ಸೈಬರ್ ಭದ್ರತೆ, ಐಓಟಿ ಕುರಿತಂತೆ ಸಿಐಐ ವಾರ್ಷಿಕ ಐಟಿ/ಐಟಿಇಎಸ್ ಸಮ್ಮೇಳನ: ಮೈಸೂರು ಸೈಬರ್ ಭದ್ರತೆಯ ಕೇಂದ್ರವಾಗಿ ಬೆಳೆಯಲು ಸೂಕ್ತ
ಮೈಸೂರು

ಸೈಬರ್ ಭದ್ರತೆ, ಐಓಟಿ ಕುರಿತಂತೆ ಸಿಐಐ ವಾರ್ಷಿಕ ಐಟಿ/ಐಟಿಇಎಸ್ ಸಮ್ಮೇಳನ: ಮೈಸೂರು ಸೈಬರ್ ಭದ್ರತೆಯ ಕೇಂದ್ರವಾಗಿ ಬೆಳೆಯಲು ಸೂಕ್ತ

December 19, 2019

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಮತ
ಮೈಸೂರು,ಡಿ.18(ಪಿಎಂ)-ಸೈಬರ್ ಭದ್ರತೆಯ ಕೇಂದ್ರವಾಗಿ ಬೆಳೆಯಲು ಮೈಸೂರು ಸೂಕ್ತವಾಗಿದ್ದು, ಈಗಾಗಲೇ ಇದಕ್ಕೆ ಪೂರಕ ವ್ಯವಸ್ಥೆಗಳನ್ನು ಮೈಸೂರು ಹೊಂದಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆ ಯರ್ ಅಭಿಪ್ರಾಯಪಟ್ಟರು.

ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ಹೋಟೆಲ್ ಕಂಟ್ರಿ ಇನ್‍ನಲ್ಲಿ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಮೈಸೂರು ಘಟಕದ ವತಿಯಿಂದ ಸೈಬರ್ ಭದ್ರತೆ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಓಟಿ/ಅಂತರ್ಜಾಲ ಸಂಪರ್ಕಿತ ಸಾಧನ-ಸಲಕರಣೆ)-ಡೆಸ್ಟಿನೇಷನ್ ಮೈಸೂರು’ ಕುರಿತಂತೆ ಬುಧವಾರ ಹಮ್ಮಿ ಕೊಂಡಿದ್ದ ಸಿಐಐ ವಾರ್ಷಿಕ ಐಟಿ/ಐಟಿಇಎಸ್ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಮೈಸೂರು ಈ ಹಿಂದೆಯೇ ರಾಜ-ಮಹಾರಾಜರ ಕಾಲದಿಂದ ಅನೇಕ ವೈಶಿಷ್ಟ್ಯ ಗಳಿಗೆ ಹೆಸರಾಗಿದೆ. ಹಲವು ಆವಿಷ್ಕಾರ ಗಳೊಂದಿಗೆ ತನ್ನ ಛಾಪು ಮೂಡಿಸಿದೆ. ಮೈಸೂರು ಸ್ಯಾಂಡಲ್ ಸೋಪು, ಮೈಸೂರು ಸ್ಟೀಲ್ ಸೇರಿದಂತೆ ಅನೇಕ ಉತ್ಪನ್ನಗಳ ಕೈಗಾ ರಿಕೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸು ವಂತಾಗಿದೆ. ಅದೇ ರೀತಿ ಸಾಫ್ಟ್‍ವೇರ್ ತಂತ್ರಾಂಶಗಳ ಸುರಕ್ಷತೆಗೆ ಸೈಬರ್ ಭದ್ರತೆ ಬಹು ಮುಖ್ಯವಾಗಿದ್ದು, ಮೈಸೂರು ಸೈಬರ್ ಭದ್ರತೆಯ ಕೇಂದ್ರವಾಗಿ ಬೆಳೆಯಲು ಪೂರಕ ವಾತಾವರಣ ಹೊಂದಿದೆ ಎಂದು ಹೇಳಿದರು.

