ಮಡಿಕೇರಿಯಲ್ಲಿ ಬಿವಿಬಿ ಕ್ರಾಫ್ಟ್ ಮೇಳಕ್ಕೆ ತೆರೆ
ಕೊಡಗು

ಮಡಿಕೇರಿಯಲ್ಲಿ ಬಿವಿಬಿ ಕ್ರಾಫ್ಟ್ ಮೇಳಕ್ಕೆ ತೆರೆ

April 3, 2019

ಮಡಿಕೇರಿ: ಮೂರು ದಿನಗಳ ಕಾಲ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವತಿಯಿಂದ ಸ್ಪಿಕ್ ಮೆಕೆ ಆಶ್ರಯದಲ್ಲಿ ಆಯೋಜಿಸಿದ್ದು, ಕ್ರಾಫ್ಟ್ ಮೇಳಕ್ಕೆ ಹಾಡು, ನೃತ್ಯ, ಸಂಗೀತವಾದ್ಯ ಗಳ ಮೆರುಗಿನೊಂದಿಗೆ ತೆರೆ ಬಿದ್ದಿತು. ಇದೇ ಮೊದಲ ಬಾರಿಗೆ ಭಾರತೀಯ ವಿದ್ಯಾ ಭವನ ಕೊಡಗು ವಿದ್ಯಾಲಯದಲ್ಲಿ ಭಾರ ತೀಯ ಕಲಾ ಪರಂಪರೆಗಳನ್ನು ವಿದ್ಯಾ ರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಕ್ರಾಫ್ಟ್ ಮೇಳವನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಜಿಲ್ಲೆಯಾದ್ಯಂತ 800ಕ್ಕೂ ಅಧಿಕ ವಿದ್ಯಾರ್ಥಿಗಳು, ಪೆÇೀಷಕರು ಪಾಲ್ಗೊಂ ಡಿದ್ದರು. ಕ್ರಾಫ್ಟ್ ಮೇಳದ ಕೊನೇ ದಿನ ಶಿಬಿರಾರ್ಥಿಗಳು ತಾವು ಕಲಿತ ಕಲೆಯನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಿದರು. ಪ್ರತೀ ನಿತ್ಯ 3 ಗಂಟೆಯಂತೆ ಮೂರು ದಿನ ಗಳಲ್ಲಿ ಕೇವಲ 9 ಗಂಟೆಗಳ ಕಾಲ ಕಲಿತ ಯಕ್ಷಗಾನ, ಕೂಚುಪುಡಿ ನೃತ್ಯ, ಕಲರಿ ಪಯಟ್, ಕಂಸಾಳೆಯನ್ನು ಶಿಬಿರಾ ರ್ಥಿಗಳು ಪ್ರಬುದ್ಧ ಕಲಾವಿದರಂತೆ ಪ್ರದ ರ್ಶಿಸಿ ಅಪಾರ ಮೆಚ್ಚುಗೆ ಗಳಿಸಿದರು.

ಶ್ರೀನಿವಾಸ್ ಸಾಸ್ತಾನ್ ನಿರ್ದೇಶನದಲ್ಲಿ ಶಿಬಿರಾರ್ಥಿಗಳಿಂದ ಸಮುದ್ರ ಮಥನ ಯಕ್ಷ ಪ್ರಸಂಗ ಮೂಡಿಬಂತು. ಯಕ್ಷಗಾನದ ವೇಷ ಧರಿಸಿದ ಶಿಬಿರಾರ್ಥಿಗಳು ಹಿಮ್ಮೇ ಳಕ್ಕೆ ತಕ್ಕಂತೆ ವೇದಿಕೆಯಲ್ಲಿ ಅಬ್ಬರಿಸಿ ಬೊಬ್ಬಿರಿದರು. ಸಭಿಕರ ಮಧ್ಯೆಯೂ ಯಕ್ಷಪಾತ್ರಧಾರಿಗಳು ಆಗಮಿಸಿ ಗಮನ ಸೆಳೆದರು. ಖ್ಯಾತ ಕಲಾವಿದೆ ವೈಜಯಂತಿ ಕಾಶಿ ಮತ್ತು ಪ್ರತೀಕ್ಷಾ ಕಾಶಿ ನಿರ್ದೇಶನ ದಲ್ಲಿ ಕೂಚುಪುಡಿ ನೃತ್ಯ ಕಲಿತಿದ್ದ ವಿದ್ಯಾ ರ್ಥಿಗಳು ತಾವು ಕಲಿತ ನೃತ್ಯವನ್ನು ಮನ ಮೋಹಕವಾಗಿ ಪ್ರದರ್ಶಿಸಿ ಮೆಚ್ಚುಗೆ ಗಳಿಸಿ ದರು. ಮೈಸೂರಿನ ಹಿರಿಯ ಕಂಸಾಳೆ ಕಲಾವಿದ ರೇವಣ್ಣ ಮಾರ್ಗದರ್ಶನದಲ್ಲಿ ಜಾನಪದ ನೃತ್ಯಪ್ರಕಾರ ಕಂಸಾಳೆಯನ್ನು ಅಭ್ಯಸಿಸಿದ್ದ 80ಕ್ಕೂ ಅಧಿಕ ವಿದ್ಯಾರ್ಥಿ ಗಳು ‘ಚೆಲ್ಲಿದರು ಮಲ್ಲಿಗೆಯಾ’ ಎಂಬ ಜಾನಪದ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ನರ್ತಿಸಿ ತಾವೂ ಕಂಸಾಳೆ ಕಲೆಯಲ್ಲಿ ಪ್ರಬು ದ್ಧರು ಎಂದು ತೋರುವ ಭರವಸೆ ಮೂಡಿ ಸಿದರು. ಕೇರಳದ ಕಡಲತೀರದ ರೋಮಾಂ ಚಕ ಸಮರಕಲೆಯಾದ ಕಲರಿಪಯಟ್‍ನ ಪ್ರಾಥಮಿಕ ಹಂತವನ್ನು ವಲ್ಲಭಟ್ ಕಲಾ ಕೇಂದ್ರದ ಕೃಷ್ಣದಾಸ್ ಅವರಿಂದ ಕಲಿತ ವಿದ್ಯಾರ್ಥಿಗಳು ರಂಗದಲ್ಲಿ ಅದ್ಬುತವಾಗಿ ಕೇರಳದ ಕಲಾ ಶ್ರೀಮಂತಿಕೆಯನ್ನು ಪ್ರದ ರ್ಶಿಸಿ ಚಪ್ಪಾಳೆ ಗಿಟ್ಟಿಸಿದರು.

