ಮಹಿಳೆಯರಿಗೆ ಶೇಖಡ 50ರಷ್ಟು ಮೀಸಲು, ಹಲವು ಘಟಾನುಘಟಿಗಳ ಕನಸು ಖಲಾಸ್ !
ಮಂಡ್ಯ: ವಿಧಾನಸಭಾ ಚುನಾವಣಾ ಕದನ ಮುಗಿದ ಬೆನ್ನಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣಾ ಕದನಕ್ಕೆ ಅಖಾಡ ಸಜ್ಜಾಗಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಜಿಲ್ಲೆಯ ನಾಗ ಮಂಗಲ ಪುರಸಭೆ ಹೊರತುಪಡಿಸಿ 6 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಗರಾ ಭಿವೃದ್ಧಿ ಇಲಾಖೆ ವಾರ್ಡ್‍ವಾರು ಮೀಸ ಲಾತಿ ಪ್ರಕಟಿಸಿದ್ದು, ಚುನಾವಣಾ ದಿನಾಂಕ ವಷ್ಟೇ ಬಾಕಿ ಉಳಿದಿದೆ. ಇದರೊಂದಿಗೆ ಮತ್ತೊಂದು ಚುನಾವಣಾ ಹೋರಾಟಕ್ಕೆ ಎಲ್ಲ ರಾಜಕೀಯ ಪಕ್ಷಗಳು ಸಿದ್ಧವಾಗುವಂತೆ ಮಾಡಿದೆ
ಈ ಬಾರಿ ಮೀಸಲಾತಿ ಹಂಚಿಕೆಯಲ್ಲಿ ಮಹಿಳೆಯರಿಗೆ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50ರಷ್ಟು ಮೀಸಲಾತಿ ನಿಗದಿಗೊಳಿಸಿ ಅಧಿಸೂಚನೆ ಹೊರಡಿಸ ಲಾಗಿದ್ದು, ಮುಂಬರುವ ಚುನಾವಣೆಯ ಬಗ್ಗೆ ನೂರೆಂಟು ಕನಸು ಕಟ್ಟಿಕೊಂಡು ಚುನಾವಣೆಯನ್ನೇ ಕಾದು ನೋಡುತ್ತಿದ್ದ ಬಹುತೇಕ ಘಟಾನುಘಟಿಗಳ ಕನಸನ್ನು ನಗರಾಭಿವೃದ್ಧಿ ಇಲಾಖೆ ಭಗ್ನಗೊಳಿಸಿದೆ.
ಕಳೆದ ಚುನಾವಣೆಯಲ್ಲಿ ಗೆದ್ದವರು, ಸೋತವರು, ಕಡಿಮೆ ಅಂತರದಲ್ಲಿ ಸೋತು ನಿರಾಸೆಯಾದವರು, ಮುಂಬರುವ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆ ಅಖಾಡಕ್ಕಿಳಿಯಲು ಎಲ್ಲ್ಲಾ ರೀತಿಯ ತಯಾರಿ ನಡೆಸಿಕೊಂಡಿರುವ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆ ಪುರುಷರಿಗೆ ಸಮನಾಗಿ ಮಹಿಳೆಯರಿಗೂ ಶೇ. 50ರಷ್ಟು ವಾರ್ಡ್‍ವಾರು ಕರಡು ಮೀಸಲಾತಿ ಪಟ್ಟಿ ಪ್ರಕಟಗೊಳಿಸುವ ಮೂಲಕ ಆಕಾಂಕ್ಷಿತರ ಆಸೆಗೆ ತಣ್ಣೀರು ಎರಚಿದೆ. ಕಳೆದ ಚುನಾವಣೆಯಲ್ಲಿ ಗೆದ್ದು ಅಧಿಕಾರ ಅನುಭವಿಸಿದ ಹಾಲಿ ಸದಸ್ಯರು ಗಳ ಪೈಕಿ ಬಹುತೇಕ ಸದಸ್ಯರಿಗೆ ಈ ಬಾರಿ ಅವಕಾಶ ಸಿಗುವುದೇ ಅನು ಮಾನವಾಗಿದೆ.
ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಗಬೇಕು. ಮಹಿಳೆಯರೂ ಪುರುಷರಷ್ಟೇ ಸಮಾನರು ಎನ್ನುವ ಉದ್ದೇಶದಿಂದ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾಣೆಯಲ್ಲಿ ನಗರ, ಪಟ್ಟಣದ ಒಟ್ಟು ವಾರ್ಡ್‍ಗಳ ಪೈಕಿ ಅರ್ಧದಷ್ಟು ಸ್ಥಾನವನ್ನು ಮಹಿಳೆ ಯರಿಗೆ ಮೀಸಲಿಟ್ಟಿರುವುದು ವಿಶೇಷ ವಾಗಿದೆ.
ಮಂಡ್ಯ ನಗರಸಭೆ: ನಗರಸಭೆಯ ಒಟ್ಟು 35 ವಾರ್ಡ್‍ಗಳ ಪೈಕಿ 16 ವಾರ್ಡ್‍ಗಳಿಗೆ ಮಹಿಳೆಯರಿಗೆ ಅವಕಾಶಕಲ್ಪಿಸಲಾಗಿದೆ. ಈ ಪೈಕಿ 5 ಬಿಸಿಎಂ, 2 ಎಸ್‍ಸಿ, 9 ಸಾಮಾನ್ಯ ವರ್ಗಕ್ಕೆ ನೀಡಲಾಗಿದೆ.
ವಾರ್ಡ್ 1 ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 2 ಸಾಮಾನ್ಯ, ವಾರ್ಡ್ 3 ಹಿಂದುಳಿದ ವರ್ಗ (ಬಿ) ಮಹಿಳೆ, ವಾರ್ಡ್ 3 ಸಾಮನ್ಯ ಮಹಿಳೆ, ವಾರ್ಡ್5 ಹಿಂದುಳಿದ ವರ್ಗ (ಎ) ವಾರ್ಡ್ 6 ಸಾಮಾನ್ಯ, ವಾರ್ಡ್ 7 ಪರಿಶಿಷ್ಟ ಪಂಗಡ, ವಾರ್ಡ್ 8 ಹಿಂದುಳಿದ ವರ್ಗ (ಬಿ), ವಾರ್ಡ್ 9 ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 10 ಪರಿಶಿಷ್ಟ ಜಾತಿ, ವಾರ್ಡ್ 11 ಸಾಮಾನ್ಯ, ವಾರ್ಡ್ 12 ಸಾಮಾನ್ಯ, ವಾರ್ಡ್ 13 ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 14 ಹಿಂದುಳಿದ ವರ್ಗ (ಎ), ವಾರ್ಡ್ 15 ಸಾಮಾನ್ಯ (ಮಹಿಳೆ), ವಾರ್ಡ್ 16 ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 17 ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 18 ಸಾಮಾನ್ಯ ಮಹಿಳೆ, ವಾರ್ಡ್ 19 ಸಾಮಾನ್ಯ, ವಾರ್ಡ್ 20 ಹಿಂದುಳಿದ ವರ್ಗ (ಎ), ವಾರ್ಡ್ 21 ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 22 ಪರಿಶಿಷ್ಟ ಜಾತಿ, ವಾರ್ಡ್ 23 ಸಾಮಾನ್ಯ (ಮಹಿಳೆ), ವಾರ್ಡ್ 24 ಸಾಮಾನ್ಯ, ವಾರ್ಡ್ 25 ಸಾಮಾನ್ಯ, ವಾರ್ಡ್ 26 ಪರಿಶಿಷ್ಟ ಜಾತಿ, ವಾರ್ಡ್ 27 ಹಿಂದುಳಿದ ವರ್ಗ (ಎ), ವಾರ್ಡ್ 28 ಸಾಮಾನ್ಯ ಮಹಿಳೆ, ವಾರ್ಡ್ 29 ಸಾಮಾನ್ಯ, ವಾರ್ಡ್ 30 ಹಿಂದುಳಿದ ವರ್ಗ (ಎ), ವಾರ್ಡ್ 31 ಸಾಮಾನ್ಯ, ವಾರ್ಡ್ 32 ಸಾಮಾನ್ಯ ಮಹಿಳೆ, ವಾರ್ಡ್ 33 ಸಾಮಾನ್ಯ ಮಹಿಳೆ, ವಾರ್ಡ್ 34 ಸಾಮಾನ್ಯ, ವಾರ್ಡ್ 35 ಸಾಮಾನ್ಯ ಮಹಿಳೆಗೆ ಮೀಸ ಲಿಡಲಾಗಿದೆ.
