ರಾಜಕೀಯದ ಅರಿವಿಲ್ಲದ ವ್ಯಕ್ತಿಯನ್ನು ಆರಿಸಿದ್ದೇ ಕೊಡಗು ಅಭಿವೃದ್ಧಿಗೆ ಹಿನ್ನಡೆ
ಕೊಡಗು

ರಾಜಕೀಯದ ಅರಿವಿಲ್ಲದ ವ್ಯಕ್ತಿಯನ್ನು ಆರಿಸಿದ್ದೇ ಕೊಡಗು ಅಭಿವೃದ್ಧಿಗೆ ಹಿನ್ನಡೆ

April 10, 2019

ಸೋಮವಾರಪೇಟೆ: ಮೈಸೂರು- ಕೊಡಗು ಲೋಕಸಭಾ ಚುನಾವಣೆಯಲ್ಲಿ ಕಳೆದ ಭಾರಿ ರಾಜಕೀಯದ ಗಂಧಗಾಳಿ ಇಲ್ಲದ ಅಭ್ಯರ್ಥಿಯನ್ನು ಮತದಾರರು ಆರಿಸಿ ಕಳುಹಿಸಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಹಿನ್ನೆಡೆಗೆ ಕಾರಣ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಆರೋಪಿಸಿದರು.

ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಬೂತ್ ಮಟ್ಟದ ಪದಾಧಿಕಾರಿಗಳು ಹಾಗೂ ವಿವಿಧ ಘಟಕಗಳ ಸಭೆಯಲ್ಲಿ ಅವರು ಮಾತ ನಾಡಿದರು. ಕ್ಷೇತ್ರದ ಮತದಾರರು ತಮ್ಮ ಹಿತವನ್ನು ಕಾಯಲು ಆಯ್ಕೆ ಮಾಡಿ ಕಳಿಸಿದರೆ, ವಿಯೇಟ್ನಾಂನಿಂದ ಕಾಳು ಮೆಣ ಸನ್ನು ಆಮದು ಮಾಡಿಕೊಳ್ಳಲು ಅನುವು ಮಾಡಿಕೊಡುವ ಮೂಲಕ, ಕಾಳು ಮೆಣ ಸಿನ ದರ ಕುಸಿತಕ್ಕೆ ಕಾರಣರಾಗಿ ರೈತರ ಕಗ್ಗೊಲೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ತಪ್ಪು ಆಮದು ನೀತಿಯೇ ಕಾಫಿ, ಮೆಣಸು ಹಾಗೂ ಏಲಕ್ಕಿ ಬೆಲೆ ಕುಸಿತಕ್ಕೆ ಕಾರಣ ವಾಗಿದೆ ಎಂದು ದೂರಿದರು.

ಹಿಂದಿನ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅನಾಹುತಗಳು ನಡೆದಿದ್ದವು. ಜಿಲ್ಲೆಯಿಂದ ಸಾಕಷ್ಟು ಸಂಪತ್ತನ್ನು ಪಡೆ ದಿದ್ದ ಕೇಂದ್ರ ಸರ್ಕಾರ ಸಂಕಷ್ಟದ ಅವಧಿ ಯಲ್ಲಿ ಯಾವುದೇ ನೆರವನ್ನು ನೀಡದೆ ಕೈ ಬಿಟ್ಟಿತು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಬಂದು ಒಂದೆರಡು ಗಂಟೆಗ ಳನ್ನು ಜಿಲ್ಲೆಯಲ್ಲಿ ವ್ಯಯಿಸುವುದನ್ನು ಬಿಟ್ಟಿರೆ, ಪ್ರಧಾನ ಮಂತ್ರಿ ಹಾಗೂ ಬೇರಾವ ಮಂತ್ರಿಗಳು ಜಿಲ್ಲೆಯತ್ತ ಮುಖ ಮಾಡ ಲಿಲ್ಲ. ಇದರಿಂದ ಅವರಿಗೆ ಜಿಲ್ಲೆಯ ಮತ ದಾರರ ಮೇಲೆ ಇರುವ ಆಭಿಮಾನವನ್ನು ತಿಳಿಸುತ್ತದೆ ಎಂದು ವ್ಯಂಗ್ಯವಾಡಿದರು.

