ನಾಳೆಯಿಂದ ರಂಗಾಯಣದಲ್ಲಿ ಚಿಣ್ಣರ ಮೇಳ
ಮೈಸೂರು

ನಾಳೆಯಿಂದ ರಂಗಾಯಣದಲ್ಲಿ ಚಿಣ್ಣರ ಮೇಳ

April 12, 2019

ಮೈಸೂರು: ಹಲವು ವೈಶಿಷ್ಟ್ಯತೆಯೊಂದಿಗೆ ಈ ಸಾಲಿನ `ಚಿಣ್ಣರ ಮೇಳ’ ಏ.13ರಂದು ಆರಂಭವಾಗಲಿದ್ದು, 26 ದಿನಗಳ ಕಾಲ ಮಕ್ಕಳಿಗೆ `ಕಾಯಕ, ಕೌಶಲ ಹಾಗೂ ಕರ್ತವ್ಯ’ದ ಶೀರ್ಷಿಕೆ ಯಡಿ ಕಲೆ, ಚಿತ್ರಕಲೆ ಹಾಗೂ ರಂಗಶಿಕ್ಷಣ ನೀಡ ಲಾಗುತ್ತದೆ ಎಂದು ರಂಗಾಯಣ ನಿರ್ದೇ ಶಕಿ ಭಾಗೀರಥಿ ಬಾಯಿ ಕದಂ ತಿಳಿಸಿದ್ದಾರೆ.

ರಂಗಾಯಣದ ಆವರಣದಲ್ಲಿ ಗುರು ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ ತಿಂಗಳಿಗೆ 7 ವರ್ಷ ತುಂಬಿದ ಮಕ್ಕಳಿಂದ 14 ವರ್ಷದೊಳ ಗಿನ 400 ವಿದ್ಯಾರ್ಥಿಗಳು ಮೇಳದಲ್ಲಿ ಪಾಲ್ಗೊ ಳ್ಳಲಿದ್ದಾರೆ. ಏ.13ರಿಂದ ಮೇ 8ರವರೆಗೆ ನಡೆಯಲಿರುವ ಬೇಸಿಗೆ ಶಿಬಿರದಲ್ಲಿ 40 ಮಕ್ಕಳಿಗೆ ಒಂದೊಂದು ತಂಡವಾಗಿ ವಿಂಗ ಡಿಸಲಾಗುತ್ತದೆ. ರಂಗಪಯಣ, ಮಕ್ಕಳಿಗೆ ಮನೋವಿಕಾಸಕ್ಕೆ ಅಗತ್ಯವಾದ ಚಟು ವಟಿಕೆ, ಮಕ್ಕಳ ಸಾಹಿತ್ಯ, ಬಾಲ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಕಲಿಸಲಾಗುತ್ತದೆ ಎಂದರು.

ರಂಗಾಯಣದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಈ ಬಾರಿ ಚಿಣ್ಣರ ಮೇಳವನ್ನು ವಿಭಿನ್ನವಾಗಿ ನಡೆಸಲಾಗುತ್ತಿದೆ. `ಡಿ-ಕನ್‍ಸ್ಟ್ರಕ್ಷನ್’ ಮಾದರಿ ಮಕ್ಕಳಿಗೆ ಕಲಿಸಲಾಗುತ್ತದೆ. ಒಂದು ತಂಡ ಸೈಕಲ್ ಅನ್ನು ಬಿಡಿ ಬಿಡಿಯಾಗಿ ವಿಂಗಡಿ ಸಿದರೆ, ಮತ್ತೊಂದು ತಂಡದ ಮಕ್ಕಳು ಅದನ್ನು ಮರು ಜೋಡಿಸುತ್ತಾರೆ. ಮಕ್ಕಳು ಮನೆಯಿಂದ ತರುವ ಹಳೆಯ ವಸ್ತುಗಳಿಂದ ರಂಗಾಯಣದ ಆವರಣವನ್ನು ಗುಜರಿ ಮಾದರಿಯಲ್ಲಿ ಅಲಂಕರಿಸಲಾಗುತ್ತದೆ. ಅಲ್ಲದೆ ಗುಜರಿಗೆ ಮಕ್ಕಳನ್ನು ಕರೆದೊಯ್ದು ಅಲ್ಲಿನ ವಾತಾವರಣವನ್ನು ಪರಿಚಯಿಸ ಲಾಗುತ್ತದೆ. ಕೆಸರು ಗದ್ದೆ, ನಾಲೆಯನ್ನು ಶಿಬಿರದ ಮಕ್ಕಳಿಗೆ ಪರಿಚಯಿಸಲಾಗುತ್ತದೆ ಎಂದು ಹೇಳಿದರು.