ಮದ್ದೂರು ಪುರಸಭೆ: ಮದ್ದೂರು ಪಟ್ಟಣದ 23 ವಾರ್ಡ್‍ಗಳಿಗೂ ಮೀಸಲಾತಿ ಪ್ರಕಟವಾಗಿದ್ದು ಒಟ್ಟು ಸ್ಥಾನಗಳಲ್ಲಿ ಅರ್ಧದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಈ ಪೈಕಿ 10 ವಾರ್ಡ್‍ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. 2 ಎಸ್‍ಸಿ, 2 ಬಿಸಿಎಂ ಮತ್ತು 6 ಸಾಮಾನ್ಯ ಮಹಿಳೆಗೆ ನಿಗಧಿಪಡಿಸಲಾಗಿದೆ.
ವಾರ್ಡ್ 1 ಸಾಮಾನ್ಯ, ವಾರ್ಡ್ 2 ಎಸ್‍ಸಿ (ಮಹಿಳೆ), ವಾರ್ಡ್ 3 ಬಿಸಿಎಂಎ (ಮಹಿಳೆ), ವಾರ್ಡ್ 4 ಸಾಮಾನ್ಯ, ವಾರ್ಡ್ 5 ಸಾಮಾನ್ಯ (ಮಹಿಳೆ), ವಾರ್ಡ್ 6 ಬಿಸಿಎಂಎ, ವಾರ್ಡ್ 7 ಬಿಸಿಎಂಎ (ಮಹಿಳೆ), ವಾರ್ಡ್ 8 ಎಸ್‍ಸಿ, ವಾರ್ಡ್ 9 ಬಿಸಿಎಂಬಿ, ವಾರ್ಡ್ 10 ಸಾಮಾನ್ಯ, ವಾರ್ಡ್ 11 ಸಾಮಾನ್ಯ, ವಾರ್ಡ್ 12 ಬಿಸಿಎಂಎ, ವಾರ್ಡ್ 13 ಸಾಮಾನ್ಯ (ಮಹಿಳೆ), ವಾರ್ಡ್ 14 ಸಾಮಾನ್ಯ, ವಾರ್ಡ್ 15 ಎಸ್‍ಟಿ, ವಾರ್ಡ್ 16 ಎಸ್‍ಸಿ, ವಾರ್ಡ್ 17 ಸಾಮಾನ್ಯ, ವಾರ್ಡ್ 18 ಎಸ್‍ಸಿ (ಮಹಿಳೆ), ವಾರ್ಡ್ 19 ಬಿಸಿಎಂಎ, ವಾರ್ಡ್ 20 ಸಾಮಾನ್ಯ (ಮಹಿಳೆ), ವಾರ್ಡ್ 21 ಸಾಮಾನ್ಯ (ಮಹಿಳೆÉ), ವಾರ್ಡ್ 22 ಸಾಮಾನ್ಯ (ಮಹಿಳೆ), ವಾರ್ಡ್ 23 ಸಾಮಾನ್ಯ (ಮಹಿಳೆ)ಗೆ ಮೀಸಲಿಡಲಾಗಿದೆ.
ಕೆ.ಆರ್.ಪೇಟೆ ಪುರಸಭೆ: ಪಟ್ಟಣದ ಎಲ್ಲ ವಾರ್ಡ್‍ಗಳಿಗೂ ಸಹ ಮೀಸಲಾತಿ ಪಟ್ಟಿ ಪ್ರಕಟಿಸಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು ಇಲ್ಲಿಯೂ ಸಹ ಮಹಿಳೆಯರಿಗೆ ಸಿಂಹಪಾಲು ನೀಡಲಾಗಿದೆ. ಒಟ್ಟು 23 ವಾರ್ಡ್‍ಗಳ ಪೈಕಿ 10 ವಾರ್ಡ್‍ಗಳಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಪೈಕಿ 2 ಎಸ್‍ಸಿ, 2 ಬಿಸಿಎಂ ಮತ್ತು 6 ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.
