ಧಾರ್ಮಿಕ ಅಲ್ಪಸಂಖ್ಯಾತರ ಹೆಸರಿನಲ್ಲಿ ನಿರಾಶ್ರಿತರಿಗೆ ಪೌರತ್ವ: ಕೇಂದ್ರದ ನಿಲುವಿಗೆ ಸುಪ್ರೀಂ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಆಕ್ಷೇಪ
ಮೈಸೂರು

ಧಾರ್ಮಿಕ ಅಲ್ಪಸಂಖ್ಯಾತರ ಹೆಸರಿನಲ್ಲಿ ನಿರಾಶ್ರಿತರಿಗೆ ಪೌರತ್ವ: ಕೇಂದ್ರದ ನಿಲುವಿಗೆ ಸುಪ್ರೀಂ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಆಕ್ಷೇಪ

January 5, 2020

ಮೈಸೂರು,ಜ.4(ಎಸ್‍ಪಿಎನ್)- `ಧಾರ್ಮಿಕ ದೌರ್ಜನ್ಯಕ್ಕೊಳಗಾದ ಅಲ್ಪ ಸಂಖ್ಯಾತ’ರ ಹೆಸರಿನಲ್ಲಿ ಹೊರ ದೇಶದ ನಿರಾಶ್ರಿತರಿಗೆ ಪೌರತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬೆಳ್ಳೂರು ನಾರಾಯಣ ಸ್ವಾಮಿ ಶ್ರೀಕೃಷ್ಣ ಅಭಿಪ್ರಾಯಪಟ್ಟರು.

ಮೈಸೂರು ಜೆಎಲ್‍ಬಿ ರಸ್ತೆಯ ಐಡಿ ಯಲ್ ಜಾವಾ ರೋಟರಿ ಸಭಾಂಗಣದಲ್ಲಿ ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟ (ಪಿಯುಸಿಎಲ್)ದ ಮೈಸೂರು ವಿಭಾಗದ ವತಿಯಿಂದ ಆಯೋಜಿಸಿದ್ದ `ಮಾನವ ಹಕ್ಕು ಬ್ರಿಟಿಷರ ಕೊಡುಗೆಯೇ?’ ವಿಷಯ ಕುರಿತು ಮಾತನಾಡಿದರು.

ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿ ರುವ `ಪೌರತ್ವ ತಿದ್ದುಪಡಿ ಕಾಯ್ದೆ-2019’ರ ಕುರಿತು ಮುಸ್ಲಿಂ ಮುಖಂಡ ಪ್ರೊ.ಶಬ್ಬೀರ್ ಮುಸ್ತಾಫ ಅವರು ಕೇಳಿದ ಪ್ರಶ್ನೆಗೆ ಪ್ರತಿ ಕ್ರಿಯೆ ನೀಡಿದ ನ್ಯಾ.ಬಿ.ಎನ್.ಶ್ರೀಕೃಷ್ಣ, ಕೇಂದ್ರ ಸರ್ಕಾರ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾ ದೇಶದಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳ ಗಾದ ಅಲ್ಪಸಂಖ್ಯಾತರಿಗೆ (ಮುಸ್ಲಿಮರನ್ನು ಹೊರತುಪಡಿಸಿ) ಮಾತ್ರ ತ್ವರಿತಗತಿಯಲ್ಲಿ ಪೌರತ್ವ ನೀಡುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿರುವುದು ಸರಿಯಾದ ಮಾರ್ಗವೇ? ಎಂಬುದನ್ನು ಈಗಾಗಲೇ ಸುಪ್ರೀಂಕೋರ್ಟ್‍ನಲ್ಲಿ ಕೆಲವರು ಪ್ರಶ್ನಿ ಸಿದ್ದು, ತೀರ್ಪು ಏನಾಗಲಿದೆ ಎಂಬು ದನ್ನು ಕಾದು ನೋಡಬೇಕು ಎಂದರು.

ಈ ಮೂರು ದೇಶಗಳಿಂದ ಬಂದಿರುವ ನಿರಾಶ್ರಿತ ಮುಸ್ಲಿಂರನ್ನು ಹೊರತುಪಡಿಸಿ ಉಳಿ ದವರಿಗೆ ತ್ವರಿತಗತಿಯಲ್ಲಿ ಪೌರತ್ವ ನೀಡುವ ಬಗ್ಗೆ ಸಿಎಎ ತಿದ್ದುಪಡಿ ಕಾಯ್ದೆಯಲ್ಲಿ ಪ್ರಸ್ತಾ ಪಿಸಲಾಗಿದೆ. ಈ ದೇಶದ ಪೌರತ್ವ ಪಡೆಯ ಲಾಗದಿದ್ದರೆ, ನಿರಾಶ್ರಿತರಾಗಿರುವ ಮುಸ್ಲಿ ಮರು ಎಲ್ಲಿಗೆ ಹೋಗಬೇಕು ಎಂಬುದು ನಮ್ಮ ಮುಂದಿರುವ ಪ್ರಶ್ನೆ ಎಂದರು.

