* ಆಸಕ್ತ ವಿದ್ಯಾರ್ಥಿಗಳು, ಸಾರ್ವಜನಿಕರು ಕೋರ್ಸ್ಗೆ ಪ್ರವೇಶ ಪಡೆಯಬಹುದು
* ಕನ್ನಡ ಮಾಧ್ಯಮದ ವಿಜ್ಞಾನ, ವಾಣಿಜ್ಯ ಪ್ರವೇಶಕ್ಕೆ ಸರ್ಕಾರಿ ಶುಲ್ಕ ಭರಿಸಿದರೆ ಸಾಕು
ಮೈಸೂರು, ಜ.16(ಪಿಎಂ)- ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾದ (ಇಸಿಐಎಲ್) ಶಾಖೆಯಾದ ಇಸಿಐಟಿ ಸಹಯೋಗ ದಲ್ಲಿ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕøತಿಕ ಸಂಸ್ಥೆಯು ಕಂಪ್ಯೂಟರ್ ತರಬೇತಿ ಕೋರ್ಸ್ಗಳನ್ನು ಜನಸಾಮಾನ್ಯರಿಗಾಗಿ ಮೈಸೂರಿನ ರಾಮಕೃಷ್ಣನಗರದಲ್ಲಿ ರುವ ಸಂಸ್ಥೆಯ ನೃಪತುಂಗ ಕನ್ನಡ ಶಾಲೆ ಹಾಗೂ ಕಾಲೇಜಿನ ಗಣಕ (ಕಂಪ್ಯೂಟರ್) ಪ್ರಯೋಗಾಲಯ ದಲ್ಲಿ ಕಂಪ್ಯೂಟರ್ ತರಬೇತಿ ಕೋರ್ಸ್ ಆರಂಭಿಸುತ್ತಿದೆ.
ಈ ಸಂಬಂಧ ಸಂಸ್ಥೆಯ ಗಣಕ ಪ್ರಯೋಗಾಲಯ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಸ.ರ.ಸುದರ್ಶನ, ನಮ್ಮ ಗಣಕ ಪ್ರಯೋಗಾಲಯದಲ್ಲಿ 40 ಕಂಪ್ಯೂಟರ್ಗಳ ಸೌಲಭ್ಯವಿದೆ. ಜ.20ರಂದು ಬೆಳಿಗ್ಗೆ 11.30ಕ್ಕೆ ಕಂಪ್ಯೂ ಟರ್ ತರಬೇತಿ ಕೋರ್ಸ್ಗಳ ಆರಂಭಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಸಲಹೆಗಾರ ಡಾ.ಅ.ಮೈ.ಸುಧಾಕರ್ ಮಾತನಾಡಿ, ಇಸಿಐಟಿ ಇಡೀ ದೇಶದಲ್ಲಿ ಕೈಗೆಟಕುವ ಶುಲ್ಕದಲ್ಲಿ ಕಂಪ್ಯೂಟರ್ ಶಿಕ್ಷಣ ನೀಡುತ್ತಿದೆ. ಅದಕ್ಕಾಗಿ ದೇಶದಲ್ಲಿ 40ಕ್ಕೂ ಹೆಚ್ಚು ಶಾಖೆಗಳನ್ನು ಆರಂಭಿಸಿದೆ. ತರಬೇತಿ ಬಳಿಕ ಪರೀಕ್ಷೆ ನಡೆಸಿ, ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಇದೆ. ಈ ಸಂಸ್ಥೆ ನೀಡುವ ಪ್ರಮಾಣ ಪತ್ರಕ್ಕೆ ದೇಶದಾದ್ಯಂತ ಹೆಚ್ಚಿನ ಮಾನ್ಯತೆ ಇದೆ ಎಂದರು.
