಮಾಜ ಘಾತುಕ ಕೃತ್ಯಗಳಿಗೆ ತಳ್ಳುವಂತಹ ಸಂದರ್ಭಗಳು ಎದುರಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿ ಸುವ ಮೂಲಕ ಜ್ಞಾನವಂತರನ್ನಾಗಿ ಮಾಡ ಬೇಕು. ಸರ್ಕಾರಗಳು ಸಹ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯ ಕ್ರಮಗಳನ್ನು ಜಾರಿಗೊಳಿಸಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ರಾದ ಎಂ.ಭಾರತಿ ಮಾತನಾಡಿ, ದೇಶದಲ್ಲಿನ ಜನಸಂಖ್ಯೆ ಹೆಚ್ಚಳ, ಬಡತನದಿಂದಾಗಿ ಬಾಲಕಾರ್ಮಿಕ ಪದ್ಧತಿ ಹೆಚ್ಚಾ ಗುತ್ತಿದೆ. ಇದು ದೇಶದ ಅಭಿವೃದ್ಧಿಗೆ ಪೆಟ್ಟು ಬೀಳುತ್ತಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಕಿರಿಯ ಸಿವಿಲ್ ನ್ಯಾಯಾ ಧೀಶ ಜಗದೀಶ್ ಬಿಸೇರೊಟ್ಟಿ, ಸಹಾಯಕ ಸರ್ಕಾರಿ ಅಭಿಯೋಜನಕ ಎಸ್.ಶಿವಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೆ.ಎಚ್. ರಾಮೇಗೌಡ, ಬಿಇಓ ಎನ್.ಎ.ಮಲ್ಲೇಶ್ವರಿ, ಕಾರ್ಮಿಕ ನಿರೀಕ್ಷಕ ಹೇಮಚಂದ್ರ, ಮುಖ್ಯಶಿಕ್ಷಕ ಯೋಗಣ್ಣ ಹಾಜರಿದ್ದರು.

ಮದ್ದೂರು ವರದಿ: ಪಟ್ಟಣದ ಡಾ. ಎಚ್.ಕೆ.ಮರಿಯಪ್ಪ ಕಾನ್ವೆಂಟ್‍ಯಲ್ಲಿ ತಾಲೂಕಿನ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರ್ವಜನಿಕರ ಶಿಕ್ಷಣ ಇಲಾಖೆಯಿಂದ ಅಂತರ ರಾಷ್ಟ್ರೀಯ ಬಾಲ ಕಾರ್ಮಿಕ ವಿರೋಧಿ ದಿನ ಅಂಗವಾಗಿ ವಿದ್ಯಾರ್ಥಿ ಗಳಿಗೆ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಪಿ. ಗೌಡ, ಬಾಲ ಕಾರ್ಮಿಕರನ್ನು ಗ್ಯಾರೇಜ್ ಗಳಲ್ಲಿ, ಹೋಟೆಲ್‍ಗಳಲ್ಲಿ ಹಾಗೂ ಇನ್ನಿತರರ ಕಡೆಗಳಲ್ಲಿ ದುಡಿಸಿಕೊಳ್ಳುವುದು ಕಾನೂನು ರೀತ್ಯ ಅಪರಾಧ. ಇದಕ್ಕೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಕೀಲ ಎಂ.ಮಹೇಶ್ ಬಾಲ ಕಾರ್ಮಿಕರ ವಿರೋಧಿ ಬಗ್ಗೆ ವಿಶೇಷ ಉಪನ್ಯಾಸ ಮಾಡಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಡಾ. ಎಚ್.ಕೆ.ಮರಿಯಪ್ಪ ಕಾನ್ವೆಂಟ್ ಆಡಳಿ ತಾಧಿಕಾರಿ ಸಿ.ಬೋರಯ್ಯ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಪಿ.ಎಂ. ಬಾಲಸುಬ್ರಮಣ , ಬಿಇಓ ರೇಣುಕಮ್ಮ, ಕಾರ್ಮಿಕ ನೀರಿಕ್ಷಕಿ ಕಲ್ಪನಾ, ವಕೀಲರ ಸಂಘದ ಅಧ್ಯಕ್ಷ ಜಿ.ಎನ್.ಸತ್ಯ, ಕಾರ್ಯ ದರ್ಶಿ ಎ.ಶಿವಣ್ಣ, ಮುಖ್ಯ ಶಿಕ್ಷಕರಾದ ಕೆ.ಎನ್. ವರದರಾಜು, ಸಿ.ಕೆ.ತಮ್ಮಯ್ಯ ಹಾಜರಿದ್ದರು.

Translate »