ಮೈಸೂರು ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು

ಮೈಸೂರು ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

September 30, 2019

ಮೈಸೂರು,ಸೆ.29(ಎಸ್‍ಬಿಡಿ)-ಮೈಸೂರು ಅರಮನೆ ಆವ ರಣ ಸೇರಿದಂತೆ ಅಷ್ಟ(8) ವೇದಿಕೆಗಳಲ್ಲಿ ಆಯೋಜಿಸಿರುವ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ದೊರಕಿತು. ದೀಪಾಲಂಕಾರದ ಬೆಳಕಲ್ಲಿ ಕಂಗೊಳಿಸುತ್ತಿದ್ದ ಅಂಬಾವಿಲಾಸ ಅರಮನೆ ಅಂಗಳದಲ್ಲಿ ನಿರ್ಮಿಸಿರುವ ಅತ್ಯಾ ಕರ್ಷಕ ವೇದಿಕೆಯಲ್ಲಿ ಸಚಿವರಾದ ಆರ್.ಅಶೋಕ್ ಗಣ್ಯ ರೊಂದಿಗೆ ದೀಪ ಬೆಳಗಿಸುವ ಮೂಲಕ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಈ ಸಂದರ್ಭ ದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕೊಡಮಾಡುವ `ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿಯನ್ನು ಸಂಗೀತ ಸಾಧಕ ಪ್ರೊ.ಬಿ.ಎಸ್. ವಿಜಯರಾಘವನ್ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪ್ರದಾನ ಮಾಡಿದರು. ಬಳಿಕ ವಿದ್ವಾನ್ ವಿಜಯರಾಘವನ್ ಹಾಗೂ ಜಯಲಕ್ಷ್ಮೀ ದಂಪತಿ ಯನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ನಾಡಿನ ಕಲೆ, ಸಂಸ್ಕೃತಿ, ಭವ್ಯ ಪರಂ ಪರೆಯನ್ನು ಜಗತ್ತಿಗೆ ಸಾರುವ ಮೈಸೂರು ದಸರಾ ಮಹೋತ್ಸವ ಆರಂಭವಾಗಿದೆ. ಇದರೊಂದಿಗೆ ಹೆಮ್ಮೆಯ ಕಲಾವಿದರು, ವಿದ್ವಾಂಸರ ಕಲಾರಾಧನೆಯನ್ನು ಸವಿಯುವ ಸುಸಂದರ್ಭವೂ ಇದಾಗಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಇಡೀ ಜಿಲ್ಲಾಡಳಿತ ಒಂದು ತಿಂಗಳಿಂದ ದಸರೆ ಸಿದ್ಧತೆಗೆ ಶ್ರಮಿಸಿದೆ. ನವರಾತ್ರಿ ಉತ್ಸವದ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅತ್ಯಮೂಲ್ಯವಾದದ್ದು ಎಂದು ಹೇಳಿದರು.

ಸಚಿವ ಸಿ.ಟಿ.ರವಿ ಮಾತನಾಡಿ, ದಸರಾ ಮಹೋತ್ಸವ ನಮ್ಮ ಸಾಂಸ್ಕೃತಿಕ ವೈಭವವನ್ನು ಸಾಕ್ಷೀಕರಿಸುತ್ತದೆ. 410 ವರ್ಷಗಳ ಪರಂಪರೆ, ಇತಿಹಾಸ, ಸಂಸ್ಕೃತಿಯನ್ನು ಜಗತ್ತಿಗೆ ಸಾರುವಂತಿದೆ. ಕಲೆ, ಸಾಹಿತ್ಯ ಪ್ರಾಕಾರ ಉತ್ತುಂಗಕ್ಕೆ ಬೆಳೆಯಲು ಪ್ರಮುಖ ಕಾರಣ ವೆಂದರೆ ಈ ಮಣ್ಣಿನ ಗುಣ. ಈ ಮಣ್ಣು ಯಾವುದನ್ನೂ ಕಡೆಗಾಣಿಸದೆ ಎಲ್ಲವನ್ನೂ ಪ್ರೋತ್ಸಾಹಿಸಿ, ಬೆಳವಣಿಗೆಗೆ ಅವಕಾಶ ನೀಡಿದೆ ಎಂದು ಬಣ್ಣಿಸಿದರು. ಬಹಳಷ್ಟು ಮಂದಿ ಬಹುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ದೇಶದ ಮಣ್ಣಿನ ಗುಣವೇ ಬಹುತ್ವ ಒಪ್ಪಿಕೊಳ್ಳು ವುದು. ದೇವನೊಬ್ಬ ನಾಮ ಹಲವು ಎಂಬ ಸಾಮರಸ್ಯವಿದೆಯೇ ಹೊರತು ಮೋಕ್ಷಕ್ಕೆ ಇದೊಂದೇ ದಾರಿ ಎಂದು ಎಲ್ಲೂ ಪ್ರತಿಪಾದಿಸಿಲ್ಲ. ನಾವೆಲ್ಲಾ ಇಂತಹ ಸಂಸ್ಕೃತಿ ಶ್ರೀಮಂತಿಕೆಯ ವಾರಸುದಾರರು ಎಂಬುದೇ ಹೆಮ್ಮೆ ಎಂದ ಅವರು, ಅಸುರ ಶಕ್ತಿ ಅಳಿದು, ಸಾತ್ವಿಕ ಭಾವ, ಶಿಷ್ಟ ಶಕ್ತಿ ಜಾಗೃತವಾಗಲಿ. ಇಂದು ಅಸುರರು ಇಲ್ಲದಿದ್ದರೂ ಆ ಮನಃಸ್ಥಿತಿಯವರು ಇದ್ದಾರೆ. ಅಂತಿಮವಾಗಿ ಅಸುರ ಮನಃಸ್ಥಿತಿಯ ವಿರುದ್ಧ ಒಳ್ಳೆಯ ಮನಸ್ಸುಗಳಿಗೆ ವಿಜಯವಾಗಲಿ ಎಂದೂ ಈ ಪುಣ್ಯಗಳಿಗೆಯಲ್ಲಿ ಆಶಿಸುತ್ತೇನೆ ಎಂದರು.