ತಮ್ಮ 5 ವರ್ಷದ ಸಂಸದರ ಅವಧಿಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸದೆ, ಯಾವುದೇ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸದ ಪ್ರತಾಪ ಸಿಂಹ ಅವರನ್ನು ಮತದಾರರು ತಿರಸ್ಕರಿಸಬೇಕಿದೆ. ಪ್ರಸಕ್ತ ಚುನಾವಣೆಯಲ್ಲಿ ನನ್ನನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳಿಸಿದಲ್ಲಿ ಕ್ಷೇತ್ರದ ಮೂಲಭೂತ ಸಮಸ್ಯೆ ಗಳ ಪರಿಹಾರ ಮಾಡುವುದಾಗಿ ತಿಳಿಸಿದರು.

ಲೋಕೋಪಯೋಗಿ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ಕೇಂದ್ರ ಸರ್ಕಾರ ದೇಶದ ರೈತರ ಹಿತ ಕಾಯದೆ, ಅವರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಯುಪಿಎ ಸರ್ಕಾರದ ಅವಧಿ ಯಲ್ಲಿ ರೈತರಿಗೆ ಸಾಕಷ್ಟು ಸಹಾಯ ಧನದ ಮೂಲಕ ಯೋಜನೆಗಳನ್ನು ನೀಡಿ ರೈತರ ಹಿತ ಕಾಯುವಲ್ಲಿ ಯಶಸ್ವಿಯಾಗಿತ್ತು. ಕೈಗಾ ರಿಕೆ ಹಾಗೂ ಕೃಷಿಯನ್ನು ಒಟ್ಟಾಗಿ ತೆಗೆದು ಕೊಂಡು ಹೋಗಲಾಗಿತ್ತು. ಆದರೆ, ಕೇವಲ ಉದ್ಯಮಿಗಳು ಹಾಗೂ ಬೃಹತ್ ವ್ಯಾಪಾರಿ ಗಳನ್ನು ಓಲೈಕೆ ಮಾಡುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ರೈತರ ಸವಲತ್ತು ಗಳನ್ನು ಕಿತ್ತುಕೊಂಡಿದೆ ಎಂದರು.

ದೇಶದ ಜನರಲ್ಲಿ ಧಾರ್ಮಿಕ ಭಯ ವನ್ನು ಹುಟ್ಟುಹಾಕುವ ಮೂಲಕ ಅದರ ಲಾಭವನ್ನು ಪಡೆಯುತ್ತಿದೆ. ನಮ್ಮ ಸಂವಿ ಧಾನವನ್ನು ಉಳಿಸಿಕೊಳ್ಳಲು, 17ನೇ ಲೋಕ ಸಭಾ ಚುನಾವಣೆ ಪ್ರಮುಖ ಪಾತ್ರ ವಹಿ ಸುತ್ತಿದೆ. ಸಾಮಾಜಿಕ ಬದ್ಧತೆಯಿಲ್ಲದ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡುವ ಮೂಲಕ ವಿಜಯಶಂಕರ್‍ರವರ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕೇಂದ್ರ ಸರ್ಕಾರ ಉದ್ದಿಮೆ ದಾರರು ಮತ್ತು ಹಣವುಳ್ಳವರ ಪರಿವಾಗಿ ಕೆಲಸ ಮಾಡುತ್ತಿದೆ. ಜನ ಸಾಮಾನ್ಯರು ದಿನದಿಂದ ದಿನಕ್ಕೆ ಕಷ್ಟಕ್ಕೀಡಾಗುತ್ತಿದ್ದಾರೆ. ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಉತ್ತಮ ಅವಕಾಶವಿದ್ದು, ಕಾರ್ಯಕರ್ತರು ತಮ್ಮಲ್ಲಿನ ವೈಷಮ್ಯವನ್ನು ಬದಿಗಿರಿಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರೊಂದಿಗೆ ಒಗ್ಗೂಡಿ ಕೆಲಸ ಮಾಡುವ ಮೂಲಕ ಗೆಲ್ಲಿಸಬೇಕೆಂ ದರು. ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಪಿರಿಯಾಪಟ್ಟ ಣದ ಶಾಸಕ ವೆಂಕಟೇಶ್, ಕೆಪಿಸಿಸಿ ವೀಕ್ಷಕ ವೆಂಕಪ್ಪಗೌಡ, ಸದಸ್ಯ ಶಾಮ್, ಅಲ್ಪಸಂ ಖ್ಯಾತ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಎ. ಯಾಕೂಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ರಾಜ್ಯ ಪರಿಶಿಷ್ಟ ಜಾತಿ ಘಟಕದ ಕಾರ್ಯದರ್ಶಿ ಬಿ.ಈ. ಜಯೇಂದ್ರ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ಎ. ಆದಮ್, ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಅಬ್ರಾರ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಿಥುನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Translate »