ಮನಸೂರೆಗೊಂಡ ಶಾಸ್ತ್ರೀಯ ನೃತ್ಯೋತ್ಸವ
ಮೈಸೂರು

ಮನಸೂರೆಗೊಂಡ ಶಾಸ್ತ್ರೀಯ ನೃತ್ಯೋತ್ಸವ

January 29, 2019

ಮೈಸೂರು: ನಗರದ ಗಾನಭಾರತಿ ಸಭಾಂಗಣದಲ್ಲಿ ಮೈಸೂರು ಬಿ.ನಾಗ ರಾಜ್ ನೇತೃತ್ವದಲ್ಲಿ ಇತ್ತೀಚೆಗೆ 32ನೇ ಆರ್ಟಿಕ್ಯುಲೇಟ್ ನೃತ್ಯೋತ್ಸವ ನಡೆಯಿತು. ಅಂದು ಸಂಜೆ ಎರಡು ದ್ವಂದ್ವ ಹಾಗೂ ಎರಡು ಏಕವ್ಯಕ್ತಿ ಪ್ರಕಾರದಲ್ಲಿ ಭರತನಾಟ್ಯ ಹಾಗೂ ಒಡಿಸ್ಸಿ ಶಾಸ್ತ್ರೀಯ ನೃತ್ಯ ಪ್ರದ ರ್ಶನ ಪ್ರದರ್ಶಿತಗೊಂಡವು.

ಮೊದಲಿಗೆ ವಿದ್ಯಾ ವಿ.ತಾಯೂರ್‍ರವ ರಿಂದ ಶೃಂಗಾರ ರಸದಲ್ಲಿ ದೇವಿ ಪಾರ್ವತಿಯ ನೃತ್ಯ ನಡೆಯಿತು. ರಾಮಾಯಣದ ‘ರಾಮನಾಟಕಮ್’ ಎಂಬ ನೃತ್ಯಾಭಿನಯ ದೊಂದಿಗೆ ತಮ್ಮ ಪ್ರದರ್ಶನವನ್ನು ಪೂರ್ಣಗೊಳಿಸಿದರು. ನಂತರ ಹಿರಿಯ ಕಲಾವಿದೆ ಕಾಶ್ಮೀರ ತ್ರಿವೇದಿಯವರು ತಮ್ಮ ಶಿಷ್ಯೆ ಸ್ವಾತಿ ಬದ್ಲೆಯವರೊಂದಿಗೆ ಭರತ ನಾಟ್ಯಮ್ ಶೈಲಿಯಲ್ಲಿ ನಾಲ್ಕು ಕೃತಿಗಳನ್ನು ಪ್ರಸ್ತುತಪಡಿಸಿದರು. ಸಂಸ್ಕøತದಲ್ಲಿ ವಿಘ್ನಕಾ ರಕ ವಿನಾಯಕನ ಸ್ತುತಿಯೊಂದಿಗೆ ತಮ್ಮ ನೃತ್ಯವನ್ನು ಪ್ರಾರಂಭಿಸಿದ ಕಾಶ್ಮೀರ ತ್ರಿವೇದಿ ಯವರು, ನಂತರ ‘ಮೇಳಪ್ರಾಪ್ತಿ’ಯನ್ನು (ಶುದ್ಧನೃತ್ಯ) ಪ್ರದರ್ಶಿಸಿದರು. ಈ ನೃತ್ಯವು ಸ್ವರ, ಲಯ, ತಾಳಗಳಿಂದ ತುಂಬಿ ತುಳು ಕುತ್ತಿದ್ದವು. ನಂತರ ಆದಿಶಂಕರಾಚಾರ್ಯರ ‘ಶಿವ ಪಂಚಾಕ್ಷರಿ’ ಸ್ತೋತ್ರದ ನೃತ್ಯಾಭಿನಯ ನೀಡಿದರು. ಇದಾದ ಮೇಲೆ ‘ಕ್ಷೀರಸಾಗರ ಶಯನ’ ಕೃತಿಯೊಂದಿಗೆ ತಮ್ಮ ನೃತ್ಯವನ್ನು ಸಂಪೂರ್ಣಗೊಳಿಸಿದರು.

ತದನಂತರ ಸುರಂಜನ ಎನ್‍ಡೋವ್ ರವರು ಒಡಿಸ್ಸಿ ಶೈಲಿಯಲ್ಲಿ ‘ಮಂಗಳಚರನ್’ ಎಂಬ ನೃತ್ಯಾಭಿನಯ ಪ್ರದರ್ಶಿಸಿದರು. ಚರುಕ್ಷಿ ರಾಗ ಹಾಗೂ ಏಕತಾಳದಲ್ಲಿ ಮೂಡಿಬಂದ ಪಲ್ಲವಿಯೊಂದಿಗೆ ತಮ್ಮ ನೃತ್ಯವನ್ನು ಸಂಪೂರ್ಣಗೊಳಿಸಿದರು.

ಮುಂದಿನ ಪ್ರಸ್ತುತಿಯಲ್ಲಿ ಶೃತಿ ಅಭಿ ಷೇಕ್ ಹಾಗೂ ದೀಪಿಕಾ ಪೋತ್‍ದಾರ್ ರವರು ಭರತನಾಟ್ಯದಲ್ಲಿ ದ್ವಂದ್ವ ನೃತ್ಯ ಪ್ರದರ್ಶಿ ಸಿದರು. ಮೂಲಧರ ಚಕ್ರ ಶ್ರೀ ಗಣಪತಿಯ ಸ್ತುತಿಯೊಂದಿಗೆ (ಸಂಸ್ಕøತ) ತಮ್ಮ ನೃತ್ಯ ಪ್ರಾರಂಭಿಸಿದ ಇವರು, ಮುಂದುವರೆದ ದ್ವಿತೀಯ ಭಾಗದಲ್ಲಿ ತಮಿಳಿನಲ್ಲಿ ಪೂಜ್ಯ ಶಿವನನ್ನು ಅಣಕಿಸುವ ಹಾಗೂ ಪ್ರಾರ್ಥಿಸುವ ಭಂಗಿಯಲ್ಲಿ ನೃತ್ಯಾಭಿನಯ ನೀಡಿದರು. ಆ ನಂತರ ವಿದ್ವಾನ್ ಡಾ.ಬಾಲ ಮುರುಳಿಕೃಷ್ಣರವರ ಕೃತಿಯನ್ನು ‘ಕದನ ಕುತೂಹಲ ರಾಗ’ ಹಾಗೂ ಆದಿ ತಿಲ್ಲಾನ ತಾಳ ದಲ್ಲಿ ಅಭಿನಯಿಸಿದರು. ಸತತ 3 ಗಂಟೆಗಳ ಕಾಲ ಪ್ರದರ್ಶನಗೊಂಡ ನೃತ್ಯೋತ್ಸವದಲ್ಲಿ ಎಲ್ಲ ನೃತ್ಯ ಕಲಾವಿದರು ತಮ್ಮ ಅದ್ಭುತ ವಾದ ಪ್ರತಿಭೆಯನ್ನು ಅಭೂತಪೂರ್ವ ರೀತಿಯಲ್ಲಿ ಪ್ರಸ್ತುತಪಡಿಸಿ, ಪ್ರೇಕ್ಷಕರಿಂದ ಮೆಚ್ಚುಗೆ ಹಾಗೂ ಅಭಿನಂದನೆ ಗಳಿಸಿದರು.

Translate »