ಇಲ್ಲಿ ಆಫೀಸ್ ಆಟೋಮೇಷನ್, ಸಿ, ಸಿ++, ಜಾವಾ, ಡಿಟಿಪಿ, ಡೇಟಾ ಎಂಟ್ರಿ, ಪೈಥಾನ್ ಮೊದಲಾದ ಕೋರ್ಸ್ ಗಳನ್ನು ಆರಂಭಿಸಲಾಗುವುದು. ತರಬೇತಿ ವೇಳೆ ವಿವರಣೆ ನೀಡುವಾಗ ಕನ್ನಡದಲ್ಲೂ ತಿಳಿಸಿಕೊಡಲಾಗುವುದು. ವಿವರ ಗಳಿಗೆ ನೃಪತುಂಗ ವಿದ್ಯಾಸಂಸ್ಥೆಯ ಗಣಕ ಪ್ರಯೋಗಾ ಲಯಕ್ಕೆ ಕಚೇರಿ ವೇಳೆಯಲ್ಲಿ ಭೇಟಿ ನೀಡಬಹುದು. ತರಬೇತಿ ಫೆ.3ರಿಂದ ಪ್ರಾರಂಭವಾಗಲಿದ್ದು, ವಿವರ ಗಳಿಗೆ ಮೊ.7795206240 ಸಂಪರ್ಕಿಸಿ ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಪ.ಮಲ್ಲೇಶ್ ಮಾತನಾಡಿ, ದಿಟ್ಟ ನಿರ್ಧಾರದೊಂದಿಗೆ ಕಳೆದ ಶೈಕ್ಷಣಿಕ ಸಾಲಿನಿಂದ ನೃಪತುಂಗ ಪದವಿಪೂರ್ವ ಕಾಲೇಜು ಆರಂಭಿಸಿ, ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳನ್ನು ಪರಿಚಯಿಸಲಾಯಿತು. ವಿಜ್ಞಾನದಲ್ಲಿ ಐವರು ಹಾಗೂ ವಾಣಿಜ್ಯದಲ್ಲಿ 20 ಮಂದಿ ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಶೈಕ್ಷಣಿಕ ಸಾಲಿ ನಲ್ಲಿ ಸರ್ಕಾರ ನಿಗದಿ ಮಾಡಿದ ಶುಲ್ಕ ಸುಮಾರು 1 ಸಾವಿರ ರೂ. ಪಡೆದು ಪ್ರವೇಶ ನೀಡಲಾಗಿತ್ತು ಎಂದರು.
ಪಿಯುಸಿಯಲ್ಲಿ ಮಾತೃಭಾಷೆಯಲ್ಲಿ ವಿಜ್ಞಾನ ಬೋಧಿಸು ತ್ತಿರುವ ಏಕೈಕ ಕಾಲೇಜು ನಮ್ಮದು. ಕನ್ನಡದಲ್ಲಿ ಪಾಠ ಮಾಡುವ ಉಪನ್ಯಾಸಕರ ಕೊರತೆ ಮೊದಮೊದಲು ಕಾಡಿತಾದರೂ ನಮ್ಮದೇ ಗೆಳೆಯರ ಬಳಗದ ಶಿಕ್ಷಕ ವರ್ಗದ ಸಹಕಾರದೊಂದಿಗೆ ಅದನ್ನು ನೀಗಿಸಿ ಮುಂದೆ ಸಾಗಿದ್ದೇವೆ. ಯಾವುದೇ ವೇತನ ಹಾಗೂ ಗೌರವಧನ ವನ್ನೂ ಅಪೇಕ್ಷಿಸದೆ ನಮಗೆ ಸಹಕಾರ ನೀಡಿದ್ದಾರೆ. ಖಾಯಂ ಉಪನ್ಯಾಸಕ ವರ್ಗ ಹೊಂದಲು ಹಾಗೂ ಸಂಸ್ಥೆ ನಿರ್ವಹಣೆಗೆ ಆದಾಯ ಮೂಲವೂ ಆಗಲೆಂದು ಕಂಪ್ಯೂಟರ್ ತರಬೇತಿ ಕೋರ್ಸ್ಗಳನ್ನು ಆರಂಭಿಸಲಾಗು ತ್ತಿದೆ ಎಂದರು. ಸಂಸ್ಥೆಯ ಖಜಾಂಚಿ ನಾ.ನಾಗಚಂದ್ರ, ಧರ್ಮದರ್ಶಿ ಎಂ.ಬಿ.ವಿಶ್ವನಾಥ್ ಇತರರಿದ್ದರು.