ಡಾನ್ ಟು ಡಸ್ಕ್: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಜಯಚಾಮರಾಜ ಒಡೆಯರ್ ಅವರು ಮಹಾರಾಜರು ಮಾತ್ರವಲ್ಲ ಉತ್ತಮ ಸಂಗೀತಗಾರರೂ ಆಗಿದ್ದರು. ವಾಗ್ಗೇಯಕಾರರಿಗೆ ದೊಡ್ಡ ಶಕ್ತಿಯಾಗಿ ದ್ದವರು. ಅವರ ಜನ್ಮಶತಾಬ್ದಿ ಸಂದರ್ಭದಲ್ಲಿ ವಿಶೇಷ ರೀತಿಯಲ್ಲಿ ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ಅ.6ರಂದು `ಡಾನ್ ಟು ಡಸ್ಕ್’ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗುವುದು. ಮುಂಜಾನೆ ಯಿಂದ ಮುಸ್ಸಂಜೆ(ಬೆಳಿಗ್ಗೆ 6ರಿಂದ ಸಂಜೆ 6)ವರೆಗೆ ಅಂದರೆ ಅಂದರೆ 12 ಗಂಟೆಗಳ ಕಾಲ ನಿರಂತರವಾಗಿ 800 ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಸ್ಥಳೀಯರು, ಪ್ರವಾಸಿ ಗರು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸಮಾರಂಭದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕ ಎಲ್.ನಾಗೇಂದ್ರ, ಕೋಲಾರ ಸಂಸದ ಮುನಿಸ್ವಾಮಿ, ಉಪಮೇಯರ್ ಶಫಿ ಅಹಮದ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪರಿಮಳಾ, ಉಪಾಧ್ಯಕ್ಷೆ ಗೌರಮ್ಮ, ಮಾಜಿ ಮೇಯರ್ ಸಂದೇಶ್‍ಸ್ವಾಮಿ, ಡಿಸಿ ಅಭಿರಾಮ್ ಜಿ.ಶಂಕರ್, ಎಡಿಸಿ ಬಿ.ಆರ್.ಪೂರ್ಣಿಮಾ, ಜಿಪಂ ಸಿಇಓ ಕೆ.ಜ್ಯೋತಿ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಆರ್.ಆರ್.ಜನ್ನು, ನಿರ್ದೇಶಕಿ ಕೆ.ಎಂ.ಜಾನಕಿ, ಸಹಾಯಕ ನಿರ್ದೇಶಕ ಇ.ಚನ್ನಪ್ಪ, ದಸರಾ ಸಾಂಸ್ಕೃತಿಕ ಉಪಸಮಿತಿ ಅಧ್ಯಕ್ಷ ಎನ್.ವಿ.ಫಣೀಶ್, ಉಪಾಧ್ಯಕ್ಷ ಸೋಮಸುಂದರ್, ಪುನೀತ್, ವಿನಯ್‍ಕುಮಾರ್, ಬಿ.ಸೋಮಶೇಖರ್, ಗಿರೀಶ್ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಹೆಚ್.ವಿಶ್ವ ನಾಥ್ ಪುತ್ರ ಪೂರ್ವಜ್ ವಿಶ್ವನಾಥ್ ಹಾಗೂ ತಂಡದವರು ನಾಡಗೀತೆ ಹಾಡಿದರು.