ಸಾಫ್ಟ್‍ವೇರ್ ಟೆಕ್ನಾಲಜಿ ಪಾಕ್ರ್ಸ್ ಆಫ್ ಇಂಡಿಯಾ (ಎಸ್‍ಟಿಪಿಐ) ಪ್ರಧಾನ ನಿರ್ದೇಶಕ ಡಾ.ಓಂಕಾರ್ ರೈ ಮಾತ ನಾಡಿ, ಎಸ್‍ಟಿಪಿಐ ಸ್ವತಃ ತಂತ್ರಜ್ಞಾನ ಹಾಗೂ ಸಾಫ್ಟ್‍ವೇರ್ ಅಭಿವೃದ್ಧಿಪಡಿಸುವ ಕಾರ್ಯ ಮಾಡುವುದಿಲ್ಲ. ಬದಲಾಗಿ ದೇಶದ ನವೋದ್ಯಮಿಗಳಿಗೆ ಸಾಫ್ಟ್‍ವೇರ್ ಅಭಿವೃದ್ಧಿಗೆ ಪೂರಕ ಮೂಲಸೌಲಭ್ಯ ನೀಡಲಿದೆ. ಜೊತೆಗೆ ಅವರ ಸಾಫ್ಟ್‍ವೇರ್‍ಗಳ ರಫ್ತಿಗೆ ಉತ್ತೇಜನ ನೀಡಲಿದೆ ಎಂದರು.

ಸಾಫ್ಟ್‍ವೇರ್ ರಫ್ತು ಪ್ರಮಾಣ ಹೆಚ್ಚಿಸಲು ಎಸ್‍ಟಿಪಿಐ ಹಲವು ಕ್ರಮಗಳನ್ನು ತೆಗೆದು ಕೊಂಡಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ (ಐಟಿ) ವಿಸ್ತರಣೆ ಮತ್ತು ಸೈಬರ್ ಸುರಕ್ಷತೆ ಬಗ್ಗೆ ಇನ್ನಷ್ಟು ಅಧ್ಯಯನಕ್ಕೆ ಎಸ್‍ಟಿಪಿಐ ದೇಶದಾದ್ಯಂತ 28 ಉತ್ಕøಷ್ಟ ಕೇಂದ್ರಗಳನ್ನು (ಸೆಂಟರ್ ಆಫ್ ಎಕ್ಸಲೆನ್ಸ್) ತೆರೆಯಲು ಯೋಜನೆ ರೂಪಿಸಿದೆ. 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿಸ್ತರಣೆಗೆ ವಿಫುಲ ಅವಕಾಶ ಗಳಿವೆ. ಸಣ್ಣ ನಗರಗಳಲ್ಲಿನ ಸಂಪನ್ಮೂಲ ಗಳನ್ನು ಬಳಸಿಕೊಳ್ಳುವುದು ನಮ್ಮ ಉದ್ದೇಶ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, ಈ ಕ್ಷೇತ್ರದಲ್ಲಿ 2 ಸಾವಿರ ನವೋದ್ಯಮಿ ಗಳಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ. `ಸೈಬರ್ ಭದ್ರತೆ’ ಐಟಿ ಕ್ಷೇತ್ರ ಎದುರಿಸುತ್ತಿರುವ ಪ್ರಮುಖ ಸವಾಲು. ಸೈಬರ್ ಸುರಕ್ಷತೆ ಖಾತರಿ ಪಡಿಸಲು ಕೇಂದ್ರ ಸರ್ಕಾರ ಹಲವು ಕ್ರಮ ಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ಬೆಂಗಳೂರಿನ ಎಸ್‍ಟಿಪಿಐ ನಿರ್ದೇಶಕ ಶೈಲೇಂದ್ರ ಕುಮಾರ್ ತ್ಯಾಗಿ ಮಾತನಾಡಿ, 2018-19ರ ಸಾಲಿನಲ್ಲಿ ದೇಶದಿಂದ 4.16 ಲಕ್ಷ ಕೋಟಿ ಮೌಲ್ಯದ ಸಾಫ್ಟ್‍ವೇರ್ ರಫ್ತು ಮಾಡಲಾಗಿದೆ. ಇದರಲ್ಲಿ ಕರ್ನಾಟಕ ಸಾಫ್ಟ್‍ವೇರ್ ವಲಯದ ಶೇ.11ರಷ್ಟು ಕೊಡುಗೆ ಒಳಗೊಂಡಿದೆ. ಈ ಪೈಕಿ 4,200 ಕೋಟಿ ಮೈಸೂರು ಸಾಫ್ಟ್‍ವೇರ್ ವಲಯದಿಂದ ರಫ್ತು ಆಗಿದೆ. ದೇಶದಲ್ಲಿ ಕರ್ನಾಟಕ ಐಟಿ ರಫ್ತಿನಲ್ಲಿ ಮುಂಚೂಣಿ ಯಲ್ಲಿದೆ. ರಾಜ್ಯದಲ್ಲಿ 6.1 ಲಕ್ಷ ಮಂದಿ ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಂಡಿ ದ್ದಾರೆ. ಎಸ್‍ಟಿಪಿಐ ದೇಶದಲ್ಲಿ ಐಓಟಿ ತಾಣಗಳ ನಿರ್ಮಾಣಕ್ಕೆ ಹೆಚ್ಚು ಪೂರಕ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದರು.

