ಕಡಿಮೆಯಾದ ಮೀ ಟೂ ಚಳವಳಿಯ ಪ್ರಭಾವಪ್ರಸಿದ್ಧ ಅಂಕಣಕಾರ್ತಿ ಶೋಭಾ ಡೇ ಬೇಸರ
ಮೈಸೂರು

ಕಡಿಮೆಯಾದ ಮೀ ಟೂ ಚಳವಳಿಯ ಪ್ರಭಾವಪ್ರಸಿದ್ಧ ಅಂಕಣಕಾರ್ತಿ ಶೋಭಾ ಡೇ ಬೇಸರ

July 15, 2019

ಮೈಸೂರು, ಜು.14(ಆರ್‍ಕೆಬಿ)- ಕಳೆದ ನೂರು ವರ್ಷಗಳಲ್ಲಿ ಬಹಳ ಮಹತ್ವದ ಚಳುವಳಿಯಾಗಿದ್ದ `ಮೀ ಟೂ’ ಚಳ ವಳಿಯ ಪ್ರಭಾವ ಇತ್ತೀಚೆಗೆ ಕಡಿಮೆ ಯಾಗಿದ್ದು, ಈ ಚಳವಳಿಯಲ್ಲಿ ಆರೋಪಿ ಸಲ್ಪಟ್ಟ ಅನೇಕ ಪುರುಷರು ತಮ್ಮ ಸ್ಥಾನಗಳಿಗೆ ಮರಳಿದ್ದಾರೆ ಎಂದು ಪ್ರಸಿದ್ಧ ಅಂಕಣಕಾರ್ತಿ ಶೋಭಾ ಡೇ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.

ಮೈಸೂರು ಲಿಟರರಿ ಫೋರಮ್ ಚಾರಿ ಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ಸ್ ಮೈಸೂರಿನ ಸದರನ್ ಸ್ಟಾರ್ ಹೋಟೆಲ್‍ನ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ `ಮೈಸೂರು ಸಾಹಿತ್ಯ ಹಬ್ಬ’ದಲ್ಲಿ ಭಾನುವಾರ ಶೋಭಾ 70; ಸೆಲೆಕ್ಟಿವ್ ಮೆಮೊರಿ’ ಸಮೂಹ ಚರ್ಚೆ ಯಲ್ಲಿ ಪಾಲ್ಗೊಂಡಿದ್ದ ಅವರು, ಮೀ ಟೂ ಚಳವಳಿಯು ಈಗ ಹೊರಬಂದಿರು ವುದು ನಾಚಿಕೆಗೇಡಿನ ಸಂಗತಿ ಎಂದರು.

ಮಾಧ್ಯಮ ಉದ್ಯಮದ ಕೆಲವು ಆರೋಪಿ ಗಳು ಇದರ ಹೊಡತಕ್ಕೆ ಸಿಲುಕಿದ್ದರಾ ದರೂ ಅವರೆಲ್ಲರೂ ಪುನಃ ತಮ್ಮ ಸ್ಥಾನಗಳಿಗೆ ಮರಳಿದ್ದಾರೆ. ದೂರವಿಟ್ಟ ಅದೇ ಜನರೊಂದಿಗೆ ಅವರು ಹಿಂತಿರುಗಿದ್ದಾರೆ. ಸಂತೋಷ ವಾಗಿಯೇ ಇದ್ದಾರೆ. ಏಕೆಂದರೆ ಚಳುವಳಿ ಯಲ್ಲಿ ನಿಲ್ಲುವ ನೈತಿಕ ಧೈರ್ಯ ನಮಗೆ ಇರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಎಂ.ಜೆ.ಅಕ್ಬರ್ ಮೇಲಿನ `ಮೀ ಟೂ’ ಆರೋಪದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಂ.ಜೆ.ಅಕ್ಬರ್ ಅವರು ಈ ವಿಷ ಯದ ಬಗ್ಗೆ ನ್ಯಾಯಾಲಯಕ್ಕೆ ಹೋದರೂ, ಇದು ಇಡೀ ಮೀ ಟೂ ಚಳವಳಿಗೆ ಒಂದು ಪರೀಕ್ಷಾ ಪ್ರಕರಣವಾಗಿದೆ. ಇತರರಂತೆ ಎಂ.ಜೆ.ಅಕ್ಬರ್ ಅವರೂ ಕೂಡ ತಮ್ಮ ಸ್ಥಾನಕ್ಕೆ ಮರಳಿದ್ದಾರೆ ಎಂದರು.

ಶತಮಾನಗಳ ದಬ್ಬಾಳಿಕೆಯ ನಂತರ ಹೇಗಾದರೂ ಚಳುವಳಿಯನ್ನು ಮುಂದೆ ತೆಗೆದುಕೊಂಡು ಹೋಗಲು, ಚಳವಳಿಯ ಬಗ್ಗೆ ಬದ್ಧತೆಯನ್ನು ಹಂಚಿಕೊಳ್ಳುವ ಪುರುಷರು ಮತ್ತು ಮಹಿಳೆಯರ ಬಲವರ್ಧನೆ ಅಗತ್ಯ ವಾಗಿದೆ. ಇಂತಹ ಚಳವಳಿಯ ಬಗ್ಗೆ ಸರ್ಕಾರ ಗಂಭೀರತೆಯನ್ನು ಪ್ರದರ್ಶಿಸ ಬೇಕಾಗಿದೆ ಎಂದು ಹೇಳಿದರು.