ವಾರ್ಡ್ 1 ಸಾಮಾನ್ಯ, ವಾರ್ಡ್ 2 ಎಸ್‍ಸಿ (ಮಹಿಳೆ), ವಾರ್ಡ್ 3 ಬಿಸಿಎಂಎ (ಮಹಿಳೆ), ವಾರ್ಡ್ 4 ಸಾಮಾನ್ಯ, ವಾರ್ಡ್ 5 ಸಾಮಾನ್ಯ (ಮಹಿಳೆ), ವಾರ್ಡ್ 6 ಬಿಸಿಎಂಎ, ವಾರ್ಡ್ 7 ಬಿಸಿಎಂಎ (ಮಹಿಳೆ), ವಾರ್ಡ್ 8 ಎಸ್‍ಸಿ, ವಾರ್ಡ್ 9 ಬಿಸಿಎಂಬಿ, ವಾರ್ಡ್ 10 ಸಾಮಾನ್ಯ, ವಾರ್ಡ್ 11 ಸಾಮಾನ್ಯ, ವಾರ್ಡ್ 12 ಬಿಸಿಎಂಎ, ವಾರ್ಡ್ 13 ಸಾಮಾನ್ಯ (ಮಹಿಳೆ), ವಾರ್ಡ್ 14 ಸಾಮಾನ್ಯ, ವಾರ್ಡ್ 15 ಎಸ್‍ಟಿ, ವಾರ್ಡ್ 16 ಎಸ್‍ಸಿ, ವಾರ್ಡ್ 17 ಸಾಮಾನ್ಯ, ವಾರ್ಡ್ 18 ಎಸ್‍ಸಿ (ಮಹಿಳೆ), ವಾರ್ಡ್ 19 ಬಿಸಿಎಂಎ, ವಾರ್ಡ್ 20 ಸಾಮಾನ್ಯ (ಮಹಿಳೆ), ವಾರ್ಡ್ 21 ಸಾಮಾನ್ಯ (ಮಹಿಳೆ), ವಾರ್ಡ್ 22 ಸಾಮಾನ್ಯ (ಮಹಿಳೆ), ವಾರ್ಡ್ 23 ಸಾಮಾನ್ಯ (ಮಹಿಳೆ)ಗೆ ಮೀಸಲಾಗಿದೆ.
ಪಾಂಡವಪುರ ಪುರಸಭೆ: ಪಾಂಡವಪುರದ ಪುರಸಭೆಗೂ ಸಹ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದ್ದು, ಪುರಸಭೆಯ 23 ವಾರ್ಡ್‍ಗಳ ಪೈಕಿ 10 ವಾರ್ಡ್‍ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಈ ಪೈಕಿ 6 ಸಾಮಾನ್ಯ, 3 ಬಿಸಿಎಂ ಮತ್ತು 1 ಎಸ್‍ಸಿ ಮಹಿಳೆಗೆ ನಿಗದಿಪಡಿಸಲಾಗಿದೆ.
ವಾರ್ಡ್ 1 ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 2 ಸಾಮಾನ್ಯ, ವಾರ್ಡ್ 3 ಸಾಮಾನ್ಯ, ವಾರ್ಡ್ 4 ಸಾಮಾನ್ಯ ಮಹಿಳೆ, ವಾರ್ಡ್ 5 ಹಿಂದುಳಿದ ವರ್ಗ(ಎ), ವಾರ್ಡ್ 6ಹಿಂದುಳಿದ ವರ್ಗ (ಬಿ), ವಾರ್ಡ್ 7 ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 8 ಪರಿಶಿಷ್ಟ ಜಾತಿ, ವಾರ್ಡ್ 9 ಸಾಮಾನ್ಯ, ವಾರ್ಡ್ 10 ಸಾಮಾನ್ಯ, ವಾರ್ಡ್ 11 ಪರಿಶಿಷ್ಟ ಜಾತಿ, ವಾರ್ಡ್ 12 ಹಿಂದುಳಿದ ವರ್ಗ (ಎ), ವಾರ್ಡ್ 13 ಸಾಮಾನ್ಯ (ಮಹಿಳೆ), ವಾರ್ಡ್ 14 ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 15 ಸಾಮಾನ್ಯ, ವಾರ್ಡ್ 16 ಸಾಮಾನ್ಯ, ವಾರ್ಡ್ 17 ಪರಿಶಿಷ್ಟ ಜಾತಿ (ಮಹಿಳೆ), ವಾರ್ಡ್ 18 ಹಿಂದುಳಿದ ವರ್ಗ (ಎ), ವಾರ್ಡ್ 19 ಪರಿಶಿಷ್ಟ ಪಂಗಡ, ವಾರ್ಡ್ 20 ಸಾಮಾನ್ಯ (ಮಹಿಳೆ), ವಾರ್ಡ್ 21 ಸಾಮಾನ್ಯ (ಮಹಿಳೆ), ವಾರ್ಡ್ 22 ಸಾಮಾನ್ಯ (ಮಹಿಳೆ), ವಾರ್ಡ್ 23 ಸಾಮಾನ್ಯ (ಮಹಿಳೆ)ಗೆ ಮೀಸಲಾಗಿದೆ.…
ಮಳವಳ್ಳಿ ಪುರಸಭೆ: ಇಲ್ಲಿನ ಎಲ್ಲ ವಾರ್ಡ್‍ಗಳಿಗೂ ಸಹ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದ್ದು, ಒಟ್ಟು 23 ವಾರ್ಡ್‍ಗಳ ಪೈಕಿ 10 ನ್ನು ಮಹಿಳೆಯರಿಗೆ ಮೀಸಲಿಡಲಾಗಿದ್ದು 2 ಎಸ್ಸಿ,2 ಬಿಸಿಎಂ ಮತ್ತು 6 ಸಾಮಾನ್ಯ ಮಹಿಳೆಗೆ ನಿಗಧಿಪಡಿಸಲಾಗಿದೆ.
ವಾರ್ಡ್ 1 ಸಾಮಾನ್ಯ, ವಾರ್ಡ್ 2 ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 3 ಪರಿಶಿಷ್ಟ ಪಂಗಡ, ವಾರ್ಡ್ 4 ಪರಿಶಿಷ್ಟ ಜಾತಿ, ವಾರ್ಡ್ 5 ಸಾಮಾನ್ಯ, ವಾರ್ಡ್ 6 ಹಿಂದುಳಿದ ವರ್ಗ (ಎ), ವಾರ್ಡ್ 7 ಪರಿಶಿಷ್ಟ ಜಾತಿ, ವಾರ್ಡ್ 8 ಸಾಮಾನ್ಯ (ಮಹಿಳೆ), ವಾರ್ಡ್ 9 ಪರಿಶಿಷ್ಟ ಜಾತಿ (ಮಹಿಳೆ), ವಾರ್ಡ್ 10 ಹಿಂದುಳಿದ ವರ್ಗ (ಬಿ), ವಾರ್ಡ್ 11 ಪರಿಶಿಷ್ಟ ಜಾತಿ, ವಾರ್ಡ್ 12 ಹಿಂದುಳಿದ ವರ್ಗ ಮಹಿಳೆ, ವಾರ್ಡ್ 13 ಸಾಮಾನ್ಯ (ಮಹಿಳೆ), ವಾರ್ಡ್ 14 ಪರಿಶಿಷ್ಟ ಜಾತಿ (ಮಹಿಳೆ), ವಾರ್ಡ್ 15 ಸಾಮಾನ್ಯ, ವಾರ್ಡ್ 16 ಹಿಂದುಳಿದ ವರ್ಗ (ಎ), ವಾರ್ಡ್ 17 ಸಾಮಾನ್ಯ (ಮಹಿಳೆ), ವಾರ್ಡ್: 18 ಸಾಮಾನ್ಯ, ವಾರ್ಡ್: 19 ಸಾಮಾನ್ಯ, ವಾರ್ಡ್ 20 ಸಾಮಾನ್ಯ (ಮಹಿಳೆ), ವಾರ್ಡ್: 21 ಸಾಮಾನ್ಯ (ಮಹಿಳೆ), ವಾರ್ಡ್: 22 ಸಾಮಾನ್ಯ (ಮಹಿಳೆ), ವಾರ್ಡ್: 23 ನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.