ಬ್ರಿಟಿಷರ ಕೊಡುಗೆಯಲ್ಲ: ನಮ್ಮ ದೇಶದ ಸಂವಿಧಾನದಲ್ಲಿ ಅಡಕವಾಗಿರುವ ಮೂಲ ಭೂತ ಹಕ್ಕುಗಳು ಬ್ರಿಟಿಷರ ಕೊಡುಗೆಯಲ್ಲ. ಬದಲಾಗಿ, ಬ್ರಿಟಿಷರು ಭಾರತೀಯರ ಮಾನವ ಹಕ್ಕುಗಳನ್ನು ದಮನ ಮಾಡಿರು ವುದು ಇತಿಹಾಸ ಘಟನೆಗಳಿಂದ ತಿಳಿಯ ಬಹುದು. ವ್ಯಾಪಾರ ದೃಷ್ಟಿಯಿಂದ ಭಾರತಕ್ಕೆ ಬಂದ ಬ್ರಿಟಿಷರು, ಇಲ್ಲಿನ ಸಂಪತ್ತನ್ನು ಲೂಟಿ ಮಾಡಿ ತಮ್ಮ ದೇಶವನ್ನು ಅಭಿವೃದ್ಧಿಪಡಿಸಲು ಬಳಸಿಕೊಂಡಿರುವುದು ಸ್ಪಷ್ಟ ಎಂದರು.

ಬ್ರಿಟಿಷರ ಸಾಮ್ರಾಜ್ಯಶಾಹಿ ಮನೋ ಭಾವದಿಂದ ಭಾರತೀಯರ ಮೇಲೆ ದೌರ್ಜನ್ಯ ಎಸಗಿ, ಸ್ಥಳೀಯರ ಮೂಲಭೂತ ಹಕ್ಕು ಕಿತ್ತುಕೊಂಡು ಪೊಲೀಸರ ಮೂಲಕ ದಮನ ಮಾಡಿದ್ದಾರೆ. ಆದರೆ, ಭಾರತೀಯ ಪರಂಪರೆ ಬಿಂಬಿಸುವ ಮಹಾಭಾರತ, ರಾಮಾಯಣ, ವೇದೋಪನಿಷತ್ತು, ಕೌಟಿ ಲ್ಯನ ಅರ್ಥಶಾಸ್ತ್ರದಲ್ಲಿ ಮೂಲಭೂತ ಹಕ್ಕು ಗಳ ಉಲ್ಲೇಖವಿದೆ ಎಂದು ಉದಾಹರಣೆ ಸಮೇತ ವಿವರಿಸಿದರು.

ಕೌಟಿಲ್ಯನ ಅರ್ಥಶಾಸ್ತ್ರದ ಪ್ರಕಾರ ರಾಜ ಅಥವಾ ರಾಜ್ಯಾಂಗವು ಮಾನವ ತನ್ನಿಷ್ಟ ದಂತೆ ಬದುಕಲು ಅವಕಾಶ ಕಲ್ಪಿಸುವ ಉಲ್ಲೇಖವಿದೆ. ಕುರಾನ್ ಗ್ರಂಥದಲ್ಲೂ ನೈಸರ್ಗಿಕ ನ್ಯಾಯ ಕಲ್ಪಿಸುವ ಪರಿಕಲ್ಪನೆ ಯಿದೆ. ಬುದ್ಧನ ತ್ರಿಪಿಟಕಗಳಲ್ಲೂ ಈ ಬಗ್ಗೆ ಉಲ್ಲೇಖವಿದೆ. ಹೀಗೆ ಎಲ್ಲಾ ಗ್ರಂಥಗಳ ಒಟ್ಟು ಮೌಲ್ಯವಾಗಿ ನಮ್ಮ ದೇಶದ ಸಂವಿಧಾನ ದಲ್ಲಿ ಅಡಕವಾಗಿದ್ದು, ಈ ಗ್ರಂಥಗಳ ಪ್ರಕಾರ ಹೇಳುವುದಾದರೆ, ಮಾನವನಿಗೆ ಕಲ್ಪಿಸುವ ಮೂಲಭೂತ ಹಕ್ಕುಗಳು ಬ್ರಿಟಿಷರ ಕೊಡುಗೆ ಯಲ್ಲ. ಬದಲಾಗಿ, ಭಾರತೀಯ ಪರಂ ಪರೆಯಿಂದ ಬಂದಿತ್ತು ಎಂದು ಸ್ಪಷ್ಟಪಡಿಸಿ ದರು. ವೇದಿಕೆಯಲ್ಲಿ ಮೈಸೂರು ವಿವಿ ಮಾನಸಗಂಗೋತ್ರಿ ಕಾನೂನು ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಕೆ.ಎನ್.ರಾಜಾ ಅಧ್ಯಕ್ಷತೆ ವಹಿಸಿದ್ದರು. ಪಿಯುಸಿಎಲ್‍ನ ಪೆÇ್ರ. ಪಂಡಿತಾರಾಧ್ಯ, ನಾ. ದಿವಾಕರ್ ಭಾಗವಹಿ ಸಿದ್ದರು. ನಂತರ ನಡೆದ ಸಂವಾದದಲ್ಲಿ ಪೆÇ್ರ. ಲಕ್ಷ್ಮೀನಾರಾಯಣ, ಪೆÇ್ರ. ಶಬ್ಬೀರ್ ಮುಸ್ತಫಾ, ಸ.ರಾ.ಸುದರ್ಶನ, ಕೆ. ಬಸವ ರಾಜು ಮತ್ತಿತರರು ಪಾಲ್ಗೊಂಡಿದ್ದರು.

Translate »