ನಾಡಿನ ಜನತೆಗೆ ಸಿಎಂ ಸಂದೇಶ
ಮೈಸೂರು

ನಾಡಿನ ಜನತೆಗೆ ಸಿಎಂ ಸಂದೇಶ

September 30, 2019

ಮೈಸೂರು,ಸೆ.29(ಆರ್‍ಕೆ)- ದಸರಾ ಮಹೋ ತ್ಸವವು ನಾಡಿನ ಜನತೆಗೆ ಸುಖ-ಶಾಂತಿ-ನೆಮ್ಮದಿ ತರಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದಸರಾ ಸಂದೇಶ ನೀಡಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ನಡೆದ 2019ರ ದಸರಾ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ವಿಜಯನಗರ ಸಾಮ್ರಾಜ್ಯದಲ್ಲಿ ನಡೆಯುತ್ತಿದ್ದ ನವರಾತ್ರಿ ಉತ್ಸವವನ್ನು ಪ್ರಜಾ ಪ್ರಭುತ್ವ ಆಡಳಿತ ಬಂದ ಮೇಲೆ ಸರ್ಕಾರಗಳು ನಿರಂತರವಾಗಿ ದಸರಾವನ್ನು ನಾಡಹಬ್ಬವಾಗಿ ಆಚ ರಿಸಿಕೊಂಡು ಬಂದಿವೆ ಎಂದರು. ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಉಳಿದೆಡೆ ಬರದ ಛಾಯೆ ಇದೆಯಾದರೂ, ಪಾರಂಪರಿಕ ದಸರೆಗೆ ಯಾವುದೇ ಚ್ಯುತಿ ಬಾರದಂತೆ ಸರ್ಕಾರ ದಸರಾ ಆಚರಿಸುತ್ತಿದೆ. ಮೈಸೂರಿನ ಅಧಿದೇವತೆಯಾದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಜಂಬೂಸವಾರಿ ದಿನ ಮೆರವಣಿಗೆ ಮಾಡಿ ನಾವು ಭಾವುಕರಾಗುತ್ತೇವೆ. ತಾಯಿ ಕರುಣೆ ತೋರಿದರೆ ಸುಖ-ಶಾಂತಿ ದೊರೆಯುತ್ತದೆಂದು ನಂಬಿಕೆ. ದುಷ್ಟ ಶಕ್ತಿಗಳು ತೆರೆಮರೆಗೆ ಸರಿದು ಸುಖ-ಶಾಂತಿ-ನೆಮ್ಮದಿ ದೊರೆಯಲಿ ಎಂದು ಸಿಎಂ ನುಡಿದರು. ದಸರಾ ಉತ್ಸವವನ್ನು
ಖ್ಯಾತ ಸಾಹಿತಿ, ಸರಸ್ವತಿ ಸಮ್ಮಾನ್ ಎಸ್.ಎಲ್.ಭೈರಪ್ಪ ಉದ್ಘಾಟಿಸಿರುವುದು ವಿಶೇಷ. ಸಾಹಿತ್ಯ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಬೆಳೆದು ಸಾಧನೆಗೈದಿರುವ ಭೈರಪ್ಪ ಅವರು, ಎಲ್ಲರಿಗೂ ಚಿರಪರಿ ಚಿತರು. ಜ್ಞಾನಪೀಠ ಪ್ರಶಸ್ತಿಗೂ ಅವರು ಅರ್ಹರು ಎಂದು ನುಡಿದರು. ಮತ್ತೊಮ್ಮೆ ನಾನು ನೆರೆ ಪೀಡಿತ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದು, ಪರಿಹಾರೋಪಾಯ ಹಾಗೂ ಶಾಶ್ವತ ಮನೆ ನಿರ್ಮಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವವನಿದ್ದೇನೆ. ಆ ಮೂಲಕ ರಾಜ್ಯದ ಅಭಿವೃದ್ಧಿಗೂ ಗಮನ ಹರಿಸುತ್ತೇನೆ ಎಂದು ಸಿಎಂ ನುಡಿದರು.

Translate »