ಕಲಾಮಂದಿರದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯ
ಮೈಸೂರು

ಕಲಾಮಂದಿರದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯ

July 15, 2019

ಮೈಸೂರು,ಜು.14(ಎಸ್‍ಪಿಎನ್)-ಕಲಾಮಂದಿರ ಆವರಣ ದಲ್ಲಿ ಅಂತ್ರರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಎರಡೂ ಸಭಾಂಗಣದಲ್ಲಿ ಸೌಂಡ್ ಸಿಸ್ಟಮ್, ಆಸನ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಕರ್ಯವನ್ನು ಒದಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ ಭರವಸೆ ನೀಡಿದರು.

ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಅಪ್ರವರಂಬೆ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಆಯೋಜಿಸಿದ್ದ 2 ದಿನಗಳ `ಆಷಾಢ ರಂಗಸುಗ್ಗಿ’ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಅವರು ಮಾತನಾಡಿದರು.

ಕಲಾಮಂದಿರ ಆವರಣದಲ್ಲಿ ಉದ್ಯಾನವನ, ಪಾರ್ಕಿಂಗ್ ವ್ಯವಸ್ಥೆ, ಕಲಾವಿದರ ರಂಗತಾಲೀಮು ಕೊಠಡಿ ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಈಗಾಗಲೇ ನೋಟ್ ಬ್ಯಾಂಕ್ ಸಹಯೋಗದೊಂದಿಗೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳ ಲಾಗಿದೆ ಎಂದರು. ಹವ್ಯಾಸಿ ಕಲಾವಿದರಿಗೆ ರಾಜ್ಯ ಸರ್ಕಾರದ ವತಿಯಿಂದ ವಾದ್ಯಗಳನ್ನು ಕಲಿಸಿ ಉಚಿತವಾಗಿ ನೀಡುವುದು ಸೇರಿದಂತೆ ಅನೇಕ ಪ್ರೋತ್ಸಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆದ್ದರಿಂದ ಯುವ ಕಲಾವಿದರು ಈ ಅವಕಾಶವನ್ನು ಸದುಪ ಯೋಗ ಪಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಅಪ್ರವರಂಭೆ ಕಲಾತಂಡ 2009ರಲ್ಲಿ ಅಸ್ತಿತ್ವಕ್ಕೆ ಬಂದ ತಂಡ. ರಂಗಕಮ್ಮಟ, ರಂಗಪ್ರಯೋಗ, ನಾಟಕೋತ್ಸವ, ಮಕ್ಕಳ ರಂಗಭೂಮಿ, ರಂಗಭೂಮಿಗೆ ಸಂಬಂಧಪಟ್ಟ ವಿಚಾರ ಸಂಕಿ ರಣ ಹಾಗೂ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ಹಮ್ಮಿಕೊಂಡು ಬಂದಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ 2 ನಾಟಕಗಳನ್ನು ಪ್ರದರ್ಶಿಸಿ ಕಲಾರಸಿಕರ ಮನತಣಿಸಲು ಮುಂದಾಗಿರುವುದು ಮೆಚ್ಚುಗೆ ವಿಷಯ ಎಂದರು.

ಮೈಸೂರು ನಗರ ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಮಾತನಾಡಿ, ಮೈಸೂರಿನ 104 ಹಿರಿಯ ಕಲಾವಿದರಿಗೆ ಪಾಲಿಕೆ ವತಿಯಿಂದ ತಲಾ 10 ಸಾವಿರ ಗೌರವ ಧನ ನೀಡಲಾಗುತ್ತಿದೆ. ಟೌನ್ ಹಾಲ್ ಆವರಣದಲ್ಲಿ ವೃತ್ತಿ ಕಲಾವಿದರಿಗೆ ಅನುಕೂಲ ವಾಗುವಂತೆ ಕಿರುರಂಗ ಮಂದಿರ ಕಟ್ಟಲಾಗುತ್ತಿದೆ. ಒಟ್ಟಿನಲ್ಲಿ ಮೈಸೂರಿನ ಸಾಂಸ್ಕøತಿಕ ಹಿರಿಮೆಗೆ ನಗರಪಾಲಿಕೆ ಸದಾ ಪ್ರೋತ್ಸಾಹಿಸುತ್ತಿದೆ ಎಂದರು.

ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಕೆ.ಭೈರವಮೂರ್ತಿ ಮಾತನಾಡಿ, ಸಾಂಸ್ಕøತಿಕ ಚಟುವಟಿಕೆಗಳ ತಾಣವಾಗಲು ಮೈಸೂರು ರಾಜಮನೆತನದ ಕೊಡುಗೆ ಅಪಾರ. ಈ ಪರಂಪರೆ ಯನ್ನು ಸಂಘ-ಸಂಸ್ಥೆಗಳು ಇಂದಿಗೂ ಮುನ್ನಡೆಸುತ್ತಿವೆ ಎಂದ ಅವರು, ಅಪ್ರವರಂಭೆ ಕಲಾತಂಡ ಹಲವು ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ಉತ್ತಮ ಎಂದರು.