ರಾಮನಾಥ ಗೋಯಂಕಾರಂತಹ ಜನರು ಇಂದು ಇಲ್ಲ: ದೇಶದಲ್ಲಿಂದು ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಪ್ರತಿಕ್ರಿಯಿ ಸಿದ ಶೋಭಾ ಡೇ, ತುರ್ತು ಪರಿಸ್ಥಿತಿಯ ವಿರುದ್ಧ ಎದ್ದು ನಿಂತು ತೀವ್ರವಾಗಿ ಖಂಡಿ ಸಿದ ರಾಮನಾಥ್ ಗೋಯೆಂಕಾ ಅವ ರಂತಹ ವ್ಯಕ್ತಿ ಇಂದು ನಮ್ಮಲ್ಲಿ ಇಲ್ಲ ಎಂದು ಹೇಳಿದರು.

ನಂತರ ನಡೆದ ಮತ್ತೊಂದು ಅಧಿ ವೇಶನದಲ್ಲಿ ಸಂಗೀತದ ಮೂಲಕ ದಕ್ಷಿಣ ಏಷ್ಯಾದಲ್ಲಿ ರಾಜತಾಂತ್ರಿಕತೆಯಿಂದ ಶಾಂತಿ ನಿರ್ಮಾಣಕ್ಕೆ ಶ್ರಮಿಸಿದ ನಿರು ಪಮಾ ಮೆನನ್ ರಾವ್ ಅವರು, ದೇಶ ಗಳ ಮಧ್ಯೆ ಶಾಂತಿ ನೆಲೆಸುವಂತೆ ಮಾಡು ವುದು ರಾಜತಾಂತ್ರಿಕ ರಾಯಭಾರಿಯ ಜವಾಬ್ದಾರಿ. ಈ ವಿಚಾರದಲ್ಲಿ ರಾಯ ಭಾರ ಯಶಸ್ವಿಯಾದರೆ ಶಾಂತಿ ನೆಲೆಸು ತ್ತದೆ. ಇಲ್ಲದಿದ್ದರೆ ಯುದ್ಧಗಳಿಗೆ ಅವಕಾಶ ವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇಂದು ಸಾಮಾಜಿಕ ಮಾಧ್ಯಮಗಳ ಜೊತೆಗೆ ಸಂಪರ್ಕ ಕೂಡ ಬದಲಾಗಿದೆ. ಇಂದು ನಾವು ಏನು ಮಾಡಿದರೂ ಕ್ಷಣಾರ್ಧ ಧಲ್ಲಿ ಎಲ್ಲೆಡೆ ಗೊತ್ತಾಗುತ್ತದೆ. ಶಾಂತಿ ವಿಚಾರದಲ್ಲಿ ಭಾರತದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ದಕ್ಷಿಣ ಏಷಿಯಾದಲ್ಲಿ ವಿಯಟ್ನಾಂ, ಪಾಕಿಸ್ತಾನಗಳಿಗೆ ಹೋಲಿಸಿ ದರೆ ಶಾಂತಿಯಲ್ಲಿ ನಾವೇ ಅಗ್ರಗಣ್ಯರು. ಶಾಂತಿ ಸಂದೇಶ ಸಾರುವಲ್ಲಿ, ದೇಶಗಳ ಮಧ್ಯೆ ಶಾಂತಿಯ ಸೇತುವೆ ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸಾರ್ಕ್ ದೇಶಗಳಲ್ಲಿ ಸಿಂಗಾಪುರ್, ಮಲೇ ಶಿಯಾ, ವಿಯಟ್ನಾಂನಲ್ಲಿ ಶಾಂತಿ ಇದೆ. ಅದನ್ನು ನೋಡಿ ನಾವು ಕಲಿಯುವು ಅಗತ್ಯವಿದೆ. ಜಾಗತಿಕ ತಾಪಮಾನ ಏರಿಕೆ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿರುವ ನಾವೆಲ್ಲರೂ ಅದರ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ ಎಂದು ಹೇಳಿದರ.

ಶಾಂತಿ ಮಾತುಕತೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಒಟ್ಟಾಗಿ ಹೋಗದಿರುವ ಬಗ್ಗೆ ಸಭಿಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಮ್ಮು-ಕಾಶ್ಮೀರ, ಉಗ್ರವಾದ ಇನ್ನಿತರ ಸಮಸ್ಯೆ ಹೆಚ್ಚಾಗಿದೆ. ಜೊತೆಗೆ ಶಾಂತಿ ಎಂಬುದು ಪಾಕಿಸ್ತಾನದ ಕಡೆಯಿಂದಲೇ ಬರಬೇಕಿದೆ ಎಂದು ಅಭಿಪ್ರಾಯಪಟ್ಟರು.

Translate »