ಬಿವಿಬಿಯಿಂದ 1 ವರ್ಷದ ಪತ್ರಿಕೋದ್ಯಮ ಪಿಜಿ ಡಿಪ್ಲೊಮಾ ಕೋರ್ಸ್ ಆರಂಭ
ಮೈಸೂರು

ಬಿವಿಬಿಯಿಂದ 1 ವರ್ಷದ ಪತ್ರಿಕೋದ್ಯಮ ಪಿಜಿ ಡಿಪ್ಲೊಮಾ ಕೋರ್ಸ್ ಆರಂಭ

September 17, 2019

ಮೈಸೂರು, ಸೆ.16(ಎಂಟಿವೈ)- ಮೈಸೂರಿನ ವಿಜಯನಗರದ ಮೊದಲ ಹಂತದಲ್ಲಿರುವ ಭಾರ ತೀಯ ವಿದ್ಯಾ ಭವನದ(ಬಿವಿಬಿ) ಮೈಸೂರು ಕೇಂದ್ರ ದಲ್ಲಿ ಈ ಶೈಕ್ಷಣಿಕ ಸಾಲಿನಿಂದ ಒಂದು ವರ್ಷದ `ಸ್ನಾತಕೋತ್ತರ ಡಿಪ್ಲೊಮಾ ಇನ್ ಜರ್ನಲಿಸಂ’ ಕೋರ್ಸ್ ಆರಂಭಿಸುತ್ತಿರುವುದಾಗಿ ಬಿವಿಬಿ ಮೈಸೂರು ಕೇಂದ್ರÀದ ಅಧ್ಯಕ್ಷ ಪ್ರೊ. ಎ.ವಿ. ನರಸಿಂಹ ಮೂರ್ತಿ ಇಂದಿಲ್ಲಿ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ವಿದ್ಯಾಭವನ 1938ರಲ್ಲಿ ಕುಲಪತಿ ಕೆ.ಎಂ. ಮುನ್ಸಿಯ ಅವರಿಂದ ಸ್ಥಾಪಿತವಾಗಿದ್ದು, ದೇಶಾದ್ಯಂತ ನೂರಾರು ಕೇಂದ್ರ ಹೊಂದಿದೆ. ಎಲ್‍ಕೆಜಿಯಿಂದ ಸ್ನಾತ ಕೋತ್ತರ ವೃತ್ತಿ ಶಿಕ್ಷಣದವರೆಗೆ ಗುಣಮಟ್ಟದ ಶಿಕ್ಷಣ, ಭಾರತೀಯ ಸಂಸ್ಕøತಿ, ಕಲೆ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಮೈಸೂರಿನ ಭಾರತೀಯ ವಿದ್ಯಾಭವನ ದಲ್ಲಿ ಎರಡು ದಶಕಗಳಿಂದ ಗುಣಮಟ್ಟದ ಶಿಕ್ಷಣ ನೀಡ ಲಾಗುತ್ತಿದೆ. ಕಳೆದ 6-7 ವರ್ಷಗಳಿಂದಲೂ ಎಸ್‍ಎಸ್ ಎಲ್‍ಸಿ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಗೆ ಶೇ.100 ರಷ್ಟು ಫಲಿತಾಂಶ ಬಂದಿದೆ. ಪ್ರಿಯಂವಧಾ ಬಿರ್ಲಾ ಇನ್ಸ್‍ಸ್ಟಿ ಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಿಂದ ಪಿಜಿಡಿಎಂ ಕೋರ್ಸ್, ನೃತ್ಯ, ಕಲೆಗಳ ಕೋರ್ಸ್ ಹಾಗೂ ಜಪಾನೀಸ್ ಭಾಷೆ ಕಲಿಸುವ ಕೋರ್ಸ್‍ನ್ನು ನಡೆಸಲಾಗುತ್ತಿತ್ತು. ಈ ಎಲ್ಲಾ ಕೋರ್ಸ್‍ಗಳಿಗೂ ಉತ್ತಮ ಬೇಡಿಕೆ ಇದೆ. ಇದೀಗ ಹೊಸದಾಗಿ ಒಂದು ವರ್ಷದ ಸ್ನಾತಕೋ ತ್ತರ ಡಿಪ್ಲೊಮಾ ಇನ್ ಜರ್ನಲಿಸಂ ಕೋರ್ಸ್ ಆರಂಭಿಸಲಾಗುತ್ತಿದೆ ಎಂದರು.

