ಜೂ.18ಕ್ಕೆ ಅರಸೀಕೆರೆ ತಾಲೂಕು ಜೆ.ಸಿ.ಪುರದಲ್ಲಿ ಸಿಎಂ ಗ್ರಾಮ ವಾಸ್ತವ್ಯ
ಮೈಸೂರು

ಜೂ.18ಕ್ಕೆ ಅರಸೀಕೆರೆ ತಾಲೂಕು ಜೆ.ಸಿ.ಪುರದಲ್ಲಿ ಸಿಎಂ ಗ್ರಾಮ ವಾಸ್ತವ್ಯ

June 16, 2019

ಹಾಸನ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜೂ.18ರಂದು ಜಿಲ್ಲೆಯ ಅರಸೀ ಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಜೆ.ಸಿ. ಪುರದಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.

ಮುಖ್ಯಮಂತ್ರಿಗಳು ಜೂ.18ರ ಸಂಜೆ 5ಕ್ಕೆ ಗಂಡಸಿಗೆ ಆಗಮಿಸಿ ಸಾರ್ವಜನಿಕರ ಅಹವಾಲು ಸ್ವೀಕರಿ ಸುವರು. ಬಳಿಕ ಸಂಜೆ 6 ಗಂಟೆಗೆ ಜೆ.ಸಿ.ಪುರ ತಲುಪಿ ಅಲ್ಲಿಯೇ ತಂಗುವರು. ಜಿಲ್ಲೆಯ ಹಲವು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಜಿಪಂ ಸಿಇಓ ಕೆ.ಎನ್.ವಿಜಯಪ್ರಕಾಶ್, ಎಸ್‍ಪಿ ಎ.ಎನ್.ಪ್ರಕಾಶ್ ಗೌಡ ಹಾಗೂ ವಿವಿಧ ಇಲಾಖೆ ಗಳ ಅಧಿಕಾರಿಗಳೂ ಅಂದು ಜೆಸಿ ಪುರದಲ್ಲಿಯೇ ತಂಗಲಿದ್ದಾರೆ. ಈ ಸಂಬಂಧ ಡಿಸಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಶನಿವಾರ ಪೂರ್ವ ಸಿದ್ಧತಾ ಸಭೆ ನಡೆಸಿದರು. ಜೆ.ಸಿ.ಪುರದ ಶಾಲೆ, ವಿದ್ಯಾರ್ಥಿನಿಲಯ, ಸರ್ಕಾರಿ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲಿಸಿ, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಖ್ಯಮಂತ್ರಿಯವರು ಜೂ.19ರಂದು ಜೆಸಿ ಪುರದಲ್ಲಿಯೇ ಅಧಿಕಾರಿಗಳ ಸಭೆ ನಡೆಸುವರು, ಸಾರ್ವಜನಿಕರ ಅಹವಾಲು ಸ್ವೀಕರಿಸುವರು. ಜಿಲ್ಲೆ ಯಲ್ಲಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭ ಅಗತ್ಯ ಮಾಹಿತಿಯೊಂದಿಗೆ ಹಾಜರಿರ ಬೇಕು ಎಂದು ಸೂಚನೆ ನೀಡಿದರು. ಗ್ರಾಮ ವಾಸ್ತವ್ಯ ವೇಳೆ ಸಿಎಂ ಸಸಿ ನೆಡುವ ಕಾರ್ಯಕ್ರಮವಿದೆ. ಅಲ್ಲದೇ ವಿವಿಧ ಇಲಾಖೆಗಳ ಯೋಜನೆಗಳಿಗೆ ಸಂಬಂಧಿಸಿದಂತೆ ಜಾಗೃತಿ ಚಟುವಟಿಕೆಗಳೂ ನಡೆ ಯಲಿವೆ. ಇದೆಲ್ಲವೂ ಸ್ವಲ್ಪವೂ ಲೋಪವಿಲ್ಲದಂತೆ ಆಯೋಜನೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಗಮನಹರಿಸಬೇಕು ಎಂದು ಎಡಿಸಿ ಸೂಚಿಸಿದರು. ಗಂಡಸಿ ಮತ್ತು ಕಣಕಟ್ಟೆ ಹೋಬಳಿ ಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್, ಆಹಾರ-ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಸವಿತಾ, ಮುಖ್ಯ ಯೋಜನಾ ಧಿಕಾರಿ ಕೆ.ಎ.ಪರಪ್ಪಸ್ವಾಮಿ, ಜಿಪಂ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಮತ್ತಿತರರು ಸಭೆಯಲ್ಲಿ ಹಲವು ಸಲಹೆಗಳನ್ನು ನೀಡಿದರು.

Translate »