ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ
ಕೊಡಗು

ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

April 10, 2019

ಇಂದಿನಿಂದ ಅನಿರ್ಧಿಷ್ಟ ಕಾಲ ಧರಣಿ
ಸಿದ್ದಾಪುರ: ತೆರಿಗೆ ಸಂಗ್ರಹದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ವೇತನ ಪಾವತಿ ಹಾಗೂ ಸರ್ಕಾರದ ಆದೇಶ ಗಳನ್ನು ಜಾರಿ ಮಾಡಲು ಒತ್ತಾಯಿಸಿ ನಾಳೆ(ಏ.10)ಯಿಂದ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ ನಡೆಸುವುದಾಗಿ ಪಂಚಾಯತ್ ನೌಕರರ ಸಂಘದ ಜಿಲ್ಲಾ ಧ್ಯಕ್ಷ ಪಿ.ಆರ್.ಭರತ್ ತಿಳಿಸಿದ್ದಾರೆ.

ಸಿದ್ದಾಪುರದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಗ್ರಾಮ ಪಂಚಾಯಿ ತಿಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಮೂಲ ಸೌಕರ್ಯಗಳೊಂದಿಗೆ ಸರ್ಕಾರ ಆದೇಶಿಸಿದ ವೇತನವನ್ನು ನೀಡಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಅನಿರ್ಧಿಷ್ಟ ಕಾಲ ಸತ್ಯಾಗ್ರಹ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳಿಗೆ ನೌಕರರು ಮನವಿ ಸಲ್ಲಿಸಿದ್ದಾರೆ.

ಇಎಫ್‍ಎಂಎಸ್‍ಗೆ ಸೇರ್ಪಡೆಯಾಗದೆ ಉಳಿದಿರುವ ಸಿಬ್ಬಂದಿಯನ್ನು ಪಂಚಾ ಯಿತಿ ಅಧಿಕಾರಿಗಳು ಪಂಚತಂತ್ರ ತಂತ್ರಾಂ ಶದಲ್ಲಿ ಸೇರ್ಪಡೆ ಮಾಡಿ ಸರ್ಕಾರಕ್ಕೆ ಕಳು ಹಿಸಲು ಸುತ್ತೋಲೆ ಕಳಿಸಲಾಗಿದ್ದು, ಸರ್ಕಾ ರದ ಆದೇಶದಂತೆ ಕೂಡಲೇ ಸಿಬ್ಬಂದಿ ಯನ್ನು ಸೇರಿಸಲು ಒತ್ತಾಯಿಸಿದ್ದಾರೆ. ನಿವೃತ್ತಿ ಯಾದವರಿಗೆ ಉಪಧನ ನೀಡಬೇಕೆಂದು ಸರ್ಕಾರದ ಆದೇಶವಿದ್ದರೂ ಇಂದಿಗೂ ಸರಿಯಾಗಿ ನೀಡುತ್ತಿಲ್ಲ. ಕೂಡಲೇ ಉಪ ಧನ ನೀಡಬೇಕೆಂದು ಒತ್ತಾಯಿಸಿದ ಅವರು ಸೇವಾ ನಿಯಮಾವಳಿ, ಪೆನ್ಷನ್, ವೈದ್ಯ ಕೀಯ ವೆಚ್ಚ, ಕಂಪ್ಯೂಟರ್ ಆಪರೇಟ ರ್‍ಗಳಿಗೆ ಬಡ್ತಿಗೆ ಸೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಳನ್ನು ಈಡೇರಿಸ ಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಪಂಚಾಯಿತಿ ನೌಕರರಾದ ಈಶ್ವರ, ಎಂ.ಕೆ ಹರೀಶ್, ಅಮೀರ್ ಉಪಸ್ಥಿತರಿದ್ದರು

Translate »