ರಿಂಗ್ ರಸ್ತೆಯಲ್ಲಿ ಸರಕು  ಸಾಗಾಣೆ ವಾಹನ ಪಲ್ಟಿ
ಮೈಸೂರು

ರಿಂಗ್ ರಸ್ತೆಯಲ್ಲಿ ಸರಕು ಸಾಗಾಣೆ ವಾಹನ ಪಲ್ಟಿ

February 3, 2019

ಮೈಸೂರು: ಸಿಹಿ ಬೂದುಗುಂಬಳಕಾಯಿ ತುಂಬಿದ ಸರಕು ಸಾಗಾಣೆ ವಾಹನ ಇಂದು ಸಂಜೆ ಮೈಸೂರಿನ ರಾಜರಾಜೇಶ್ವರಿನಗರ ಬಳಿ ರಿಂಗ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿತು. ಬೋಗಾದಿ ಕಡೆಯಿಂದ ದಟ್ಟಗಳಿ ಕಡೆಗೆ ಹೋಗು ತ್ತಿದ್ದ 407 ಸರಕು ಸಾಗಾಣೆ ವಾಹನ (ಕೆಎಲ್ 12-ಎ 4111) ಸಂಜೆ 5.15 ಗಂಟೆ ವೇಳೆಗೆ ಉರುಳಿಬಿದ್ದಿತು. ಪರಿಣಾಮ ಸಿಹಿಬೂದುಗುಂಬಳಕಾಯಿಗಳೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದವು. ವಾಹನ ಸ್ವಲ್ಪ ಜಖಂಗೊಂಡಿತಾದರೂ, ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಇದರಿಂದ ಕೆಲಕಾಲ ರಿಂಗ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕುವೆಂಪುನಗರ ಸಂಚಾರ ಠಾಣೆ ಎಎಸ್‍ಐ ಸಿದ್ದೇಗೌಡ ಹಾಗೂ ಸಿಬ್ಬಂದಿ, ನೆಲಕ್ಕುರು ಳಿದ್ದ ವಾಹನವನ್ನು ಕ್ರೇನ್‍ನಿಂದ ಮೇಲೆತ್ತಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Translate »