ಮೈಸೂರು ಜಿಲ್ಲಾದ್ಯಂತ ನಾಳೆ ವೈದ್ಯರ ಮುಷ್ಕರ
ಮೈಸೂರು

ಮೈಸೂರು ಜಿಲ್ಲಾದ್ಯಂತ ನಾಳೆ ವೈದ್ಯರ ಮುಷ್ಕರ

June 16, 2019

ಮೈಸೂರು: ಪಶ್ಚಿಮ ಬಂಗಾಳದ ಕೊಲ್ಕತ್ತಾ ಎನ್‍ಆರ್‍ಎಸ್ ವೈದ್ಯಕೀಯ ಮಹಾವಿದ್ಯಾಲಯದ ಕರ್ತವ್ಯನಿರತ ವೈದ್ಯರ ಮೇಲೆ ಗುಂಪೊಂದು ನಡೆಸಿದ ಹಲ್ಲೆ ಖಂಡಿಸಿ ಸೋಮ ವಾರ(ಜೂ 17)ದಂದು ಎಲ್ಲಾ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಚಿಕಿತ್ಸಾ ವಿಭಾಗದ ಸೇವೆ ಸ್ಥಗಿತಗೊಳಿಸಿ ಪ್ರತಿರೋಧ ವ್ಯಕ್ತಪಡಿಸಲು ವೈದ್ಯ ಸಮೂಹ ನಿರ್ಧರಿಸಿದೆ.

ಭಾರತೀಯ ವೈದ್ಯಕೀಯ ಸಂಘ (ಐಎಂಎ)ವು ಮುಷ್ಕರಕ್ಕೆ ಕರೆ ನೀಡಿದ್ದು, ಅದರಂತೆ ಸೋಮ ವಾರ ಬೆಳಿಗ್ಗೆ 6 ರಿಂದ ಮಂಗಳವಾರ ಬೆಳಿಗ್ಗೆ 6 ಗಂಟೆವರೆಗೆ ಎಲ್ಲಾ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‍ಗಳಲ್ಲಿನ ಹೊರರೋಗಿ ವಿಭಾಗದ ಸೇವೆ ಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗು ವುದು ಎಂದು ಐಎಂಎ ಮೈಸೂರು ಶಾಖೆ ಕಾರ್ಯ ದರ್ಶಿ ಡಾ. ಜಯಂತ್ ತಿಳಿಸಿದ್ದಾರೆ.

ಆದರೆ ತುರ್ತು ಅಪಘಾತ ವಿಭಾಗ (ಕ್ಯಾಷು ಯಾಲಿಟಿ) ಎಮರ್ಜೆನ್ಸಿ ವಿಭಾಗ, ಒಳರೋಗಿ ಸೇವೆ ಹಾಗೂ ಶಸ್ತ್ರ ಚಿಕಿತ್ಸಾ ಸೇವೆಗಳು ಎಂದಿನಂತೆ ನಡೆ ಯಲಿದ್ದು, ರೋಗಿಗಳ ಹಿತದೃಷ್ಟಿಯಿಂದ ಎಲ್ಲಾ ಅಗತ್ಯ ವೈದ್ಯಕೀಯ ಚಿಕಿತ್ಸಾ ಸೇವೆಗಳನ್ನು ಆದ್ಯತೆ ಮೇಲೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್ ಗಳ ಹೊರರೋಗಿ ವೈದ್ಯಕೀಯ ಸೇವೆಗಳು ಸ್ಥಗಿ ತಗೊಳ್ಳಲಿದ್ದು, ಆ ಅವಧಿಯಲ್ಲಿ ಅಗತ್ಯವಿರುವ ತುರ್ತು ಚಿಕಿತ್ಸೆ ನೀಡಲಾಗುವುದು. ಆದರೆ ಹೊರ ರೋಗಿ ಗಳಾಗಿ ಬರುವವರ ಆರೋಗ್ಯ ತಪಾಸಣೆ ಮಾಡುವು ದಿಲ್ಲ ಎಂದು ಅವರು ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ ವೈದ್ಯರು ಕಪ್ಪು ಪಟ್ಟಿ ಧರಿಸಿ ಮೌನ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮೌನ ಪ್ರತಿಭಟನೆ ನಡೆಸುವಂತೆ ಐಎಂಎ ರಾಜ್ಯ ಶಾಖೆಯಿಂದ ನಿರ್ದೇಶನ ಬಂದಿದೆ ಎಂದೂ ಡಾ.ಜಯಂತ್ ತಿಳಿಸಿದರು. ಅಂದು ದೇಶಾದ್ಯಂತ ವೈದ್ಯರ ಮುಷ್ಕರಕ್ಕೆ ಐಎಂಎ ಕೇಂದ್ರ ಶಾಖೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ತೊಂದರೆ ಯಾಗದಂತೆ ಸರ್ಕಾರಿ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳು, ಹೆರಿಗೆ ಆಸ್ಪತ್ರೆ ಗಳಲ್ಲಿ ಸೋಮವಾರ ಹೊರರೋಗಿ ವಿಭಾಗಗಳಲ್ಲಿ ಹೆಚ್ಚುವರಿ ವೈದ್ಯರು ಹಾಗೂ ನರ್ಸ್‍ಗಳನ್ನು ನಿಯೋ ಜಿಸಿ ತೊಂದರೆಯಾಗದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯವಸ್ಥೆ ಮಾಡಿದೆ.

ಮೈಸೂರಿನ ಕೆಆರ್ ಆಸ್ಪತ್ರೆ, ಚೆಲುವಾಂಬ, ಜಯದೇವ ಹೃದ್ರೋಗ ಆಸ್ಪತ್ರೆ, ಸರ್ಕಾರಿ ಆಯು ರ್ವೇದ ಆಸ್ಪತ್ರೆಗಳಲ್ಲಿ ಅಂದು ಹೊರರೋಗಿ ವಿಭಾಗಗಳಲ್ಲಿ ಸೂಕ್ತ ಸೌಲಭ್ಯ ಒದಗಿಸಲಾಗಿದ್ದು, ಆಂಬುಲೆನ್ಸ್, ಚಾಲಕರುಗಳನ್ನು ಹೆಚ್ಚುವರಿಯಾಗಿ ಮೀಸಲಿರಿಸಲಾಗಿದೆ.

Translate »