ಡಾ.ಹೆಚ್.ಎಸ್.ರುದ್ರೇಶ್ ರಚಿತ ನಾಟಕ ಪಾಂಚಾಲಿ ಇಂದು ಪ್ರದರ್ಶನಗೊಂಡಿತು. ಈ ನಾಟಕದ ರಂಗವಿನ್ಯಾಸ-ನಿರ್ದೇಶನ ಎನ್.ಧನಂಜಯ್, ನಿರ್ಮಾಣ-ನಿರ್ವಹಣೆ ಹಿರಿಯ ರಂಗಕರ್ಮಿ ನಾ.ನಾಗಚಂದ್ರ, ರಂಗನಿರ್ವಹಣೆ ರಮೇಶ್ ಬಾಬು ಗುಬ್ಬಿ ನಿರ್ವಹಿಸಿದ್ದು, ಸಂಗೀತ ನಿರ್ದೇಶನ ವೈ.ಎಂ. ಪುಟ್ಟಣ್ಣಯ್ಯ, ತಬಲ ಎಸ್.ಜಯರಾಂ, ಹಿನ್ನೆಲೆಗಾಯನ ಸಾಗರ್‍ಚಕ್ರವರ್ತಿ, ಹೆಚ್.ಎಸ್.ಕವಿತಾ, ಹಾಡುಗಳು ನಾಗ ಚಂದ್ರ, ಬೆಳಕು ಮಹೇಶ್ ಕಲ್ಲತ್ತಿ, ರಂಗಸಜ್ಜಿಕೆ ಕೆ.ನರಸಿಂಹ ಕುಮಾರ್, ವಸ್ತ್ರವಿನ್ಯಾಸ ಮತ್ತು ಪ್ರಸಾಧನ ಅಶ್ವತ್ಥ ಕದಂಬ, ಸಹಾಯ ನಾಗೇಶ್ ನೇಪಥ್ಯದಲ್ಲಿದ್ದಾರೆ.

ತಾರಾಂಗಣದಲ್ಲಿ ದ್ರೌಪದಿ ಪ್ರಾತ್ರದಲ್ಲಿ ಬಿ.ಜೆ.ತಾರಾ, ಬಿ.ಸಿ.ಭವ್ಯ, ಧರ್ಮರಾಯ ರಮೇಶಬಾಬು ಗುಬ್ಬಿ, ಭೀಮನ ಪಾತ್ರದಲ್ಲಿ ಬೆನಕ ನಾಗರಾಜ್, ಅರ್ಜುನನ ಪಾತ್ರದಲ್ಲಿ ಮಂಜೇಶ್, ಇತರೆ ಪಾತ್ರಗಳಲ್ಲಿ ಟಿ.ಹೆಚ್.ಸದಾಶಿವಮೂರ್ತಿ, ಎಂ.ಪ್ರದೀಪ, ಸಿ.ಹರ್ಷಿಣಿ, ಯು.ಎಸ್. ರಾಮಣ್ಣ, ಎಂ.ಎ. ನಾಗೇಂದ್ರ, ರಾಜಶೇಖರ ಕದಂಬ, ವಿ.ವಿ.ವಿನೋದಕುಮಾರ್, ಆರ್.ಫಣೀಂದ್ರಕುಮಾರ್, ಹೆಚ್.ಎಸ್.ಮಲ್ಲಿಕಾರ್ಜುನಶಾಸ್ತ್ರಿ, ಡಾ.ಕಿಕ್ಕೇರಿ ವೀರನಾರಾಯಣ, ಮಹಾದೇವ ತಲಕಾಡು, ಕೆ.ನರಸಿಂಹ ಕುಮಾರ್, ಜಿ.ಸುಬ್ಬನರಸಿಂಹ ಸೇರಿದಂತೆ ಇತರರಿದ್ದರು.

ಜು.15 ರಂದು ವಿ.ಎಸ್.ಅಶ್ವತ್ಥ್ ರಚಿತ ಹಾಸ್ಯ ನಾಟಕ ಶ್ರೀಕೃಷ್ಣಸಂಧಾನ ನಾಟಕ ಪ್ರದರ್ಶನವಾಗಲಿದೆ. ತಾರಾಂಗಣ ದಲ್ಲಿ ಆರ್.ತೇಜಸ್ ಪ್ರಸಾದ್, ಚಂದ್ರು, ಪಿ.ನಾಗಭೂಷಣ್, ಅಪೂರ್ವ ಪಿ.ಕಶ್ಯಪ್, ಎಸ್.ಕೆ.ಸುಬ್ಬಣ್ಣ, ಮೋಹನ್‍ರಾಜ್ ಶೆಟ್ಟಿ, ವರುಣ ಕುಮಾರ್, ರಂಜನ್‍ಶೆಟ್ಟಿ, ಎಂ.ಸಿ.ದೇವರಾಜ್, ನಾಗಚಂದ್ರ, ಸಂದೇಶ್, ಜಿ.ಸುಬ್ಬನರಸಿಂಹ, ಆರ್.ಜಗದೀಶ್ ಇದ್ದರು. ರಂಗದ ಹಿಂದೆ ವಸ್ತ್ರ ವಿನ್ಯಾಸ ಮತ್ತು ಪ್ರಸಾದನ ಅಶ್ವತ್ಥ ಕದಂಬ, ಬೆಳಕು ರಮೇಶ್ ಬಾಬು ಗುಬ್ಬಿ, ಸಂಗೀತ ಕಿರಗಸೂರು ರಾಜಪ್ಪ, ತಬಲ ಕೆ.ರಂಗಸ್ವಾಮಿ, ನಿರ್ದೇಶನ ಬಿ.ರೇಣುಕಾ ಪ್ರಸಾದ್, ನಿರ್ಮಾಣ-ನಿರ್ವಹಣೆ ನಾ.ನಾಗಚಂದ್ರ ಇದ್ದಾರೆ.

Translate »