ಮೈಸೂರು ರೈಲ್ವೆ ನಿಲ್ದಾಣದಿಂದ ಹಲವು ರೈಲು ಇಂದಿನಿಂದ ರದ್ದು
ಮೈಸೂರು

ಮೈಸೂರು ರೈಲ್ವೆ ನಿಲ್ದಾಣದಿಂದ ಹಲವು ರೈಲು ಇಂದಿನಿಂದ ರದ್ದು

June 16, 2019

ಮೈಸೂರು: ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣ ಹಾಗೂ ಹಳಿಗಳಲ್ಲಿ ಆಧುನಿಕ ನಾನ್ ಇಂಟರ್‍ಲಾಕಿಂಗ್ ವ್ಯವಸ್ಥೆ ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ(ಜೂ.16) ಯಿಂದ 23ರವರೆಗೆ ಮೈಸೂರಿನಿಂದ ವಿವಿಧೆಡೆಗೆ ಸಂಚರಿಸುತ್ತಿದ್ದ ಸುಮಾರು 30 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾ ಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆ ಬೆಂಗಳೂ ರಿಗೆ 45ಕ್ಕೂ ಹೆಚ್ಚುವರಿ ಬಸ್ ಸಂಚಾರಕ್ಕೆ ಕ್ರಮ ಕೈಗೊಂಡಿದೆ.

ರೈಲ್ವೆ ನಿಲ್ದಾಣದಲ್ಲಿ ಆಧುನೀಕರಣದ ಕಾಮಗಾರಿ ತ್ವರಿತಗತಿ ಯಲ್ಲಿ ಸಾಗುತ್ತಿದ್ದು, ರೈಲು ಸಂಚಾರ ಮಾರ್ಗದಲ್ಲಿ ಆಧುನಿಕ ವ್ಯವಸ್ಥೆ ನಾನ್ ಇಂಟರ್‍ಲಾಕಿಂಗ್ ವ್ಯವಸ್ಥೆ ಅಳವಡಿಸುವ ಕಾಮಗಾರಿ ಆರಂಭಿಸುತ್ತಿದೆ. ಈ ವ್ಯವಸ್ಥೆಯಿಂದ ಯಾವ ಟ್ರಾಕ್ ನಲ್ಲಿ ಯಾವ ರೈಲು ಸಂಚರಿಸಬೇಕೆಂದು ಕಂಟ್ರೋಲ್ ರೂಮ್ ನಿಂದಲೇ ನಿರ್ಧರಿಸುವುದರಿಂದ ಯಾವುದೇ ಅನಾಹುತ ನಡೆಯದಂತೆ ತಡೆಗಟ್ಟಬಹುದಾಗಿದೆ. ಈ ಹಿನ್ನೆಲೆಯಲ್ಲಿ ಜೂ.16ರಿಂದ 23ರವರೆಗೆ ಸುಮಾರು 30 ರೈಲುಗಳ ಸಂಚಾರ ರದ್ದಾಗಿದೆ. ಆಧುನಿಕರಣದ ಕಾಮಗಾರಿ ಪೂರ್ಣಗೊಂಡ ಬಳಿಕವಷ್ಟೇ ಜೂ.23ರ ನಂತರ ಎಲ್ಲಾ ರೈಲುಗಳ ಸಂಚಾರ ಎಂದಿನಂತೆ ಪುನರಾರಂಭವಾಗಲಿದೆ.

ಜಾಗೃತಿ: ರೈಲುಗಳ ಸಂಚಾರ ರದ್ದು ಮಾಡಿರುವ ಹಿನ್ನೆಲೆ ಯಲ್ಲಿ ಈಗಾಗಲೇ ರೈಲ್ವೆ ನಿಲ್ದಾಣದಲ್ಲಿ ಫಲಕ ಹಾಕುವುದ ರೊಂದಿಗೆ ದ್ವನಿವರ್ಧಕದ ಮೂಲಕ ಪ್ರಚಾರ ಮಾಡಿ ಪ್ರಯಾ ಣಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಅಲ್ಲದೆ ಅಡಚಣೆಗಾಗಿ ವಿಷಾದಿಸುವ ಮೂಲಕ ಪ್ರಯಾಣಿಕರ ಸಹಕಾರ ಕೋರುತ್ತಿದೆ.

Translate »