ಕೌಟಿಲ್ಯ ವಿದ್ಯಾಲಯದಲ್ಲಿ ಚಿಣ್ಣರ ಕ್ರೀಡಾಕೂಟ
ಮೈಸೂರು

ಕೌಟಿಲ್ಯ ವಿದ್ಯಾಲಯದಲ್ಲಿ ಚಿಣ್ಣರ ಕ್ರೀಡಾಕೂಟ

February 3, 2019

ಮೈಸೂರು: ಕೌಟಿಲ್ಯ ವಿದ್ಯಾಲಯದಲ್ಲಿ ಹಮ್ಮಿಕೊಳ್ಳ ಲಾಗಿದ್ದ ವಾರ್ಷಿಕ ಚಿಣ್ಣರ ಕ್ರೀಡಾಕೂಟದಲ್ಲಿ ಪ್ರಿಕೆಜಿಯಿಂದ 2ನೇ ತರಗತಿಯವರೆಗೆ ವಿದ್ಯಾರ್ಥಿಗಳು ಭಾಗವಹಿಸಿದ್ದು, ಹಿರಿಯ ವಕೀಲರಾದ ಅರುಣ್‍ಕುಮಾರ್, ಒಲಂಪಿಕ್ ಕ್ರೀಡೆಯನ್ನು ಪ್ರತಿ ಬಿಂಬಿಸುವ ಜ್ಯೋತಿಯನ್ನು ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವಿಶೇಷ ಅತಿಥಿಯಾಗಿ ಬೆಂಗಳೂರಿನ ಆಚಾರ್ಯ ಇನ್ಸ್‍ಟಿಟ್ಯೂಟ್‍ನ ಪ್ರಾಂಶುಪಾಲರಾದ ಎಸ್.ಗುರು ರಾಜ್ ಭಾಗವಹಿಸಿ, ಬಹುಮಾನ ವಿತರಿಸಿದರು. ನಂತರ ವಿದ್ಯಾರ್ಥಿಗಳು ಹಲವಾರು ಕ್ರೀಡೆಗಳ ಪ್ರದರ್ಶನವನ್ನು ನೀಡಿ ತಮ್ಮ ಕ್ರೀಡಾ ಸಾಮಥ್ರ್ಯವನ್ನು ಸಾಬೀತುಪಡಿಸಿದರು. ಇದೇ ಸಂದರ್ಭದಲ್ಲಿ ಪೋಷಕರಿಗೂ ಹಲವು ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನಗಳನ್ನು ನೀಡಲಾಯಿತು.

ವಿದ್ಯಾಲಯದ ಅಧ್ಯಕ್ಷರಾದ ಆರ್.ರಘು, ಪ್ರಾಂಶುಪಾಲರಾದ ಡಾ.ಎಲ್.ಸವಿತ, ಕಿಂಡರ್‍ಗಾರ್ಟನ್ ಸಂಯೋಜಕರಾದ ಶ್ರೀಮತಿ ಸ್ನೇಹರಾವ್, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲಿ ್ಲಉಪಸ್ಥಿತರಿದ್ದರು.

Translate »