ಚಿತ್ತಾರ ಕಲೆ, ಚೆರಿಯಲ್ ಮುಖವಾಡ, ಘೋಂಡಾ ಕಲೆ, ಕಸೂತಿ, ಪೇಪರ್ ಮೆಶೆ, ಹುಣಸೆ ಹಣ್ಣಿನ ಸಿಪ್ಪೆಯ ಪುಡಿಯಿಂದ ತಯಾರಿಸಲಾದ ಮುಖವಾಡ ಇತ್ಯಾದಿ ಕಲೆಯಲ್ಲಿ ತರಬೇತಿ ಪಡೆದ ಶಿಬಿರಾರ್ಥಿ ಗಳನ್ನು ತಾವು ಸ್ವತಃ ಕಲಿತು ತಯಾರಿಸಿದ ಕಲೆಯನ್ನು ಪ್ರದರ್ಶಿಸಿದರು.

ಕ್ರಾಫ್ಟ್ ಮೇಳ ಯಶಸ್ವಿನ ಬಗ್ಗೆ ಸಮಾ ರೋಪ ಕಾರ್ಯಕ್ರಮದಲ್ಲಿ ಸಂತಸ ವ್ಯಕ್ತ ಪಡಿಸಿದ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ, ನಿರೀ ಕ್ಷೆಗೂ ಮೀರಿ ವಿದ್ಯಾರ್ಥಿಗಳು ಕ್ಯಾಫ್ಟ್ ಮೇಳ ದಲ್ಲಿ ಪಾಲ್ಗೊಂಡು ಆಯೋಜಕರ ಶ್ರಮಕ್ಕೆ ಪ್ರತಿಫಲ ನೀಡಿದ್ದಾರೆ. ಮುಂದಿನ ವರ್ಷಗಳ ಲ್ಲಿಯೂ ಕ್ಯಾಫ್ಟ್‍ಮೇಳವನ್ನು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಹಾಗೂ ಸ್ಪಿಕ್‍ಮೆಕೆ ವಾರ್ಷಿಕ ಕಾರ್ಯ ಕ್ರಮವನ್ನಾಗಿ ಆಯೋಜಿಸಲಿದೆ ಎಂದು ಘೋಷಿಸಿದರು. ಸ್ಪಿಕ್‍ಮೆಕೆ 15 ವರ್ಷ ಗಳಿಂದ ಭಾರತೀಯ ವಿದ್ಯಾಭವನದ ಜತೆಗೂಡಿ ಭಾರತೀಯ ಕಲಾ ಸಂಸ್ಕøತಿ ಯನ್ನು ಜನತೆಗೆ ಪರಿಚಯಿಸುವ ಕಾರ್ಯ ಕೈಗೊಂಡಿದೆ ಎಂದೂ ದೇವಯ್ಯ ಮಾಹಿತಿ ನೀಡಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಉಪಾಧ್ಯಕ್ಷ ಕೆ.ಪಿ.ಉತ್ತಪ್ಪ, ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಗೌರವ ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಮುಖ್ಯಕಾರ್ಯನಿರ್ವ ಹಣಾಧಿಕಾರಿ ವಿದ್ಯಾಹರೀಶ್, ವ್ಯವ ಸ್ಥಾಪಕ ರವಿ, ಉಪಪ್ರಾಂಶುಪಾಲೆ ವನಿತಾ ಪಾಲ್ಗೊಂಡಿದ್ದರು.

Translate »