ಜಾತಿವಾದದ ಕೆಟ್ಟ ಮನಸ್ಸುಗಳು ಶುಚಿಯಾದರಷ್ಟೇ ಸ್ವಚ್ಛ ಭಾರತ ಸಾರ್ಥಕ
ಮೈಸೂರು

ಜಾತಿವಾದದ ಕೆಟ್ಟ ಮನಸ್ಸುಗಳು ಶುಚಿಯಾದರಷ್ಟೇ ಸ್ವಚ್ಛ ಭಾರತ ಸಾರ್ಥಕ

November 5, 2018

ಮೈಸೂರು: ಸ್ವಚ್ಛ ಭಾರತ ಎಂದು ಕೇವಲ ಪರಿಸರ ಶುಚಿಗೊಳಿಸಿ ದರೆ ದೇಶದ ಉದ್ಧಾರ ಸಾಧ್ಯವಿಲ್ಲ. ಜಾತೀ ಯತೆಯ ಕೆಟ್ಟ ಮನಸ್ಸುಗಳೂ ತೊಲಗ ಬೇಕು. ಮನುಷ್ಯನನ್ನು ಮನುಷ್ಯನಂತೆ ಕಾಣುವ ಮನೋಭಾವ ಮೂಡುವಂತಹ ಸ್ವಚ್ಛ ಮನಸ್ಸಿನ ಭಾರತ ನಿರ್ಮಾಣ ಆಗಬೇಕು ಎಂದು ಮಾಜಿ ಸಚಿವರೂ ಆದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಅಭಿಪ್ರಾಯಪಟ್ಟರು.

ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ವಿ.ಶ್ರೀನಿ ವಾಸ ಪ್ರಸಾದ್ ಅಭಿಮಾನಿ ಬಳಗದ ವತಿ ಯಿಂದ ಬಿ.ಬಸವಲಿಂಗಪ್ಪನವರ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ಮಲ್ಕುಂಡಿ ಮಹಾದೇವಸ್ವಾಮಿ ಅವರ `ಬಯಲು ಬಹಿರ್ದೆಸೆ – ಒಂದು ಸಾಮಾಜಿಕ ಅನಿಷ್ಟ’ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಾತೀಯತೆ ಪ್ರತಿಪಾದಿಸುವ ಕೆಟ್ಟ ಮನಸ್ಸು ಗಳು ದೇಶದಲ್ಲಿ ಇನ್ನೂ ಜೀವಂತವಾಗಿವೆ. ಮಾನವನನ್ನು ಮಾನವನಂತೆ ಕಾಣದ ಮಲಿನತೆ ಇಂದಿಗೂ ಇದೆ. ಈ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ ಎನ್ನುವುದು ಕೇವಲ ಪರಿಸರದ ದೃಷ್ಟಕೋನದಲ್ಲಿ ಮಾತ್ರವಲ್ಲದೆ, ಮಾನಸಿಕ ಶುಚಿತಗೊಳಿಸುವ ಸ್ವಚ್ಛ ಭಾರತವೂ ನಿರ್ಮಾಣ ಆಗಬೇಕು. ಡಾ. ಬಿ.ಆರ್.ಅಂಬೇ ಡ್ಕರ್ ಅವರು ಅಸ್ಪøಶ್ಯತೆ ಸರ್ವ ನಾಶ ಮಾಡ ಬೇಕು ಎಂದು ಪ್ರತಿ ಪಾದಿಸಿದ್ದರು. ಅಂಬೇ ಡ್ಕರ್ ಅವರ ಆಲೋ ಚನೆಗಳ ಹಿನ್ನೆಲೆ ಯಲ್ಲಿ ಬಂದ ಬಿ.ಬಸವ ಲಿಂಗಪ್ಪನವರು, ದೇಶ ದಲ್ಲಿ ಮೊಟ್ಟ ಮೊದಲಿಗೆ ತಲೆ ಮೇಲೆ ಮಲ ಹೊರುವ ಪದ್ಧತಿಗೆ ನಿಷೇಧ ಹೇರುವ ಕಾಯ್ದೆ ಜಾರಿಗೊಳಿಸಿದರು. ಬಸವಲಿಂಗಪ್ಪ ನವರ ಚಿಂತನೆಗಳು ದಲಿತರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿದವು ಎಂದು ಸ್ಮರಿಸಿದರು.
ಬಿ.ಬಸವಲಿಂಗಪ್ಪ ಅವರು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರನ್ನು ಆದರ್ಶ ವಾಗಿಸಿಕೊಂಡಿದ್ದವರು. ಸಮಾನತೆ ಕೇವಲ ಮಾತಿನಲ್ಲಿ ಅಲ್ಲ. ಅನುಭವಿಸುವ ಸ್ವಾತಂತ್ರ್ಯ ಬೇಕು ಎಂಬ ಅಂಬೇಡ್ಕರ್ ವಾದದಲ್ಲಿ ಬಸವ ಲಿಂಗಪ್ಪ ನಂಬಿಕೆ ಇಟ್ಟಿದ್ದರು. ಅಂಬೇಡ್ಕರ್ ಅವರ ಚಿಂತನೆಗಳನ್ನು ಅಕ್ಷರಶಃ ಪಾಲಿಸುತ್ತಿದ್ದರು ಎಂದು ನೆನಪಿಸಿಕೊಂಡರು. ಆದರೆ, ದೇಶದಲ್ಲಿ ಸಮಾನತೆ ಎಂಬುದು ಇಂದಿಗೂ ಕೇವಲ ಬಾಯಿ ಮಾತಿನಲ್ಲಿದೆ ಎಂದು ವಿಷಾದಿಸಿದರು.