ಸಿಐಐ ಮೈಸೂರು ಅಧ್ಯಕ್ಷ ಭಾಸ್ಕರ್ ಕಳಲೆ ಮಾತನಾಡಿ, ಮೈಸೂರನ್ನು ಸೈಬರ್ ಭದ್ರತೆಯ ಕೇಂದ್ರವಾಗಿ ರೂಪಿಸಲು ಸಿಐಐ ಹೆಚ್ಚು ಆಸಕ್ತಿ ಹೊಂದಿದೆ. ದೇಶದ ಒಟ್ಟು ಆರ್ಥಿಕತೆಯಲ್ಲಿ ಡಿಜಿಟಲ್ ಆರ್ಥಿ ಕತೆಯ ಪಾಲು ಶೇ.14ರಿಂದ 15ರಷ್ಟು ಇದೆ. 2024ರ ವೇಳೆಗೆ ಇದರ ಪಾಲು ಶೇ.20ರಿಂದ 22ರಷ್ಟು ಹೆಚ್ಚುವ ನಿರೀಕ್ಷೆ ಯಿದೆ. ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಇಂಟರ್‍ನೆಟ್ ಬಳಕೆಯನ್ನು ಹೆಚ್ಚು ಮಾಡುತ್ತಿದೆ. ಗ್ರಾಹಕರನ್ನು ಸೆಳೆಯಲು ಕಾಪೆರ್Çರೇಟ್ ವಲಯದಲ್ಲಿ ಸ್ಪರ್ಧೆ ಇದೆ. ಇದರ ನಡುವೆ ಸೈಬರ್ ಸುರಕ್ಷತೆ ಮತ್ತು ಇಂಟರ್‍ನೆಟ್ ಆಫ್ ಥಿಂಗ್ಸ್ (ಐಒಟಿ) ತಂತ್ರಜ್ಞಾನಕ್ಕೆ ಬೇಡಿಕೆ ಹೆಚ್ಚಿದೆ. ಮೈಸೂ ರಿನಲ್ಲಿ ಐಟಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಎಸ್‍ಟಿಪಿಐ ವತಿಯಿಂದ ಸಾಫ್ಟ್‍ವೇರ್ ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಐ ಮೈಸೂರು ಐಟಿ ಪ್ಯಾನೆಲ್ ಸಂಚಾಲಕ ಕೆ.ಎಸ್.ಶಂಕರ್ ಪ್ರಸಾದ್, ಮಾನವನ ಚಟುವಟಿಕೆಗಳು ಇಂದು ಯಾಂತ್ರಿಕ ವ್ಯವಸ್ಥೆ ಯನ್ನೇ ಹೆಚ್ಚು ಅವಲಂಬಿಸಿದ್ದು, ಈ ವ್ಯವಸ್ಥೆ ನಿಯಂತ್ರಿಸುವ ಮಹತ್ವದ ಕಾರ್ಯ ವನ್ನು ಅಂತರ್ಜಾಲ ಸಂಪರ್ಕ ಹೊಂದಿದ ಸಾಧನ-ಸಲಕರಣೆಗಳು ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ. ಇಂಡಸ್ಟ್ರಿ ವ್ಯವಸ್ಥೆಯೊಳಗೂ ಅಂತರ್ಜಾಲ ಹಾಗೂ ಅಂತರ್ಜಾಲ ಸಂಪರ್ಕಿತ ಸಾಧನ-ಸಲಕ ರಣೆ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ಸೈಬರ್ ಭದ್ರತೆಗೆ ಒತ್ತು ನೀಡುವುದು ಅತ್ಯಂತ ಅಗತ್ಯವಾಗಿದ್ದು, ಸೈಬರ್ ಭದ್ರತೆ ಕಾಯ್ದುಕೊಳ್ಳುವ ಹಿನ್ನೆಲೆ ಯಲ್ಲಿ ಮೈಸೂರನ್ನು ಸೈಬರ್ ಭದ್ರತೆಯ ತಾಣವಾಗಿಸಲು ಅವಕಾಶಗಳಿವೆ ಎಂದು ತಿಳಿಸಿದರು. ಐಟಿ/ಐಟಿಇಎಸ್ ಪ್ಯಾನೆಲ್‍ನ ಅಹ ಸಂಚಾಲಕ ರಾಘವಲಿಂಗೇಗೌಡ ಮತ್ತಿತರರು ಹಾಜರಿದ್ದರು.

Translate »