ಒಂದು ದಿನ ಆಲೆಮನೆಗೆ ಕರೆದೊಯ್ದು ಕಬ್ಬು ಅರೆಯುವುದು, ಬೆಲ್ಲ ತಯಾರಿಸು ವುದನ್ನು ಮಕ್ಕಳಿಗೆ ಪ್ರಾತ್ಯಕ್ಷಿಕೆ ನೀಡಲಾಗು ತ್ತದೆ. ಮೇಳದಲ್ಲಿ ನೇಯ್ಗೆ, ಮಟ್ಟಾಳೆ ಗರಿ ಎಣೆಯುವುದು, ಗರಿಯಲ್ಲಿರುವ ಕಡ್ಡಿಯನ್ನು ಪ್ರತ್ಯೇಕಿಸುವುದು, ಅಡುಗೆ ಮಾಡುವುದನ್ನು ಕಲಿಸಲಾಗುತ್ತದೆ. ಸಣ್ಣ ಸಣ್ಣ ಕಥಾ ಗುಚ್ಛ ವನ್ನು ಮಕ್ಕಳು ಅಭಿನಯಿಸಲಿದ್ದಾರೆ. ಚಿಣ್ಣರ ಮೇಳದಲ್ಲಿ ಎಲ್ಲಾ ಮಕ್ಕಳಿಗೂ ಅಭಿನಯ ಅವಕಾಶ ಕಲ್ಪಿಸಲಾಗುತ್ತಿದೆ. ಏ.13ರಂದು ಸಂಜೆ 4ಕ್ಕೆ ಚಿಣ್ಣರ ಮೇಳವನ್ನು ಹೆಸ ರಾಂತ ಕಲಾವಿದರಾದ ರಾಮಚಂದ್ರ ಹಡ ಪದ್ ಅವರು ಮೇಳದ ಆಶಯ ಗೀತೆ `ಕರುಣಾಳು ಬಾ ಬೆಳಕೆ’ ಹಾಗೂ ಮೈಸೂರು ಸಂಸ್ಥಾನದ ಆಳ್ವಿಕೆ ಕಾಲದಲ್ಲಿ ರಾಷ್ಟ್ರಗೀತೆ ಯಾಗಿದ್ದ `ಕಾಯೋ ಶ್ರೀ ಗೌರಿ’ ಗೀತೆ ಯನ್ನು ಮಕ್ಕಳಿಗೆ ಕಲಿಸಿ ದೀಕ್ಷೆ ನೀಡುವ ಮೂಲಕ ಉದ್ಘಾಟಿಸಲಿದ್ದಾರೆ.

ಸಿದ್ಧತೆ: ಚಿಣ್ಣರ ಮೇಳಕ್ಕೆ ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ. ಬೇಸಿಲ ಬೇಗೆಯಿಂದ ಮಕ್ಕಳನ್ನು ರಕ್ಷಿಸಲು ಟೆಂಟ್ ನಿರ್ಮಿಸ ಲಾಗುತ್ತಿದೆ. ಅಲ್ಲದೆ ಬಹುರೂಪಿ ನಾಟಕೋ ತ್ಸವದಲ್ಲಿ ರಂಗಾಯಣದ ಆವರಣ ಸಿಂಗರಿಸಿದ್ದಂತೆ ಸಿದ್ಧತೆ ಮಾಡಲಾಗುತ್ತಿದೆ.
ಇದೇ ವೇಳೆ ಚಿಣ್ಣರ ಮೇಳದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಗೀತಾ ಮೊಂಟಡ್ಕ, ಪ್ರಶಾಂತ, ದ್ವಾರಕ ನಾಥ್ ಉಪಸ್ಥಿತರಿದ್ದರು.

Translate »