ಶ್ರೀರಂಗಪಟ್ಟಣ: ಮುಂಬರುವ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ 23 ವಾರ್ಡ್‍ಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇಲ್ಲಿಯೂ ಸಹ ಮಹಿಳೆಯರಿಗೆ ಸಿಂಹಪಾಲು ದೊರೆತಿದೆ. ಈ ಪೈಕಿ 11 ವಾರ್ಡ್‍ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ವಾರ್ಡ್ 1 ಪರಿಶಿಷ್ಟ ಪಂಗಡ, ವಾರ್ಡ್ 2 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 3 ಸಾಮಾನ್ಯ, ವಾರ್ಡ್ 4 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 5 ಸಾಮಾನ್ಯ, ವಾರ್ಡ್ 6 ಹಿಂದುಳಿದ ವರ್ಗ(ಎ), ವಾರ್ಡ್ 7 ಸಾಮಾನ್ಯ (ಮಹಿಳೆ), ವಾರ್ಡ್ 8 ಹಿಂದುಳಿದ ವರ್ಗ(ಬಿ), ವಾರ್ಡ್ 9 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 10 ಸಾಮಾನ್ಯ, ವಾರ್ಡ್ 11 ಸಾಮಾನ್ಯ, ವಾರ್ಡ್ 12 ಹಿಂದುಳಿದ ವರ್ಗ(ಎ), ವಾರ್ಡ್ :13 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ :14 ಸಾಮಾನ್ಯ ಮಹಿಳೆ, ವಾರ್ಡ್:.15 ಸಾಮಾನ್ಯ, ವಾರ್ಡ್ 16 ಸಾಮಾನ್ಯ, ವಾರ್ಡ್ 17 ಹಿಂದುಳಿದ ವರ್ಗ (ಎ), ವಾರ್ಡ್ 18 ಪರಿಶಿಷ್ಟ ಜಾತಿ, ವಾರ್ಡ್ 19 ಸಾಮಾನ್ಯ (ಮಹಿಳೆ), ವಾರ್ಡ್ 20 ಸಾಮಾನ್ಯ (ಮಹಿಳೆ), ವಾರ್ಡ್ 21 ಪರಿಶಿಷ್ಟ ಜಾತಿ (ಮಹಿಳೆ), ವಾರ್ಡ್ 22 ಸಾಮಾನ್ಯ (ಮಹಿಳೆ), ವಾರ್ಡ್ 23 ಸಾಮಾನ್ಯ (ಮಹಿಳೆ)ಗೆ ಮೀಸಲಿಡಲಾಗಿದೆ.
ನಾಗಮಂಗಲ ಅತಂತ್ರ:
ನಾಗಮಂಗಲ ಪುರಸಭೆಯ ಮೀಸಲಾತಿ ಪ್ರಕಟದ ಸ್ಥಿತಿ ಅತಂತ್ರವಾಗಿದೆ,ಪಟ್ಟಣಪಂಚಾಯಿತಿಯಾಗಿದ್ದ ನಾಗಮಂಗಲ ಪುರಸಭೆಯಾಗಿ ಮೇಲ್ದರ್ಜೆಗೇರಿಸಲ್ಪಟ್ಟಿದೆಯಾದರೂ ಹಾಲಿ ಶಾಸಕ ಕೆ.ಸುರೇಶ್‍ಗೌಡ ಮತ್ತು ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ನಡುವಿನ ರಾಜಕೀಯ ಪ್ರತಿಷ್ಠೆಯಿಂದಾಗಿ ತಾಲ್ಲೂಕಿನ ಕಸುವನಹಳ್ಳಿ, ಬಸವನಳ್ಳಿ ಸೇರಿದಂತೆ ಹಲವು ಹಳ್ಳಿಗಳನ್ನೂ ಸಹ ಪುರಸಭೆ ವ್ಯಾಪ್ತಿಗೆ ಸೇರಿಸುವ ಅಥವಾ ಕೈ ಬಿಡುವ ವಿಷಯ ನೆನೆಗುದಿಗೆ ಬಿದ್ದಿರುವ ಪರಿಣಾಮ ಪುರಸಭೆಗಡಿನಿಗಧಿ ಪಡಿಸುವುದಕ್ಕೂ ಸಮಸ್ಯೆಯಾಗಿದ್ದು ವಾರ್ಡ್ ಮೀಸಲಾತಿ ವಿಷಯವೂ ಸಹ ನೆನೆಗುದಿಗೆ ಬಿದ್ದಿದೆ ಎನ್ನಲಾಗಿದೆ.
– ನಾಗಯ್ಯ ಲಾಳನಕೆರೆ