8 ವೇದಿಕೆ: ದಸರಾ ಮಹೋತ್ಸವದ ಅಂಗವಾಗಿ ಅರಮನೆ ಅಂಗಳದ ಪ್ರಧಾನ ವೇದಿಕೆ, ಜಗನ್ಮೋಹನ ಅರಮನೆ, ಪುರಭವನ, ಗಾನಭಾರತಿ, ನಾದಬ್ರಹ್ಮ ಸಂಗೀತ ಸಭಾ, ಕಲಾಮಂದಿರ, ಕಿರು ರಂಗಮಂದಿರ ಹಾಗೂ ಚಿಕ್ಕಗಡಿಯಾರ ವೇದಿಕೆಗಳಲ್ಲಿ ಇಂದಿನಿಂದ 9 ದಿನ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಮಹಾರಾಜರೆದುರು ಹಾಡಿ ಶಿಷ್ಯ ವೇತನ ಪಡೆದಿದ್ದ 13 ವರ್ಷದ ಬಾಲಕ ಈಗ `ರಾಜ್ಯ ಸಂಗೀತ ವಿದ್ವಾನ್’ `ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ ಪುರಸ್ಕೃತರಾದ ಬೆಳಗಾಂ ಶೇಷಪ್ಪ ವಿಜಯ ರಾಘವನ್ ಅವರು ಬಹುಮುಖ ಪ್ರತಿಭೆಯುಳ್ಳ ಮೇರು ಸಂಗೀತ ಸಾಧಕ. ಮೂಲತಃ ಶಿವಮೊಗ್ಗದ ಶೇಷಪ್ಪ ಹಾಗೂ ಲಕ್ಷ್ಮಮ್ಮ ದಂಪತಿ ಪುತ್ರರಾಗಿ ಮೈಸೂರಿನಲ್ಲಿ ಜನಿಸಿದ ಇವರಿಗೆ ಆತ್ಮ, ಆಧ್ಯಾತ್ಮ, ಪರಮಾತ್ಮ ಎಲ್ಲವೂ ಸಂಗೀತವೇ. ಇವರದು ಸಂಗೀತ ಕುಟುಂಬವಾದ ಕಾರಣ ಕರ್ನಾಟಕ ಶಾಸ್ತ್ರೀಯ ಸಂಗೀತ, ಗಾಯನ, ವೀಣೆ, ವಯಲಿನ್, ಚಿತ್ರವೀಣಾ, ಜಲತರಂಗ ವಾದನದಲ್ಲೂ ವಿದ್ವಾನರು. 1963ರಲ್ಲಿ ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆ ಯಲ್ಲಿ ಸಂಗೀತ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿ, ಮೈಸೂರು ವಿವಿ ಲಲತಕಲಾ ಕಾಲೇಜಿನ ಉಪನ್ಯಾಸಕರಾಗಿ, ಸಹಾಯಕ ಪ್ರಾದ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಲಾ ಧಾರೆ ಎರೆದಿದ್ದಾರೆ. ಅವಧಾನ ತಾಳ, ಪಂಚತಾಳೇಶ್ವರಿ ಹಾಗೂ ಸಪ್ತತಾಳೇಶ್ವರಿಯಲ್ಲಿ ವಿಶೇಷ ಪ್ರಾವಿಣ್ಯತೆ ಹೊಂದಿರುವ ಇವರು, ವ್ಯಾಸರಾಜ, ವಾದಿರಾಜ, ಜಗನ್ನಾಥ ದಾಸರು, ಪ್ರಸನ್ನ ವೆಂಕಟದಾಸರು ಹಾಗೂ ಗೋಪಾಲದಾಸರ ಕೀರ್ತನೆಗಳಿಗೆ ಸ್ವರ ಸಂಯೋಜಿಸಿದ್ದಾರೆ. ತಮ್ಮ 13ನೇ ವಯಸ್ಸಿನಲ್ಲಿ ಜಯಚಾಮರಾಜ ಒಡೆಯರ್ ಸಮ್ಮುಖದಲ್ಲಿ ಹಾಡಿ, ಶಿಷ್ಯ ವೇತನ ಪಡೆದಿರುವ ಹೆಮ್ಮೆಯ ಕಲಾವಿದರಾದ ಇವರಿಗೆ ರಾಜ್ಯ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಸಂದಿವೆ. ಅಂದು ಜಯಚಾಮರಾಜ ಒಡೆಯರ್ ಅವರಿಂದ ಶಿಷ್ಯ ವೇತನ ಪಡೆದಿದ್ದ ಬಾಲ ಪ್ರತಿಬೆ, ಇದೀಗ ಜಯಚಾಮರಾಜ ಒಡೆಯರ್ ಜನ್ಮಶತಾಬ್ದಿ ಸಂದರ್ಭದಲ್ಲಿ `ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿಗೆ ಬಾಜನರಾಗಿರುವುದು ವಿಶೇಷ.

Translate »