ಪತ್ರಿಕೋದ್ಯಮದ ಡಿಪ್ಲೊಮಾ ಕೋರ್ಸ್‍ಗೆ ದಾಖ ಲಾಗುವ ವಿದ್ಯಾರ್ಥಿಗಳಿಗೆ ಪ್ರಸ್ತುತ ವಿಶ್ವದಾದ್ಯಂತ ಪತ್ರಿಕೋದ್ಯಮ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನದ ಬದಲಾವಣೆ, ವೃತ್ತಿಪರತೆ, ಹೊಸ ತಂತ್ರಜ್ಞಾನ ಪರಿಚಯ, ಸಂವ ಹನ, ಭಾಷಾ ಕಲಿಕೆ, ವರದಿಗಾರಿಕೆ, ವಿದ್ಯುನ್ಮಾನ ಮಾಧÀ್ಯಮಗಳ ಸ್ಥೂಲ ಪರಿಚಯ, ವೆಬ್ ಜರ್ನಲಿಸಂ, ಸೋಷಿಯಲ್ ಮೀಡಿಯಾ ಮ್ಯಾನೇಜ್‍ಮೆಂಟ್, ಕಾನೂನು ಜ್ಞಾನದ ಪರಿಚಯವನ್ನು ಮಾಡಿಕೊಡ ಲಾಗುತ್ತದೆ ಎಂದು ವಿವರಿಸಿದರು.

ಜಪಾನೀಸ್ ಭಾಷಾ ಕಲಿಕೆಯ ಮೂರನೇ ಬ್ಯಾಚ್: ಜಪಾನೀಸ್ ಭಾಷೆ ಕಲಿಸುವ ಎರಡು ಬ್ಯಾಚ್ ಪೂರ್ಣ ಗೊಂಡಿದ್ದು, ಮೂರನೇ ಬ್ಯಾಚ್‍ಗೆ ಭಾಷೆ ಕಲಿಸುವ ಕಾರ್ಯ ಶೀಘ್ರದಲ್ಲಿಯೇ ಆರಂಭಿಸಲಾಗುತ್ತದೆ ಎಂದು ಭಾರತೀಯ ವಿದ್ಯಾಭವನದ ಜಪಾನೀಸ್ ಭಾಷಾ ಕಲಿಕಾ ಕೇಂದ್ರದ ಪ್ರೊ.ವಾಣಿ ತಿಳಿಸಿದ್ದಾರೆ.

ಆಟೋಮೊಬೈಲ್ ಕ್ಷೇತ್ರದಲ್ಲಿ ಜಪಾನ್ ಮುಂಚೂಣಿ ಯಲ್ಲಿದ್ದು, ಹಲವು ಸಂಸ್ಥೆಗಳು ಭಾರತ-ಜಪಾನ್ ಸಹಯೋಗದಲ್ಲಿ ನಡೆಯುತ್ತಿವೆ. ಕೈಗಾರಿಕಾ ತರಬೇತಿ, ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆಯಲು, ಉದ್ಯೋಗ ಹಾಗೂ ಶಿಕ್ಷಣದ ಉದ್ದೇಶದಿಂದ ಜಪಾನ್‍ಗೆ ಹೋಗುವ ಭಾರತೀಯರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಪಾನೀಸ್ ಭಾಷೆ ಕಲಿತರೆ ಸುಗಮ ಹಾಗೂ ಪರಿಣಾಮಕಾರಿಯಾಗಿ ವ್ಯವಹಾರ ನಡೆ ಸಲು ಸಾಧ್ಯವಾಗುತ್ತದೆ. 20 ವಾರಗಳ ಈ ಭಾಷಾ ಕಲಿಕಾ ಕೋರ್ಸ್‍ಗೆ ಉತ್ತಮ ಬೇಡಿಕೆಯಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಭಾರತೀಯ ವಿದ್ಯಾಭವನದ ನಿರ್ದೇಶಕ ಡಾ.ಎ.ಟಿ.ಭಾಷ್ಯಂ, ಪತ್ರಿಕೋದ್ಯಮ ಕೋರ್ಸ್ ನಿರ್ದೇಶಕ ಎನ್.ಎಸ್.ಶ್ರೀಧರ ಮೂರ್ತಿ ಇದ್ದರು.

Translate »