ಪೌರಕಾರ್ಮಿಕರು ಹೆಸರು ಕೊಟ್ಟರು: ಶುಚಿತ್ವದ ಕೆಲಸ ಮಾಡುವ ಪೌರಕಾರ್ಮಿ ಕರನ್ನು ಬೇರೆ ಬೇರೆ ಹೆಸರುಗಳಿಂದ ಕರೆಯ ಲಾಗುತ್ತಿತ್ತು. ಆದರೆ ಬಸವಲಿಂಗಪ್ಪ ಅವರು ಪೌರಕಾರ್ಮಿಕರು ಎಂದು ಕರೆದು ಅದನ್ನು ಚಾಲ್ತಿಗೆ ತಂದರು. ಅಂದು ದಲಿತರ ಮೇಲೆ ನಿತ್ಯ ದೌರ್ಜನ್ಯ ನಡೆಯುತ್ತಿದ್ದವು. ಇವು ಗಳಿಗೆ ಅಂಜದ ಬಸವಲಿಂಗಪ್ಪನವರು `ಕ್ರಾಂತಿ ಶುರುವಾಗಿದೆ ಎದುರಿಸಿ’ ಎಂದು ಪ್ರೇರಣೆ ನೀಡಿದ್ದರು. ಅವರನ್ನು ಅಂದು ಮಂತ್ರಿ ಮಂಡಲದಿಂದ ಕೈಬಿಟ್ಟಾಗ ಚುನಾವಣೆ ಯಲ್ಲಿ ದಲಿತರ ಆಕ್ರೋಶ ವ್ಯಕ್ತವಾಯಿತು. ಆಗ ಡಿ.ದೇವರಾಜ ಅರಸು ತತ್ತರಿಸಿ ಹೋದ ರಲ್ಲದೆ, ಬಸವಲಿಂಗಪ್ಪ ಅವರನ್ನು ಮತ್ತೆ ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿ ಕೊಳ್ಳಲಾಯಿತು ಎಂದು ಹಳೆಯ ಘಟನೆ ಗಳನ್ನು ವಿವರಿಸಿದರು.

ದಲಿತ ಸಮುದಾಯ ಆಲೋಚನೆ ಮಾಡುವ ಶಕ್ತಿ ಹೆಚ್ಚಿಸಿಕೊಳ್ಳಬೇಕಿದೆ. ಆ ಮೂಲಕ ನಮ್ಮ ಜವಾಬ್ದಾರಿ ಅರಿಯಬೇಕಿದೆ. ಎಲ್ಲಾ ಸನ್ನಿ ವೇಶಗಳಲ್ಲೂ ರಾಜಕಾರಣದ ಹಿನ್ನೆಲೆಯಲ್ಲಿ ನಡೆದುಕೊಳ್ಳಬಾರದು. ನಮ್ಮಲ್ಲಿ ಸಮಾಜದ ಉನ್ನತ ಪರಿವರ್ತನೆಗೆ ಎಲ್ಲಾ ಕಾನೂನುಗಳಿ ದ್ದರೂ ಅನುಷ್ಠಾನದ ಕೊರತೆ ಯಿಂದ ಯಾವುದೂ ಸಾಕಾರಗೊಳ್ಳುತ್ತಿಲ್ಲ. ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಸ್ಥಾನ ಅಲಂಕರಿಸಿದವರು ಎಂತಹ ಬದಲಾವಣೆ ತರುವ ಅವಕಾಶ ಹೊಂದಿರುತ್ತಾರೆ. ಆದರೆ ಅದನ್ನು ಅವರು ಮಾಡುವುದಿಲ್ಲ. ಆಯೋ ಗದ ಬಗ್ಗೆ ಅರಿಯದವರನ್ನು ಅಲ್ಲಿಗೆ ತಂದು ಕೂರಿಸಿದರೆ ಏನು ತಾನೇ ಪ್ರಯೋ ಜನ ಎಂದು ಪ್ರಶ್ನಿಸಿದ ಅವರು, ಆಯೋಗ ಗಳನ್ನು ಒಂದು ರೀತಿಯಲ್ಲಿ ರಾಜಕೀಯ ಪುನರ್ ವಸತಿ ಕೇಂದ್ರ ಮಾಡುವುದು ಸರಿಯಲ್ಲ ಎಂದು ನುಡಿದರು.
ಹಿರಿಯ ದಲಿತ ಸಾಹಿತಿ ಡಾ.ಸಿದ್ದಲಿಂಗಯ್ಯ ಕೃತಿ ಬಿಡುಗಡೆ ಮಾಡಿದರು. ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಮಾಜಿ ಸಚಿವ ಅಡ ಗೂರು ಹೆಚ್.ವಿಶ್ವನಾಥ್, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇ ಶಕ ಡಾ.ನೀಲಗಿರಿ ತಳವಾರ್, ವಿ.ಶ್ರೀನಿ ವಾಸ ಪ್ರಸಾದ್ ಅಭಿಮಾನಿ ಬಳಗದ ಅಧ್ಯಕ್ಷ ಪಿ.ನಂದಕುಮಾರ್ ಮತ್ತಿತರರು ಹಾಜರಿದ್ದರು.

Translate »