ಗೊಂದಿಬಸವನಹಳ್ಳಿಯಲ್ಲಿ ಜಲ ಜಾಗೃತಿ ಆಂದೋಲನ
ಕೊಡಗು

ಗೊಂದಿಬಸವನಹಳ್ಳಿಯಲ್ಲಿ ಜಲ ಜಾಗೃತಿ ಆಂದೋಲನ

April 10, 2019

ಕುಶಾಲನಗರ: ಬೆಳಗಾವಿ ತಾಂತ್ರಿಕ ವಿಶ್ವೇಶ್ವರಯ್ಯ ವಿಶ್ವವಿದ್ಯಾನಿಲಯ ಹಾಗೂ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ‘ಸದೃಢ ಭಾರತಕ್ಕಾಗಿ ಆರೋಗ್ಯ ವಂತ ಯುವಜನತೆ’ ಎಂಬ ಕೇಂದ್ರ ವಿಷಯ ದಡಿ ಇಲ್ಲಿಗೆ ಸಮೀಪದ ಗೊಂದಿ ಬಸವನ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಏರ್ಪಡಿಸಿದ್ದ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಶಾಲೆಯ ಇಕೋ ಕ್ಲಬ್ ಆಶ್ರಯದಲ್ಲಿ ಜಲ ವರ್ಷಾ ಚರಣೆ ಹಾಗೂ ವಿಶ್ವ ಜಲ ದಿನದ ಅಂಗ ವಾಗಿ (Theme of Water day : Leaving no one behind) ಭವಿಷ್ಯ ಕ್ಕಾಗಿ ‘ಜಲ ಸಂರಕ್ಷಣೆ’ ಕುರಿತ ಜನ ಜಾಗೃತಿ ಆಂದೋಲನ ನಡೆಸಲಾಯಿತು.

‘ಜಲ ಸಂರಕ್ಷಣೆ’ ಕುರಿತು ಉಪನ್ಯಾಸ ನೀಡಿದ ಕೊಡಗು ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಯೋಜಕರೂ ಆದ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್‍ನ ಸಂಪನ್ಮೂಲ ವ್ಯಕ್ತಿ ಟಿ.ಜಿ. ಪ್ರೇಮಕುಮಾರ್, ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕ್ಷೀಣಿಸಿರುವುದರಿಂದ ಅಂತ ರ್ಜಲ ಕುಸಿದು ಜಲಮೂಲಗಳು ಕ್ಷೀಣಿ ಸಿವೆ. ಇದರಿಂದ ದಿನೇ ದಿನೇ ಕುಡಿ ಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಸಂರಕ್ಷಣೆ ಬಗ್ಗೆ ನಾವು ಜಾಗೃ ತರಾಗದಿದ್ದಲ್ಲಿ ಭವಿಷ್ಯತ್ತಿನಲ್ಲಿ ತೀವ್ರ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಗೆ ಪರಿಸರ ಮತ್ತು ಜಲ ಸಂರಕ್ಷಣೆ ಕುರಿತಂತೆ ಪ್ರತಿಜ್ಞಾ ವಿಧಿ ಬೋಧಿಸಿದ ಸಂಪನ್ಮೂಲ ವ್ಯಕ್ತಿ ಟಿ.ಜಿ. ಪ್ರೇಮಕುಮಾರ್, ಇಂದು ಎಲ್ಲಾ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದು ರಾಗಿರುವುದರಿಂದ ನಾವು ನೀರನ್ನು ಪೋಲು ಮಾಡದೆ ಮಿತವಾಗಿ ಬಳಕೆ ಮಾಡುವ ಮೂಲಕ ಭವಿಷ್ಯಕ್ಕಾಗಿ ನೀರನ್ನು ಸಂರಕ್ಷಿಸಬೇಕಿದೆ ಎಂದರು.
ಪ್ರತಿವರ್ಷ ಬೇಸಿಗೆಗೂ ಮುನ್ನ ಜೀವ ನದಿ ಕಾವೇರಿ ಸೇರಿದಂತೆ ನಾಡಿನ ಎಲ್ಲಾ ನದಿ ಗಳು, ಕೆರೆಗಳು ಹಾಗೂ ಜಲಮೂಲಗಳು ಕ್ಷೀಣಿಸುತ್ತಿವೆ. ಈ ದಿಸೆಯಲ್ಲಿ ಅಂತರ್ಜಲ ಮತ್ತು ಜಲಮೂಲಗಳ ಸಂರಕ್ಷಣೆ ದೃಷ್ಠಿಯಲ್ಲಿ ಕರ್ನಾಟಕ ಸರ್ಕಾರ ಪ್ರಸಕ್ತ ವರ್ಷವನ್ನು ಜಲವರ್ಷ ಎಂದು ಘೋಷಿಸಿದೆ. ಜಲ ವರ್ಷದ ಆಚರಣೆ ಅಂಗವಾಗಿ ಜನರಲ್ಲಿ ನೀರಿನ ಮಿತ ಬಳಕೆ ಮತ್ತು ಜಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರೇಮಕುಮಾರ್ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎನ್ನೆಸ್ಸೆಸ್ ಶಿಬಿರಾಧಿಕಾರಿ ಪ್ರಸಾದ್ ಸಲ್ಯಾನ್, ಶಿಬಿ ರಾರ್ಥಿಗಳು ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ನಂತರ ಗ್ರಾಮದಲ್ಲಿ ಜಲ ವರ್ಷ ಹಾಗೂ ವಿಶ್ವ ಜಲ ದಿನಾಚರಣೆ ಅಂಗವಾಗಿ ಜಲ ಜಾಗೃತಿ ಜಾಥಾ ನಡೆಸಲಾಯಿತು. ಗ್ರಾಮ ದಲ್ಲಿ ಸಂಚರಿಸಿದ ವಿದ್ಯಾರ್ಥಿಗಳು ಜಲ ಸಂರಕ್ಷಣೆ-ನಮ್ಮೆಲ್ಲರ ಹೊಣೆ, ಜಲವೇ ಜೀವ ಜಲ, ನೀರನ್ನು ಮಿತವಾಗಿ ಬಳಸಿ-ಭವಿಷ್ಯ ಕ್ಕಾಗಿ ಉಳಿಸಿ, ಅಂತರ್ಜಲ ಸಂರಕ್ಷಣೆ ನಮ್ಮೆ ಲ್ಲರ ಹೊಣೆ, ಜಲಮೂಲಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬಿತ್ಯಾದಿ ಪರಿಸರ ಘೋಷಣೆಗಳನ್ನು ಪ್ರಚುರಪಡಿಸಿದರು. ನಂತರ ಎನ್.ಎಸ್.ಎಸ್. ಶಿಬಿರಾರ್ಥಿ ಗಳು ಗ್ರಾಮದಲ್ಲಿ ಸಂಚರಿಸಿ ಪ್ಲಾಸ್ಟಿಕ್ ಮಾಲಿ ನ್ಯವನ್ನು ತಡೆಗಟ್ಟುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

Translate »