ದಸರಾ ಚಲನಚಿತ್ರೋತ್ಸವ ಪ್ರಾರಂಭ
ಮೈಸೂರು

ದಸರಾ ಚಲನಚಿತ್ರೋತ್ಸವ ಪ್ರಾರಂಭ

September 30, 2019

ಮೈಸೂರು,ಸೆ.29(ಆರ್‍ಕೆಬಿ)- ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸಲಾಗುತ್ತಿದ್ದು, ಅದರೊಂದಿಗೆ ಸರ್ಕಾರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಚಿತ್ರರಂಗದ ಕಲಾವಿದರನ್ನು ಪ್ರೋತ್ಸಾಹಿಸಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಭರವಸೆ ನೀಡಿದರು.

ಮೈಸೂರಿನ ಕಲಾಮಂದಿರದಲ್ಲಿ ದಸರಾ ಮಹೋತ್ಸವದ ಒಂದು ಪ್ರಮುಖ ಭಾಗ ವಾದ ದಸರಾ ಚಲನಚಿತ್ರೋತ್ಸವಕ್ಕೆ ಭಾನು ವಾರ ಚಾಲನೆ ನೀಡಿ ಅವರು ಮಾತನಾಡಿ ದರು. ನಾನೂರು ವರ್ಷಗಳ ಇತಿಹಾಸ ಹೊಂದಿರುವ ದಸರಾ ಮಹೋತ್ಸವದಲ್ಲಿ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳುವ ಮೂಲಕ ಚಲನಚಿತ್ರರಂಗದ ಕಲಾವಿದ ರನ್ನು ಬೆಳೆಸಲು ಸಹಾಯಕವಾಗಿದೆ ಎಂದರು.

ಕಲೆ, ಸಾಹಿತ್ಯ ಉಳಿಯಬೇಕಾದರೆ ಸಿನಿಮಾ ಉಳಿಯಬೇಕು. ಸಿನಿಮಾ ಉಳಿದರೆ ಕಲಾ ವಿದರು, ತಂತ್ರಜ್ಞರು ಉಳಿಯುತ್ತಾರೆ. ಆ ನಿಟ್ಟಿನಲ್ಲಿ ಸರ್ಕಾರವೂ ಹೆಚ್ಚು ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದರು. ರಾಜ ಮಹಾ ರಾಜರ ಕಾಲದಲ್ಲಿ ವಿವಿಧ ಬಗೆಯ ಕಲಾವಿದ ರಿಗೆ ಅವರ ಆಸ್ಥಾನದಲ್ಲಿ ಅವಕಾಶ ಕಲ್ಪಿಸಿ ಕೊಡಲಾಗುತ್ತಿತ್ತು. ಆದರೆ ಪ್ರಜಾಪ್ರಭುತ್ವ ಕಾಲದಲ್ಲಿ ಸರ್ಕಾರವು ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ ಎಂದರು.

ಹಿರಿಯ ನಟ ಜಗ್ಗೇಶ್ ಮಾತನಾಡಿ, ಯಾರಾದರೂ ಪೈರಸಿ ಮಾಡಿ, ಮೊಬೈಲ್ ಗಳಲ್ಲಿ ಹಂಚಿಕೊಂಡರೆ ಅದರಿಂದ ನಿರ್ಮಾ ಪಕರು ನಷ್ಟ ಅನುಭವಿಸುತ್ತಿದ್ದಾರೆ. ಮೊಬೈಲ್ ನಲ್ಲಿ ಪೈರಸಿ ಚಿತ್ರ ಬಂದರೆ ನೋಡಬೇಡಿ, ಸಿನಿಮಾ ಮಂದಿರಗಳಿಗೇ ಹೋಗಿ ಸಿನಿಮಾ ನೋಡಿ, ಕಲಾವಿದರು, ನಿರ್ಮಾಪಕರನ್ನು ಉಳಿಸಿ ಎಂದು ಮನವಿ ಮಾಡಿದರು.

ಪೈರಸಿ ಕುರಿತ ಜಗ್ಗೇಶ್ ಮಾತಿಗೆ ಪೂರಕ ವಾಗಿ ಮಾತನಾಡಿದ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ಜೈರಾಜ್, ಪೈರಸಿ ಹೊಡೆತದಿಂದಾಗಿ `ಪೈಲ್ವಾನ್’ ಚಿತ್ರ ನಿರ್ಮಾಪಕರಿಗೆ ಒಂದೇ ದಿನ 5 ಕೋಟಿ ನಷ್ಟ ಆಗಿದೆ. ಪೈರಸಿಯನ್ನು ತಡೆಯಲು ಸರ್ಕಾರ ಬಿಗಿ ಕ್ರಮ ತೆಗೆದು ಕೊಳ್ಳಬೇಕು. ಹಾಗಾದರೆ ಮಾತ್ರ ಪೈರಸಿ ಹಾವಳಿಯಿಂದ ಕನ್ನಡ ಚಿತ್ರರಂಗವನ್ನು ಉಳಿಸಲು ಸಾಧ್ಯ ಎಂದರು. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಿ ದ್ದರು. ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಮಾಜಿ ಸಚಿವ ಕೋಟೆ ಶಿವಣ್ಣ, ಹಿರಿಯ ನಟ ಜಗ್ಗೇಶ್, ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್, ನಿರ್ಮಾಪಕಿ ಹಾಗೂ ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್, ನಟಿಯರಾದ ಆಶಿಕಾ ರಂಗನಾಥ್, ಶುಭಾ ರಕ್ಷಾ, ಸಂಚಿತ ಪಡುಕೊಣೆ, ಹರ್ಷಿತಾಗೌಡ, ಧನುಷ್ ಗೌಡ, ಪವನ್ ತೇಜ್, ಚಿತ್ರ ನಿರ್ದೇಶಕ ನಾಗಣ್ಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ಜೈರಾಜ್, ಉಪಾಧ್ಯಕ್ಷ ಉಮೇಶ್, ದಸರಾ ಚಲನಚಿತ್ರೋತ್ಸವ ಉಪ ಸಮಿತಿ ಅಧ್ಯಕ್ಷ ಜಯಪ್ರಕಾಶ್, ಉಪ ವಿಶೇಷಾಧಿಕಾರಿ ಬಿ.ಎನ್.ಗಿರೀಶ್, ಕಾರ್ಯದರ್ಶಿ ಆರ್.ರಾಜು ಇತರರಿದ್ದರು.

Translate »