ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕ ರಣ: ಆಘಾತದಿಂದ ಮೈಸೂರಲ್ಲಿ ಸಂತ್ರಸ್ತ ಮಹಿಳೆ ಸಾವು
ಮೈಸೂರು

ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕ ರಣ: ಆಘಾತದಿಂದ ಮೈಸೂರಲ್ಲಿ ಸಂತ್ರಸ್ತ ಮಹಿಳೆ ಸಾವು

June 16, 2019

ಮೈಸೂರು: ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕ ರಣದ ಸಂತ್ರಸ್ತೆಯೊಬ್ಬರು ಆಘಾತದಿಂದ ಹೃದಯಾಘಾತಕ್ಕೊಳಗಾಗಿ ಸಾವನ್ನ ಪ್ಪಿರುವ ಘಟನೆ ಮೈಸೂರಿನ ಶಾಂತಿನಗರ ದಲ್ಲಿ ಗುರುವಾರ ಸಂಭವಿಸಿದೆ.

ಮೈಸೂರಿನ ಶಾಂತಿನಗರ ನಿವಾಸಿ ವೈ. ರೆಹಮಾನ್ ಷರೀಫ್ ಅವರ ಪತ್ನಿ ಸಫು ರಭಿ(60) ತೀವ್ರ ಹೃದಯಾಘಾತದಿಂದ ಮೃತಪಟ್ಟವರು. ಅಧಿಕ ಲಾಭ ಬರುತ್ತದೆ ಎಂಬ ಆಸೆಯಿಂದ ತಾವು ದುಡಿದು ಸಂಪಾ ದಿಸಿದ್ದ ಹಣವನ್ನು ಬೆಂಗಳೂರು ಮೂಲದ ಐಎಂಎ ಜುವೆಲ್ಸ್ ಸಂಸ್ಥೆಗೆ ಪರಿಚಯಸ್ಥರ ಮೂಲಕ ಹೂಡಿಕೆ ಮಾಡಿದ್ದ ಸಫುರಭಿ, ವಂಚನೆ ವಿಷಯ ಬಯಲಾಗುತ್ತಿದ್ದಂತೆ ಆಘಾತಕ್ಕೊಳಗಾಗಿದ್ದಾರೆ. ಬುಧವಾರ ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ, ಸಫುರಭಿ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿ ಯಾಗದೆ ಗುರುವಾರ ರಾತ್ರಿ ಕೊನೆಯುಸಿ ರೆಳೆದರು ಎಂದು ಕುಟುಂಬದ ಮೂಲ ಗಳು ತಿಳಿಸಿವೆ. ಈ ಕುಟುಂಬವು ಭಾರೀ ಮೊತ್ತದ ಹಣವನ್ನು ಐಎಂಎ ಸಂಸ್ಥೆಯಲ್ಲಿ ಹೂಡಿತ್ತು. ಸುಮಾರು 5 ತಿಂಗಳು ಭರವಸೆ ಯಂತೆ ಲಾಭಾಂಶ ಬಂದಿತ್ತು. ನಂತರ ಮೂರು ತಿಂಗಳಿಂದ ಹಣ ಬಂದಿರಲಿಲ್ಲ. ಬಾಕಿ ಹಣ ಬಡ್ಡಿ ಸಮೇತ ಜೂನ್(ಈ ತಿಂಗಳು) ಮಾಹೆಯಲ್ಲಿ ಬರುತ್ತದೆ ಎಂದು ಸಂಸ್ಥೆ ಪ್ರತಿನಿಧಿಯನ್ನು ಪರಿಚಯಿಸಿದ್ದ ವ್ಯಕ್ತಿ ಹೇಳಿದ್ದರು ಎಂದು ಸಫುರಭಿ ಕುಟುಂಬ ಸ್ಥರು ತಿಳಿಸಿದ್ದಾರೆ. ಅದೇ ರೀತಿ ಬೆಂಗ ಳೂರು-ಮೈಸೂರು ರಸ್ತೆಯಲ್ಲಿರುವ ಹೊಸ ಗುಡ್ಡದಹಳ್ಳಿ ನಿವಾಸಿ ಅಫ್ಜಲ್ ಪಾಷಾ ಎಂಬ 54 ವರ್ಷದ ವ್ಯಕ್ತಿ ಸಹ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತೀವ್ರ ಹೃದಯಾಘಾತಕ್ಕೊಳಗಾಗಿ ಗುರುವಾರ ಅಸುನೀಗಿರುವುದನ್ನು ಇಲ್ಲಿ ಸ್ಮರಿಸಬಹುದು. ಮೈಸೂರಿನ ಬೀಡಿ ಕಾಲೋನಿಯ ಆಯಿಷಾ ಫಾತಿಮಾ ಎಂಬ 60 ವರ್ಷದ ಮಹಿಳೆ ತಮಗೆ ಬಂದಿರುವ ಷುಗರ್ ಮತ್ತು ಬಿಪಿಗೆ ಔಷಧಿ ಖರೀದಿಸಲು ಅನುಕೂಲವಾಗ ಲೆಂದು ಐಎಂಎ ಸಂಸ್ಥೆಯಲ್ಲಿ ಹಣ ತೊಡಗಿಸಿದ್ದರು. ಈಗ ಅಸಲೇ ಇಲ್ಲ, ಪ್ರತಿ ತಿಂಗಳು ಬರುತ್ತಿದ್ದ ಲಾಭಾಂಶಕ್ಕೂ ಕುತ್ತು ಬಂದಿರುವುದರಿಂದ ಔಷಧಿ ಖರ್ಚಿಗೆ ಏನು ಮಾಡುವುದು ಎಂದು ಆಯಿಷಾ ಅವರು ಇಂದು ಮೈಸೂರಿನ ಉದಯಗಿರಿ ಠಾಣೆಯಲ್ಲಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದರು. ಉದಯಗಿರಿ ಠಾಣೆಗೆ ದೂರು ನೀಡಲು ಇಂದೂ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಧಾವಿಸಿದ್ದರು. ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿದ ಹಣ ವಂಚನೆ ಕಂಪನಿ ಪಾಲಾಗಿರುವ ಬಗ್ಗೆ ಸಂತ್ರಸ್ತರು ದೂರು ನೀಡುತ್ತಿದ್ದಾರೆ. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮೋಸ ಹೋಗಿರುವವರು ಉದಯಗಿರಿ, ಎನ್‍ಆರ್, ಲಷ್ಕರ್, ಮಂಡಿ ಸೇರಿದಂತೆ ಮೈಸೂರಿನ ವಿವಿಧ ಪೊಲೀಸ್ ಠಾಣೆಗೆ ನೂರಾರು ಮಂದಿ ದೂರು ನೀಡಲು ಮುಂದಾಗುತ್ತಿದ್ದಾರೆ.

Translate »