ಡಾ.ಧರಣಿದೇವಿ ಮಾಲಗತ್ತಿಯವರು ಎರಡು ಕೃತಿಗಳ ಬಿಡುಗಡೆ
ಮೈಸೂರು

ಡಾ.ಧರಣಿದೇವಿ ಮಾಲಗತ್ತಿಯವರು ಎರಡು ಕೃತಿಗಳ ಬಿಡುಗಡೆ

January 29, 2019

ಮೈಸೂರು: ಐಪಿಎಸ್ ಅಧಿಕಾರಿ ಹಾಗೂ ಕವಯತ್ರಿ ಡಾ.ಧರಣಿ ದೇವಿ ಮಾಲಗತ್ತಿ ಅವರ `ಧರಣಿ’ ಚುಟುಕು ಕವಿತೆಗಳು ಮತ್ತು `ಭಾಗವತ ಭಾವಗೀತೆ’ ಎರಡು ಕೃತಿಗಳನ್ನು ಸೋಮವಾರ ದಕ್ಷಿಣ ವಲಯ ಐಜಿಪಿ ಕೆ.ವಿ.ಶರತ್‍ಚಂದ್ರ ಲೋಕಾರ್ಪಣೆ ಮಾಡಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿ ಯರ್ಸ್ ಸಭಾಂಗಣದಲ್ಲಿ ವೈದ್ಯ ವಾರ್ತಾ ಪ್ರಕಾಶನ, ಬೆಂಗಳೂರಿನ ಶ್ರೀಮಾತಾ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಎರಡು ಕೃತಿಗಳನ್ನು ಬಿಡು ಗಡೆ ಮಾಡಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಒತ್ತಡದ ಕೆಲಸದ ಮಧ್ಯೆಯೂ ಸಾಹಿತ್ಯದ ಆಸಕ್ತಿಯನ್ನು ಡಾ.ಧರಣಿದೇವಿ ಮಾಲಗತ್ತಿ ಉಳಿಸಿಕೊಂಡಿ ದ್ದಾರೆ. ಡಾ.ಧರಣಿದೇವಿ ಅವರಿಗೆ ಸಮಾಜ ಮತ್ತು ಜನರ ಬಗ್ಗೆ ಕಾಳಜಿ ಇದೆ. ಅವರು ಸೃಜನಶೀಲ ವ್ಯಕ್ತಿತ್ವವುಳ್ಳವರಾಗಿದ್ದಾರೆ. ಚುಟುಕು ಕವಿತೆಗಳು, ಭಾಗವತ ಭಾವ ಗೀತೆ ಪುಸ್ತಕಗಳನ್ನು ಓದಿದ್ದೇನೆ. ಎರಡ ರಲ್ಲೂ ಬೇರೆ ಬೇರೆ ವಿಷಯಗಳಿವೆ. ಚುಟುಕು ಬರೆಯುವುದು ಗದ್ಯ ಬರೆದಷ್ಟು ಸುಲಭವಲ್ಲ. ನಾಲ್ಕು ಸಾಲಿನಲ್ಲಿ ಸಾರ ಸಂಗ್ರಹಿಸಿ ಬರೆ ಯುವುದು ಕಷ್ಟ. ಇದಕ್ಕೆ ಶ್ರಮ ಮತ್ತು ಸೃಜನಶೀಲತೆ ಬೇಕಾಗುತ್ತದೆ. ಈ ಕಲೆ ಡಾ.ಧರಣಿದೇವಿ ಮಾಲಗತ್ತಿ ಅವರಿಗೆ ಒಲಿದಿದೆ ಎಂದು ಶ್ಲಾಘಿಸಿದರು.

ದಕ್ಷಿಣ ವಲಯದ 5 ಜಿಲ್ಲೆಗಳ ಜನರು ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜನರ ಸಹಕಾರದಿಂದಾಗಿಯೇ ಕಾನೂನು ಸುವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದೆ. ಆದರೂ ಪೊಲೀಸರನ್ನು ಬೈಯ್ಯುವ ಕೆಲವು ಮಂದಿ ಇದ್ದಾರೆ. ಪೊಲೀಸ್ ಇಲ್ಲದೇ ಅರ್ಧ ದಿನ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಲೋಪ ದೋಷಗಳನ್ನು ಗುರುತಿಸಿ ಹೇಳುವ ಮನ ಸ್ಥಿತಿ ಬೆಳೆಸಿಕೊಳ್ಳÀಬೇಕು. ಆದರೆ ಬೈಯ್ಯು ವುದೇ ಕಾಯಕವಾಗಬಾರದು. ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸಿಸಬೇಕು ಎಂದರು.

ನಿವೃತ್ತ ಪೊಲೀಸ್ ಅಧಿಕಾರಿ ಬಸವ ರಾಜ ಮಾಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ಡಾ.ಧರಣಿದೇವಿ ಮಾಲಗತ್ತಿ ಅವರಿಗೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎ.ಎಸ್.ಸತೀಶ್ ಪುಸ್ತಕ ತಾಂಬೂಲ ಕೊಡುಗೆ ನೀಡಿದರು. ಸಾಹಿತಿ ಡಾ.ಸಿ.ನಾಗಣ್ಣ , ಕವಿ ಡಾ.ಎಚ್. ಎಸ್.ವೆಂಕಟೇಶ್‍ಮೂರ್ತಿ, ಅನ್ವೇಷಣಾ ಸೇವಾ ಟ್ರಸ್ಟ್ ಸ್ಥಾಪಕ ಕಾರ್ಯದರ್ಶಿ ಅಮರ ನಾಥ ರಾಜೇಅರಸ್, ನೃಪತುಂಗ ಚಾರಿ ಟಬಲ್ ಟ್ರಸ್ಟ್ ಸ್ಥಾಪಕ ಧರ್ಮದರ್ಶಿ ಎಸ್.ಎಂ. ಪ್ರಸಾದ್, ಶ್ರೀಮಾತಾ ಪ್ರಕಾಶನದ ಜಿ.ವಿ. ಮೂರ್ತಿ, ವೈದ್ಯವಾರ್ತಾ ಪತ್ರಿಕೆ ಸಂಪಾ ದಕಿ ಅಂಬಾ ಎಂ.ಜಿ.ಆರ್.ಅರಸ್, ವೈದ್ಯ ವಾರ್ತಾ ಪ್ರಕಾಶನದ ಡಾ.ಎಂ.ಜಿ.ಆರ್. ಅರಸ್ ಸ್ವಾಗತಿಸಿ, ಪ್ರೊ.ಅರವಿಂದ ಮಾಲ ಗತ್ತಿ, ಚುಟುಕು ಸಿರಿ ರತ್ನ ಹಾಲಪ್ಪಗೌಡ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಎಂ.ಚಂದ್ರ ಶೇಖರ್, ವಿದ್ವಾಂಸರಾದ ಜಿ.ಎಸ್.ಭಟ್ ಇನ್ನಿತರರು ಪಾಲ್ಗೊಂಡಿದ್ದರು.

Translate »